| ರಾಘವ ಶರ್ಮ ನಿಡ್ಲೆ ನವದೆಹಲಿ
ಭಾರತದಲ್ಲಿ ಮೆಕಾಲೆ ಶಿಣ ಪದ್ಧತಿ ಅನುಸರಿಸತೊಡಗಿ 2035ಕ್ಕೆ 200 ವರ್ಷ ಪೂರ್ಣಗೊಳ್ಳಲಿದೆ. 2035ರ ಒಳಗೆ ಇಂಗ್ಲಿಷ್​ ಸಂಚಾಲಿತ ಭಾರತವನ್ನು ಭಾರತ ಭಾಷಾ ಸಂಚಾಲಿತ ವ್ಯವಸ್ಥೆಗೆ ತೆರೆದುಕೊಳ್ಳುವಂತೆ ಮಾಡಬೇಕು ಎಂಬ ಉದ್ದೇಶ ಕೇಂದ್ರ ಶಿಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಭಾರತೀಯ ಭಾಷೆಗಳ ಉನ್ನತ ಸಮಿತಿಯದ್ದಾಗಿದೆ. ಈ ನಿಟ್ಟಿನಲ್ಲಿ ಪೂರಕ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಲ್ಲಿ ಸಮಿತಿ ತೊಡಗಿದೆ.
ಭಾರತೀಯ ಭಾಷೆಗಳ ಬೆಳವಣಿಗೆಗೆ ದೇಶದ ಆಡಳಿತ, ಕಾನೂನು, ಶಿಣ ಸೇರಿದಂತೆ ಬಹುಪಾಲು ಕ್ಷೇತ್ರಗಳಲ್ಲಿ ಭಾರತೀಯ ಭಾಷೆಗಳ ಅಳವಡಿಕೆ ಅತ್ಯಗತ್ಯ. ಹೀಗಾಗಿಯೇ, ಕೆಲ ದಿನಗಳ ಹಿಂದೆ ನಡೆದ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಭೆ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದ ನ್ಯಾಯಾಲಯಗಳ ಕಲಾಪ ಪ್ರಾಂತೀಯ ಭಾಷೆಗಳಲ್ಲಿ ನಡೆಯಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ, “ಸ್ಥಳಿಯ ಭಾಷೆಗಳ ಅಳವಡಿಕೆಯಂತಹ ಸುಧಾರಣೆಗಳು ಒಂದು ದಿನದಲ್ಲಿ ಆಗುವಂಥದ್ದಲ್ಲ. ಲಾಜಿಸ್ಟಿಕ್ಸ್​ ತೊಂದರೆಗಳು, ಸವಾಲುಗಳಿಂದಾಗಿ ಸಮಯ ಬೇಕು. ಕೆಲವು ನ್ಯಾಯಾಧೀಶರಿಗೆ ಸ್ಥಳಿಯ ಭಾಷೆಯ ಪರಿಚಯವಿರುವುದಿಲ್ಲ. ಮುಖ್ಯ ನ್ಯಾಯಮೂರ್ತಿಗಳು ಯಾವಾಗಲೂ ಅನ್ಯ ರಾಜ್ಯದವರೇ ಆಗಿರುತ್ತಾರೆ. ಅಲ್ಲದೆ, ಹೆಚ್ಚಿನ ಹಿರಿಯ ನ್ಯಾಯಾಧೀಶರೂ ಹೊರ ರಾಜ್ಯದವರಾಗಿರುತ್ತಾರೆ. ಪ್ರಾದೇಶಿಕ ಭಾಷೆಯ ಅನುಷ್ಠಾನದಲ್ಲಿ ಹಲವಾರು ಅಡೆತಡೆ-ಅಡಚಣೆಗಳಿವೆ’ ಎಂದಿದ್ದರು.
ನ್ಯಾಯಾಲಯಗಳ ಕಲಾಪಗಳನ್ನು ಪ್ರಾಂತೀಯ ಭಾಷೆಗಳಲ್ಲಿ ನಡೆಸಬೇಕು ಎನ್ನುವುದು ಇಂದು ನಿನ್ನೆಯ ಬೇಡಿಕೆಯಲ್ಲ. ರಾಜ್ಯಗಳಲ್ಲಿ ಹೈಕೋರ್ಟ್​ ಕಲಾಪಗಳನ್ನು ಸ್ಥಳಿಯ ಭಾಷೆಗಳಲ್ಲೆ ನಡೆಸಬೇಕು ಎಂದು ಒತ್ತಾಯಿಸಿ ದಿಲ್ಲಿಯಲ್ಲೂ ಪ್ರತಿಭಟನೆಗಳು ನಡೆದರೂ, ಹೆಚ್ಚಿನ ಪ್ರಯೋಜನವಾಗಿಲ್ಲ. ಆದರೆ, ಕೇಂದ್ರ ಸರ್ಕಾರವೇ ಈಗ ಪ್ರಾದೇಶಿಕ ಭಾಷೆಗಳ ಬಳಕೆಗೆ ಒತ್ತು ನೀಡಿರುವುದು ಹಾಗೂ ಭಾರತೀಯ ಭಾಷಾ ಸಮಿತಿ ಕೂಡ ಈ ದಿಕ್ಕಿನಲ್ಲಿ ಕಾಯೋರ್ನ್ಮುಖವಾಗಿರುವುದು ಗಮನಾರ್ಹ ಬೆಳವಣಿಗೆ.
ಸಮಿತಿಯಿಂದ ಅಧ್ಯಯನ:ಕೋರ್ಟುಗಳಲ್ಲಿ ಪ್ರಾಂತೀಯ ಭಾಷೆಗಳ ಅಳವಡಿಕೆಗೆ ವಕೀಲರು ಮತ್ತು ನ್ಯಾಯಾಧೀಶರೂ ಮನಸ್ಸು ಮಾಡಬೇಕು. ದಾಖಲೆ&ದಸ್ತಾವೇಜುಗಳು ಪ್ರಾಂತೀಯ ಭಾಷೆಯಲ್ಲಿ ಸಿದ್ಧವಾಗಬೇಕು. ಇದಕ್ಕೆ ಅನುವಾದಕರು ಬೇಕಲ್ಲವೆ? ಅವರಿಗೆ ಕಾನೂನು ಜ್ಞಾನವಿರುವುದೂ ಅಷ್ಟೇ ಮುಖ್ಯ. ಅದು ಸಾಧ್ಯವಾಗಬೇಕೆಂದರೆ ಕಾನೂನು ಶಿಣ ಪ್ರಾಂತೀಯ ಭಾಷೆಗಳಲ್ಲೂ ಇರಬೇಕು. ಇದನ್ನು ಸಾಧ್ಯಗೊಳಿಸುವ ಬಗೆ ಹೇಗೆಂಬ ಬಗ್ಗೆ ಸಮಿತಿ ಅಧ್ಯಯನ ನಡೆಸುತ್ತಿದೆ ಮತ್ತು ಕೇಂದ್ರ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಲಿದೆ ಎನ್ನುತ್ತಾರೆ ಭಾರತೀಯ ಭಾಷಾ ಸಮಿತಿ ಮುಖ್ಯಸ್ಥರಾದ ಚ.ಮೂ. ಕೃಷ್ಣಶಾಸಿ. ಅದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಪರೀೆಗಳನ್ನು ನಡೆಸುವ ಕಾನೂನು ವಿಶ್ವವಿದ್ಯಾಲಯಗಳು ಮತ್ತು ಪಠ್ಯಕ್ರಮ ಸಿದ್ಧಪಡಿಸುವ ಬಾರ್​ ಕೌನ್ಸಿಲ್​ ಆಫ್​ ಇಂಡಿಯಾದೊಂದಿಗೆ ಸಮಿತಿ ಸಮಾಲೋಚನೆ ನಡೆಸಿ, ಅಭಿಪ್ರಾಯಗಳನ್ನು ಪಡೆದುಕೊಳ್ಳಲಿದೆ.
ಸಾಂವಿಧಾನಿಕ ಬಾಧಕ ಇಲ್ಲ:ಹೈಕೋರ್ಟ್​ ಕಲಾಪಗಳಲ್ಲಿ ಪ್ರಾದೇಶಿಕ ಭಾಷೆ ಜಾರಿ ಕಬ್ಬಿಣದ ಕಡಲೆಯಾಗಿ ಕಂಡುಬಂದರೂ ಸಾಂವಿಧಾನಿಕ ದೃಷ್ಟಿಯಿಂದ ಅಂತಹ ಕ್ಲಿಷ್ಟ ವಿಷಯವೇನಲ್ಲ ಎನ್ನುತ್ತಾರೆ ಸುಪ್ರೀಂಕೋರ್ಟ್​ ವಕೀಲ ರಾವೇಂದ್ರ ಶ್ರೀವತ್ಸ. ಸಂವಿಧಾನದ ಅನುಚ್ಛೇದ 348ರ ಪ್ರಕಾರ ಸಂಸತ್ತು ಕಾನೂನು ರೂಪಿಸಿ ಅನ್ಯಥಾ ಸೂಚಿಸುವವರೆಗೂ ಸುಪ್ರೀಂಕೋರ್ಟ್​ ಹಾಗೂ ಹೈಕೋರ್ಟ್​ ಕಲಾಪಗಳು ಇಂಗ್ಲಿಷ್​ ನಲ್ಲಿರಬೇಕು. ಅದೇ ಅನುಚ್ಛೇದದ 2ನೇ ಭಾಗದಲ್ಲಿ ಉಚ್ಚ ನ್ಯಾಯಾಲಯಗಳಲ್ಲಿ ಪ್ರಾದೇಶಿಕ ಭಾಷೆಯ ಬಳಕೆಗೆ ಅನುವು ಮಾಡಿಕೊಡಲಾಗಿದೆ. ರಾಷ್ಟ್ರಪತಿಗಳ ಪೂರ್ವಾನುಮೋದನೆಯೊಂದಿಗೆ ರಾಜ್ಯಪಾಲರು ಆ ರಾಜ್ಯದಲ್ಲಿನ ಹೈಕೋರ್ಟಿನಲ್ಲಿ ಸ್ಥಳಿಯ ಭಾಷೆಯ ಉಪಯೋಗಕ್ಕೆ ಅವಕಾಶ ಮಾಡಿಕೊಡಬಹುದು. ಇಂತಹ ಪ್ರಸ್ತಾವನೆಗಳನ್ನು ಹಿಂದೆ ಸಲ್ಲಿಸಲಾಗಿತ್ತಾದರೂ ಕಾರ್ಯರೂಪಕ್ಕೆ ಬರಲಿಲ್ಲ. ಇದಕ್ಕೆ 1965ರ ಕೇಂದ್ರ ಸಂಪುಟ ಸಮಿತಿಯ ಅಭಿಪ್ರಾಯವೊಂದು ಅಡ್ಡಿಯುಂಟುಮಾಡಿದೆ. ಹೈಕೋರ್ಟುಗಳಲ್ಲಿ ಪ್ರಾದೇಶಿಕ ಭಾಷೆಗೆ ಅವಕಾಶವಿರಬೇಕಾದರೆ ಸುಪ್ರೀಂಕೋರ್ಟಿನ ಸಮ್ಮತಿ ಅತ್ಯವಶ್ಯ ಎಂದು ಆ ಸಮಿತಿ ಅಭಿಪ್ರಾಯಪಟ್ಟಿತ್ತು. ಎರಡು ಬಾರಿ ಸುಪ್ರೀಂಕೋರ್ಟ್​ ಅಂತಹ ಪ್ರಸ್ತಾವನೆಯನ್ನು ನಿರಾಕರಿಸಿದೆ. ಆದರೆ ಅಂದಿನ ಕೇಂದ್ರ ಸಂಪುಟ ಸಮಿತಿಯ ಅಂತಹ ಅಭಿಪ್ರಾಯ ತಪ್ಪು ಎಂಬುದು ಸಂವಿಧಾನದಿಂದಲೇ ಸ್ಪಷ್ಟವಾಗುತ್ತದೆ. ಹೈಕೋರ್ಟುಗಳಲ್ಲಿ ಪ್ರಾದೇಶಿಕ ಭಾಷೆಯ ಉಪಯೋಗಕ್ಕೆ ಸುಪ್ರೀಂಕೋರ್ಟಿನ ಸಮ್ಮತಿ ಅವಶ್ಯವೆಂಬ ಕಟ್ಟಳೆ ಸಂವಿಧಾನದಲ್ಲಿ ಇಲ್ಲ. ಸಂವಿಧಾನದಡಿ ಇರುವ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇವಲ ನ್ಯಾಯಿಕ ವಿಚಾರಗಳಲ್ಲಿ ರಾಜ್ಯಗಳ ಹೈಕೋರ್ಟುಗಳು ದೇಶದ ಸುಪ್ರೀಂಕೋರ್ಟಿಗೆ ಅಧೀನವಾಗಿರುತ್ತವೆ. ಅರ್ಥಾತ್​ ಹೈಕೋರ್ಟುಗಳ ತೀರ್ಪುಗಳಲ್ಲಿನ ತಪ್ಪುಗಳನ್ನು ಮೇಲ್ಮನವಿ ಮೂಲಕ ಸುಪ್ರೀಂ ಕೋರ್ಟ್​ ಸರಿಪಡಿಸುವ ವ್ಯವಸ್ಥೆಯಿದ್ದರೂ ಆಡಳಿತಾತ್ಮಕವಾಗಿ ಹೈಕೋರ್ಟುಗಳೂ ಸಾಂವಿಧಾನಿಕ ಸಂಸ್ಥೆಗಳಾಗಿ ಅಧೀನ ನ್ಯಾಯಾಲಯಗಳಾಗಿರುವುದಿಲ್ಲ. ಆದ್ದರಿಂದ ಸಂವಿಧಾನದ ಅನುಚ್ಛೇದ 348(2) ರ ಪ್ರಕಾರ ಹೈಕೋರ್ಟುಗಳಲ್ಲಿ ಪ್ರಾದೇಶಿಕ ಭಾಷಾ ಉಪಯೋಗಕ್ಕೆ ಅವಕಾಶ ಕಲ್ಪಿಸಲು ಸಾಂವಿಧಾನಿಕ ಬಾಧಕವೇನೂ ಇಲ್ಲ ಎಂದು ವಿವರಿಸುತ್ತಾರೆ ರಾವೇಂದ್ರ ಶ್ರೀವತ್ಸ.
ದೇಶದ ಹಲವಾರು ಕೆಳ ನ್ಯಾಯಾಲಯಗಳಲ್ಲಿ ಸ್ಥಳಿಯ ಭಾಷೆಗಳಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಪೂರ್ಣ ಪ್ರಮಾಣದಲ್ಲೆನೂ ಅದನ್ನು ಅಳವಡಿಸಿಲ್ಲ. ಹೈಕೋರ್ಟ್​ಗಳಲ್ಲಿ ಇಂಗ್ಲಿಷ್​ ಭಾಷೆಯಲ್ಲೆ ವಾದ&ಪ್ರತಿವಾದ, ತೀರ್ಪುಗಳನ್ನು ನೀಡುವುದು ರೂಢಿಗತವಾಗಿರುವುದರಿಂದ ಪ್ರಾಂತೀಯ ಭಾಷೆಗಳ ಅಳವಡಿಕೆಗೆ ಮಹತ್ವ ಸಿಕ್ಕಿಲ್ಲ. “ಅನೇಕ ಸರ್ವೀಸ್​ ಕೇಸುಗಳ ಕಾಗದ ಪತ್ರಗಳು ಸ್ಥಳಿಯ ಅಧಿಕೃತ ಭಾಷೆಗಳಲ್ಲೆ ಇರುವುದರಿಂದ ಅವುಗಳನ್ನು ಇಂಗ್ಲಿಷ್​ಗೆ ಅನುವಾದಿಸಬೇಕಾಗುತ್ತದೆ. ಪ್ರಾಂತೀಯ ಭಾಷೆಯನ್ನು ಸಮರ್ಪಕವಾಗಿ ಅಳವಡಿಸಬೇಕೆಂದರೆ ವ್ಯವಸ್ಥೆ ನೋಡುವ ದೃಷ್ಟಿಕೋನ ಬದಲಾಗಬೇಕು. ಉತ್ತರಾಖಂಡ, ಅಲಹಾಬಾದ್​ ಹೈಕೋರ್ಟ್​ಗಳ ಅನೇಕ ತೀರ್ಪುಗಳು ಹಿಂದಿಗಳಲ್ಲೆ ಪ್ರಕಟವಾಗುತ್ತವೆ. ಅಲ್ಲಿ ಆಡಳಿತಾತ್ಮಕ ಅನುಕೂಲತೆಗಾಗಿ ಹಿಂದಿಯನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲಿ ಸಾಧ್ಯವೆಂದರೆ ಕರ್ನಾಟಕದಲ್ಲೆಕೆ ಸಾಧ್ಯವಿಲ್ಲ?’ ಎಂದು ಪ್ರಶ್ನಿಸುತ್ತಾರೆ ಕೇರಳ ಹೈಕೋರ್ಟ್​ ವಕೀಲೆ ಮೈತ್ರೇಯಿ ಹೆಗಡೆ. ಕರ್ನಾಟಕದಲ್ಲಿ ಕಾನೂನು ಶಿಣ ಪಡೆಯುತ್ತಿರುವ 12&13000 ವಿದ್ಯಾರ್ಥಿಗಳಲ್ಲಿ ಶೇ.60ರಷ್ಟು ಮಂದಿ ಕನ್ನಡ ಮಾಧ್ಯಮದಲ್ಲೆ ಓದುತ್ತಿರುವುದರಿಂದ ಈ ವಿದ್ಯಾರ್ಥಿಗಳೂ ಪ್ರಾಂತೀಯ ಭಾಷೆಯ ಬಳಕೆ ಮೂಲಕ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎನ್ನುತ್ತಾರವರು.
ನ್ಯಾಷನಲ್​ ಲಾ ಯೂನಿವರ್ಸಿಟಿಯಂತಹ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಓದುವ ಉನ್ನತ ಶಿಣ ಸಂಸ್ಥೆಗಳಲ್ಲಿ ಪ್ರಾಂತೀಯ ಭಾಷೆಗಳಲ್ಲಿ ಶಿಣ ನೀಡಲು ಸಂಸ್ಥೆಗಳ ಆಡಳಿತ ಮಂಡಳಿಯೇ ಒಪ್ಪಲಿಕ್ಕಿಲ್ಲ. ಆದರೆ, ಇಂಗ್ಲಿಷ್​ ಭಾಷೆಯಲ್ಲಿ ದುರ್ಬಲವಿರುವ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳು ಭಾರತೀಯ ಭಾಷೆಗಳಲ್ಲೂ ಲಭ್ಯವಿದ್ದಾಗ ನೆರವಾಗಲಿದೆ. ಕೆಳ ನ್ಯಾಯಾಲಯಗಳಲ್ಲಿ ವಕೀಲಿಕೆ ಮಾಡುವವರಿಗೆ ಪ್ರಾಂತೀಯ ಭಾಷೆಗಳ ಾನ ಸಾಕು. ಆದರೆ, ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​ಗೆ ಹೋಗ ಬಯಸುವವರು ಇಂಗ್ಲಿಷ್​ನಲ್ಲಿ ಓದಲು ಮುಂದಾಗುತ್ತಾರೆ. ಉದಾಹರಣೆಗೆ ಮಧ್ಯಪ್ರದೇಶದಲ್ಲಿ ಎಲ್​ಎಲ್​ಬಿ ಪದವಿಯನ್ನು ಶೇ.55 ವಿದ್ಯಾರ್ಥಿಗಳು ಹಿಂದಿ ಮಾಧ್ಯಮದಲ್ಲಿ ಓದಿದರೆ, ಶೇ.45 ವಿದ್ಯಾರ್ಥಿಗಳು ಇಂಗ್ಲಿಷ್​ನಲ್ಲಿ ಓದುತ್ತಿದ್ದಾರೆ. ಆದರೆ, ಎಲ್​ಎಲ್​ಎಂ (ಮಾಸ್ಟರ್​ ಆಫ್​ ಲೆಜಿಸ್ಲೇಟಿವ್​ ಲಾ) ಉನ್ನತ ವ್ಯಾಸಂಗವನ್ನು ಶೇ.88 ವಿದ್ಯಾರ್ಥಿಗಳು ಇಂಗ್ಲಿಷ್​ನಲ್ಲೆ ಪಡೆಯುತ್ತಿದ್ದಾರೆ. ಇಂಗ್ಲಿಷ್​ ಮಾಧ್ಯಮದಲ್ಲಿ ಓದುವವರು ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​ನಲ್ಲಿ ಪ್ರಾಕ್ಟೀಸ್​ ಮಾಡುವ ಉದ್ದೇಶ ಹೊಂದಿರುತ್ತಾರೆ. ಎಲ್ಲಿಯವರೆಗೆ ಹೈಕೋರ್ಟ್​ಗಳಲ್ಲೂ ಪ್ರಾಂತೀಯ ಭಾಷೆಗಳ ಅಳವಡಿಕೆ ಅನಿವಾರ್ಯವಾಗುವುದಿಲ್ಲವೋ ಅಲ್ಲಿಯವರೆಗೆ ವಿದ್ಯಾರ್ಥಿಗಳೂ ಭಾರತೀಯ ಭಾಷೆಗಳಲ್ಲಿ ಶಿಣ ಪಡೆಯಲು ಆಸಕ್ತಿ ವಹಿಸುವುದಿಲ್ಲ. ಇಂಥ ಅನೇಕ ಸ್ಮೂ ಮಾಹಿತಿಗಳನ್ನು ಭಾರತೀಯ ಭಾಷೆಗಳ ಸಮಿತಿ ಸಂಗ್ರಹಿಸಿದೆ.
ಮುಂದಿನ 10 ವರ್ಷಗಳಲ್ಲಿ ಹಂತಹಂತವಾಗಿ ಇಂಗ್ಲಿಷ್​ ಪ್ರಧಾನ ವ್ಯವಸ್ಥೆಯಿಂದ ಭಾರತೀಯ ಭಾಷೆಗಳ ವ್ಯವಸ್ಥೆಗೆ ಬರಲು ಇದು ಮುನ್ನುಡಿಯಾಗಬೇಕು. ಇದಕ್ಕಾಗಿ ಪ್ರಾಥಮಿಕ ಹಂತದಲ್ಲಿ ವ್ಯಾಪಕ ಪ್ರಮಾಣದ ಸಾಮಗ್ರಿ ನಿರ್ಮಾಣವಾಗಬೇಕು. ಹೀಗಾಗಿ, ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಲ್ಲಿ ಸರ್ಕಾರ, ಶೈಣಿಕ ಸಂಸ್ಥೆಗಳು, ವಕೀಲರು, ಬಾರ್​ ಅಸೋಸಿಯೇಷನ್​ಗಳು, ಸರ್ಕಾರೇತರ ಸಂಸ್ಥೆಗಳು ಸೇರಿ ಕಾನೂನು ಪಠ್ಯಪುಸ್ತಕ, ತೀರ್ಪುಗಳು, ರೆಫರೆನ್ಸ್​ ಸಾಮಗ್ರಿಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಲು ಅಭಿಯಾನ ನಡೆಸಬೇಕು. ಹಾಗಾದಾಗ ಕನ್ನಡ ಸೇರಿ ಎಲ್ಲಾ ಭಾರತೀಯ ಭಾಷೆಗಳಿಗೆ ಮಹತ್ವ ಸಿಗುವುದಲ್ಲದೆ, ಕನ್ನಡದಲ್ಲಿ ಓದಿದರೆ ಭವಿಷ್ಯವಿದೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲೂ ಮೂಡಲಿದೆ ಎನ್ನುವುದು ಚ.ಮೂ. ಕೃಷ್ಣಶಾಸಿ ಅಭಿಮತ.
ಹೈಕೋರ್ಟುಗಳಲ್ಲಿ ಹಿಂದಿOfficial Languages 1963ರ (ಅಧಿಕೃತ ಭಾಷೆಗಳ ಕಾಯ್ದೆ) ಪ್ರಕಾರ ಈಗಾಗಲೇ ಉತ್ತರ ಭಾರತದ ಕೆಲವು ಹೈಕೋರ್ಟುಗಳಲ್ಲಿ ಹಿಂದಿ ಭಾಷಾ ಪ್ರಯೋಗಕ್ಕೆ ಅವಕಾಶ ಕೊಡಲಾಗಿದೆ. ಸುಪ್ರೀಂಕೋರ್ಟಿನ ಕೆಲವು ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಗೊಳಿಸಲಾಗುತ್ತಿದೆ. ಅಗತ್ಯವಿದ್ದಾಗ ದಾಖಲೆ, ತೀರ್ಪುಗಳನ್ನು ಇಂಗ್ಲೀಷ್​ಗೆ ಅನುವಾದ ಮಾಡಿ ಬಳಸಿಕೊಳ್ಳುವ ವ್ಯವಸ್ಥೆಯಿದ್ದಲ್ಲಿ ಪ್ರಾದೇಶಿಕ ಭಾಷಾ ಪ್ರಯೋಗಕ್ಕೆ ಯಾವುದೇ ಅಭ್ಯಂತರವಿರಕೂಡದು. Artificial Intelligence (ಕೃತಕ ಬುದ್ಧಿಮತ್ತೆ) ತಂತ್ರಾನದ ಬಳಕೆಯೂ ಈ ದಿಶೆಯಲ್ಲಿ ನೆರವಾಗಬಹುದು. ಹೀಗಾಗಿ, ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಇರಬೇಕೆಂಬ ಉದ್ದೇಶ ಸಾಕಾರ ನಿಟ್ಟಿನಲ್ಲಿ ನ್ಯಾಯಾಲಯಗಳಲ್ಲಿ ಪ್ರಾದೇಶಿಕ ಭಾಷಾ ಪ್ರಯೋಗದ ಬಗ್ಗೆ ಕೇಂದ್ರ ಚಿಂತನೆ ನಡೆಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 14 =
Remember me
