ಮದನಪಲ್ಲಿ (ಆಂಧ್ರಪ್ರದೇಶ):ಇಲ್ಲಿನ ಚಿತ್ತೂರ್​ ಜಿಲ್ಲೆಯ ಮದನಪಲ್ಲಿಯಲ್ಲಿ ನಡೆದ ಸಹೋದರಿಯರಿಬ್ಬರ ಬರ್ಬರ ಹತ್ಯೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಬೀಳಿಸಿದ್ದು, ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ತಂದೆ-ತಾಯಿಯೇ ಮೌಢ್ಯಕ್ಕೆ ಬಿದ್ದು ಮಕ್ಕಳಿಬ್ಬರನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು.
ಇದಾದ ಬಳಿಕ ಅಕ್ಕನೇ ತಂಗಿಯನ್ನು ಕೊಂದು, ಆಮೇಲೆ ತನ್ನನ್ನು ಕೊಂದುಬಿಡಿ ಎಂದು ತಂದೆ-ತಾಯಿಯ ಬಳಿ ಕೇಳಿಕೊಂಡಳು ಎಂಬ ವಿಚಾರ ವೇಳೆ ಬಹಿರಂಗವಾಗಿತ್ತು. ಇದೇ ಪ್ರಕರಣ ಸಂಬಂಧ ಪೊಲೀಸರು ಸಂಪೂರ್ಣ ಮಾಹಿತಿ ಕಲೆಹಾಕಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆರೋಪಿ ದಂಪತಿ ಪುರುಷೋತ್ತಮ್​ ನಾಯ್ಡು-ಪದ್ಮಜಾರ ಹೆಣ್ಣುಮಕ್ಕಳಾದ ಅಲೈಖ್ಯಾ (27) ಮತ್ತು ಸಾಯಿ ದಿವ್ಯಾ (22) ಕೊಲೆಗೂ ಮುನ್ನ ಅವರ ಇನ್​ಸ್ಟಾಗ್ರಾಂ ಪೋಸ್ಟ್​ ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿರಿ:ಮಾವಿನ ಮರದಲ್ಲಿ ನೇತಾಡುತ್ತಿತ್ತು ಪ್ರೇಮಿಗಳ ಡೆಡ್​ ಬಾಡಿ! ಅಲ್ಲಿದ್ದ ವಸ್ತು ಕಂಡು ಶಾಕ್​ ಆದ ಪೊಲೀಸರು
“ನಮ್ಮ ಕೆಲಸ ಮುಗಿದಿದೆ…. ಶಿವ ಬರುತ್ತಿದ್ದಾನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಅಲೈಖ್ಯಾ ಪೋಸ್ಟ್​ ಮಾಡಿರುವುದು ತಿಳಿದುಬಂದಿದೆ. ಪುನರ್ಜನ್ಮ ಮೇಲೆ ಅತಿಯಾದ ನಂಬಿಕೆಯೇ ಭೀಕರ ಕೊಲೆಗೆ ಕಾರಣ ಎಂದು ಪೊಲೀಸರು ನಂಬಿದ್ದು, ದಂಪತಿಯ ಹಿರಿಯ ಮಗಳು ಅಲೈಖ್ಯಾ ಒಮ್ಮೆ ತಮ್ಮ ಸಾಕುನಾಯಿಯ ಮೇಲೆ ಪುನರ್ಜನ್ಮ ಪ್ರಯೋಗ ಮಾಡಿದ್ದಳಂತೆ.
ನಾಯಿಯನ್ನು ಕೊಂದು ಅದನ್ನು ಮರಳಿ ಪಡೆದುಕೊಂಡು ಬಂದಿದ್ದಾಗಿ ಅಲೈಖ್ಯಾ ಹೇಳಿದ್ದಳಂತೆ. ಇದನ್ನೇ ನಂಬಿದ್ದ ದಂಪತಿ ಸಾಯಿದಿವ್ಯ ಮೇಲೆ ಪ್ರಯೋಗ ಮಾಡಲು ಮುಂದಾದರಂತೆ. ಮೊದಲ ಸಾಯಿದಿವ್ಯಾಳನ್ನು ಅಲೈಖ್ಯಾಳೇ ಕೊಂದಳು ಎಂದು ಪಾಲಕರು ಹೇಳಿಕೊಂಡಿದ್ದು, ನಂತರ ತನ್ನನ್ನು ಕೊಲ್ಲುವಂತೆ ಪಾಲಕರ ಬಳಿಕ ಅಲೈಖ್ಯಾ ಕೇಳಿಕೊಂಡಳಂತೆ.
ಸತ್ತ ಸಹೋದರಿಯ ಆತ್ಮವನ್ನು ಮರಳಿ ತರಲು ತನ್ನ ಪ್ರಾಣವನ್ನು ತೆಗೆಯುವಂತೆ ಅಲೈಖ್ಯಾ ತಾಯಿ ಬಳಿ ಕೇಳಿಕೊಂಡಳಂತೆ. ಈ ಸಮಯದಲ್ಲಿ ಪುರುಷೋತ್ತಮ್​ ಸಹ ಅವರ ಜತೆಯಲ್ಲಿಯೇ ಇದಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿರಿ:ಮಾವನ ಮೇಲೆ ಮುನಿಸು: ಪೊಲೀಸ್​ ಪತಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!
ಪುನರ್ಜನ್ಮ ನಂಬಿಕೆ ಹುಟ್ಟಿಕೊಂಡಿದ್ಹೇಗೆ?2021ರ ಜನವರಿ ಆರಂಭದಲ್ಲಿ ಸಾಯಿ ದಿವ್ಯಾ ಆರೋಗ್ಯ ಹದಗೆಟ್ಟಿತ್ತು. ಈ ವೇಳೆ ಆಕೆಯ ಆರೋಗ್ಯ ಸುಧಾರಣೆಗೆಂದು ಪಾಲಕರು ತಮಿಳುನಾಡು, ಕರ್ನಾಟಕ ಮತ್ತು ಕೇರಳದಿಂದ ಮಂತ್ರವಾದಿಗಳನ್ನು ಕರೆಸಿದ್ದರಂತೆ. ಇದಾದ ಬಳಿಕ ಸಾಯಿದಿವ್ಯಾಳ ರೋಗ ಗುಣಪಡಿಸಲು ಅಕ್ಕ ಅಲೈಖ್ಯಾ, ಅತೀಂದ್ರೀಯ ಶಕ್ತಿ ಕುರಿತ ಸಂಶೋಧನೆ ಆರಂಭಿಸಿದ್ದಳಂತೆ. ತಂಗಿಯ ಆರೋಗ್ಯ ಗುಣವಾಗಬೇಕಾದರೆ, ತ್ಯಾಗ ಮುಖ್ಯವಾಗಿದೆ ಎಂದಿದ್ದಳಂತೆ. ಇಬ್ಬರನ್ನು ಕೊಂದು ಬಿಡಿ ಮಾರನೇ ದಿನ ಮರಳಿ ಜನಿಸುತ್ತೇವೆ ಎಂದು ಹೇಳಿದಳೆಂದು ಬಂಧಿತ ದಂಪತಿ ವಿಚಾರಣೆ ವೇಳೆ ಹೇಳಿದ್ದಾರೆ.
ವೈದ್ಯರು ಹೇಳುವುದೇನು?ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ ಪದ್ಮಜಾ ಕೆಲವು ತಿಂಗಳುಗಳಿಂದ ಭ್ರಮೆಗೆ ಒಳಗಾಗಿದ್ದಳಂತೆ. ಭ್ರಮಾತ್ಮಕ ವಿಚಾರಗಳಿಂದ ಹೆಚ್ಚು ಪ್ರಭಾವಿತರಾಗಿದ್ದರಂತೆ. ಇಡೀ ಕುಟುಂಬವೇ ಭ್ರಮೆಗೆ ಒಳಗಾಗಿದ್ದರಂತೆ. ಇದು ಕೊನೆಯಲ್ಲಿ ಕೊಲೆಗೆ ಮುನ್ನುಡಿ ಬರೆದಿದೆ ಎಂದು ತಿಳಿಸಿದ್ದಾರೆ. ಕೊಲೆ ನಡೆದ ಸಮಯದಲ್ಲಿ ಎಲ್ಲರೂ ಮೈಮರೆತ ಸ್ಥಿತಿಯಲ್ಲಿದ್ದರು ಎಂದು ಪೊಲೀಸರು ಸಹ ತಿಳಿಸಿದ್ದಾರೆ.
ಇದನ್ನೂ ಓದಿರಿ:ಮಗಳ ನೋಡಲು ಬಂದ ತಾಯಿಗೆ ಕಾದಿತ್ತು ಶಾಕ್​: ಮದ್ವೆಯಾದ ಕೆಲವೇ ದಿನಗಳಲ್ಲಿ ಅತ್ತೆ-ಸೊಸೆ ನಿಗೂಢ ಸಾವು!
ಇನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿರುವುದು ಡಬಲ್​ ಮರ್ಡರ್​ ಪ್ರಕರಣ ಪೊಲೀಸರಿಗೆ ತಲೆನೋವಾಗಿದೆ. ಪ್ರಕರಣದ ತಾರ್ಕಿಕ ಅಂತ್ಯ ಕಂಡುಕೊಳ್ಳಲು ಪೊಲೀಸರು ಗಂಭೀರ ತನಿಖೆ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಸುಶಿಕ್ಷಿತ ಕುಟುಂಬವೊಂದು ಹೇಗೆ ಇಂತಹ ಮೌಢ್ಯಕ್ಕೆ ಕಟ್ಟುಬಿದ್ದರು ಎಂಬುದೇ ಇದೀಗ ಪ್ರಕರಣದ ಪ್ರಮುಖ ಚರ್ಚೆಯಾಗಿದೆ. ತಂದೆ ಸರ್ಕಾರಿ ಶಾಲೆಯ ಪ್ರಾಂಶುಪಾಲ. ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್​ ಮತ್ತು ಸ್ವಂತ ಕಾಲೇಜು ನಡೆಸುತ್ತಿದ್ದರಿ. ಅಲೈಖ್ಯಾ ಅರಣ್ಯಾಧಿಕಾರಿಯಾಗಿದ್ದಳು. ಸಾಯಿದಿವ್ಯಾ ಎಂಬಿಎ ಮುಗಿಸಿ, ಚೆನ್ನೈನ ರೆಹಾಮಾನ್​ ಮ್ಯೂಸಿಕ್​ ಸಂಸ್ಥೆಯಲ್ಲಿ ಮ್ಯೂಸಿಕ್​ ಕಲಿಯುತ್ತಿದ್ದಳು.(ಏಜೆನ್ಸೀಸ್​)
ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × four =
Remember me
