ನವದೆಹಲಿ:ಮೃತದೇಹದ ಸುತ್ತ ದುಃಖದ ವಾತಾವರಣ ಇರುವುದು ಸಾಮಾನ್ಯ. ಸಂಬಂಧಿಕರ ರೋದನದೊಂದಿಗೆ ನೋಡುತ್ತಿರುವವರಿಗೂ ಇದು ಕಣ್ಣೀರು ತರಿಸುತ್ತದೆ. ಆದರೆ ಅಂತ್ಯಸಂಸ್ಕಾರದ ವೇಳೆ ಕೆಲವರು ಡ್ಯಾನ್ಸ್ ಮಾಡುವುದನ್ನು ನೋಡುತ್ತೇವೆ. ಇಂತಹ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೆಲ್ಲವನ್ನೂ ಮೀರಿಸುವಂಥ ಮಾನವೀಯತೆ ಮರೆತ ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮೃತದೇಹವನ್ನು ಪಕ್ಕದಲ್ಲಿಟ್ಟು ಸಂಬಂಧಿಕರು ಮಾಡುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ:ಓವೈಸಿ ಮನೆ ಮೇಲೆ ದಾಳಿ.. ಇದಕ್ಕೆಲ್ಲ ಹೆದರೋಲ್ಲ ಎಂದ ಎಐಎಂಐಎಂ ಸಂಸದ!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ವಿಚಾರ ತಿಳಿದ ಸಂಬಂಧಿಕರು ಗ್ರಾಮಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ಅವರ ಆಗಮನಕ್ಕಾಗಿ ಕುಟುಂಬಸ್ಥರು ಶವವನ್ನು ಫ್ರೀಜರ್‌ನಲ್ಲಿ ಇರಿಸಿದ್ದರು. ಮೃತದೇಹ ಕಂಡು ಮರುಗಬೇಕಿದ್ದ ಸಂಬಂಧಿಕರು ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸಿದ್ದಾರೆ.

A post shared by fanny xyz (@_fanny_xyz)

ಕೆಲವರು ತಮ್ಮ ಫೋನ್‌ನಲ್ಲಿ ಗೇಮ್‌ಗಳನ್ನು ಆಡುತ್ತಾ ಕಾಲ ಕಳೆಯುತ್ತಿದ್ದರೆ, ಇನ್ನು ಕೆಲವರು ಪೋಕರ್ ಆಡುತ್ತಿದ್ದಾರೆ. ಇನ್ನು ಕೆಲವರು ವಿವಿಧ ರೀತಿಯ ಆಟಗಳನ್ನು ಆಡುತ್ತಾ ಮೋಜು ಮಾಡುತ್ತಿದ್ದಾರೆ. ಅವರೆಲ್ಲ ದುಃಖಿಸುತ್ತಿರುವಂತೆ ಕಾಣುತ್ತಿಲ್ಲ. ಟೈಮ್ ಪಾಸ್ ಗಾಗಿ ನಾನಾ ರೀತಿಯ ಕಸರತ್ತು ನಡೆಸುತ್ತಿರುವಂತೆ ತೋರುತ್ತಿದೆ. ಈ ಘಟನೆಯನ್ನು ಅಲ್ಲಿದ್ದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ವೀಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆ ಫನ್ನಿ ಎಕ್ಸ್​ವೈಜಡ್​ನಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೊದ ಶೀರ್ಷಿಕೆಯನ್ನು “ಎಷ್ಟು ವಿಚಿತ್ರ ಜನರು..” ಎಂದು ಬರೆಯಲಾಗಿದೆ. ಈ ವೀಡಿಯೊಗೆ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಸದ್ಯ ಈ ವೀಡಿಯೋ ಹರಿದಾಡುತ್ತಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. “ಇದು ಕಲಿಯುಗ” ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು “ಹೆಣ್ಣು ಇಲ್ಲ… ನಾಟಕವಿಲ್ಲ” ಎಂದು ಕಾಮೆಂಟ್​ ಮಾಡಿದ್ದಾರೆ, ಇನ್ನು ಕೆಲವರು ವಿವಿಧ ರೀತಿಯ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೊ ಪ್ರಸ್ತುತ 57 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ.
‘ಥ್ಯಾಂಕ್ಯೂ ಸರ್​’ ಎಂದಿದ್ದಕ್ಕೆ ವಿಮಾನದಿಂದಲೇ ಕೆಳಗಿಳಿಸಿದ ಸಿಬ್ಬಂದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 3 =
Remember me
