ನವದೆಹಲಿ:ಶಿಕ್ಷಣ ಸಚಿವಾಲಯ ಪರೀಕ್ಷಾ ಪೆ ಚರ್ಚಾದ (PPC 2024) ಏಳನೇ ಆವೃತ್ತಿಯ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವ ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ನೋಂದಾಯಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಈವೆಂಟ್‌ಗೆ ನೋಂದಾಯಿಸಲು ಕೊನೆಯ ದಿನಾಂಕ 2024 ಜನವರಿ 12 ಆಗಿರುತ್ತದೆ. ಈವೆಂಟ್‌ನ ದಿನಾಂಕವನ್ನು ಶಿಕ್ಷಣ ಸಚಿವಾಲಯವು ಶೀಘ್ರದಲ್ಲೇ ಪ್ರಕಟಿಸಲಿದೆ.
ಶಿಕ್ಷಣ ಸಚಿವಾಲಯವು ಟ್ವಿಟ್ಟರ್​​ನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, “ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಗಮನಕ್ಕೆ #ParikshaPeCharcha ಸ್ಪರ್ಧೆ 2024 ಪರೀಕ್ಷೆಯ ಒತ್ತಡಕ್ಕೆ ವಿದಾಯ ಹೇಳುವ ಮತ್ತು ಯಶಸ್ಸಿಗೆ ಸ್ಫೂರ್ತಿ ನೀಡುವ ನಿಮ್ಮ ಅವಕಾಶವಾಗಿದೆ. ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯು ಕುತೂಹಲದಿಂದ ಕಾಯುತ್ತಿರುವ ಸಂವಾದಾತ್ಮಕ ಅಧಿವೇಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ಭಾಗಿಯಾಗಿ ಆಗಲು ನಿಮಗೆ ಸಿಗಲಿದೆ ಅವಕಾಶ. ಪೋಷಕರು ಮತ್ತು ಶಿಕ್ಷಕರೇ, ನಿಮ್ಮ ಭಾಗವಹಿಸುವಿಕೆ ಮುಖ್ಯ. ನಮ್ಮ ವಿದ್ಯಾರ್ಥಿಗಳಿಗೆ ಬೆಂಬಲ ಸಮುದಾಯವನ್ನು ರಚಿಸೋಣ ಮತ್ತು ಪರೀಕ್ಷೆಗಳನ್ನು ಜೀವನದ ಉತ್ಸವವಾಗಿ ಆಚರಿಸೋಣ ಎಂದು ಶಿಕ್ಷಣ ಸಚಿವಾಲಯ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಈ ಕಾರ್ಯಕ್ರಮವನ್ನು ವಾರ್ಷಿಕವಾಗಿ ನಡೆಸಲಾಗುತ್ತಿದ್ದು, ಇದರಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಮತ್ತು ಸಂವಾದ ನಡೆಸಲು ಅವಕಾಶ ನೀಡಲಾಗುತ್ತದೆ.ವಿದ್ಯಾರ್ಥಿಗಳು ಎರಡು ರೀತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿ (ಸ್ವಯಂ ಭಾಗವಹಿಸುವಿಕೆ) ಮತ್ತು ಶಿಕ್ಷಕರ ಲಾಗಿನ್ ಮೂಲಕ ಭಾಗವಹಿಸುವಿಕೆ. 6 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಮುಕ್ತವಾಗಿದೆ.
ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಪ್ರಧಾನ ಮಂತ್ರಿಗೆ ಗರಿಷ್ಠ 500 ಅಕ್ಷರಗಳಲ್ಲಿ ಸಲ್ಲಿಸಬಹುದು. ಪಾಲಕರು ಮತ್ತು ಶಿಕ್ಷಕರು ಕೂಡ ಭಾಗವಹಿಸಬಹುದು ಮತ್ತು ಅವರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಆನ್‌ಲೈನ್ ಚಟುವಟಿಕೆಗಳಲ್ಲಿ ತಮ್ಮ ನಮೂದುಗಳನ್ನು ಸಲ್ಲಿಸಬಹುದು. MyGov ನಲ್ಲಿ ಸ್ಪರ್ಧೆಗಳ ಮೂಲಕ ಆಯ್ಕೆಯಾದ ಸುಮಾರು 2050 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಶಿಕ್ಷಣ ಸಚಿವಾಲಯದಿಂದ PPC ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ನಾನು ಹೆಮ್ಮೆಯ ಭಾರತೀಯ, ಹೆಮ್ಮೆಯ ಮುಸ್ಲಿಂ; ವಿಶ್ವಕಪ್‌ನ ಟ್ರೋಲ್​ಗಳಿಗೆ ಶಮಿ ಕೌಂಟರ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 14 =
Remember me
