ಲಖನೌ:ತಮ್ಮ ಮನೆಯಲ್ಲಿ ಚಿನ್ನಾಭರಣಗಳನ್ನು ಕದ್ದಿದ್ದಾಳೆ ಎಂಬ ಆರೋಪದ ಮೇಲೆ ಮಹಿಳೆಗೆ ಆಕೆಯ ಸಂಬಂಧಿಕರು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ.
ಮೃತರನ್ನು ಸಮೀನಾ(23) ಎಂದು ಗುರುತಿಸಲಾಗಿದ್ದು, ಆಕೆಯ ಮೇಲೆ ಬ್ಲೇಡ್​ ಹಾಗೂ ರಾಡ್​ಗಳಿಂದ ಹಲ್ಲೆ ನಡೆಸಿ ಸಂಬಂಧಿಕರು ಹತ್ಯೆ ಮಾಡಿದ್ಧಾರೆ ಎಂದು ಪೊಲೀಸರು ತಿಳಿಸಿದ್ಧಾರೆ.
ಕೆಲ ದಿನಗಳ ಹಿಂದೆ ಸಮೀನಾ ಆಕೆಯ ಸಂಬಂಧಿಕರಾದ ಹೀನಾ ಮತ್ತು ರಮೇಶ್​ ಅವರ ಮಗನ ಜನುಮದಿನದ ನಿಮಿತ್ತ ಅವರ ಮನೆಗೆ ಭೇಟಿ ನೀಡಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಅವರ ಮನೆಯಲ್ಲಿದ್ದ ಒಡವೆಗಳು ಕಾಣೆಯಾಗಿದ್ದವು. ಈ ವೇಳೆ ಹೀನಾ ಹಾಗೂ ರಮೇಶ್​ ಚಿನ್ನಾಭರಣಗಳನ್ನು ಸಮೀನಾ ಕದ್ದಿರಬಹುದು ಎಂದು ಶಂಕಿಸಿ ಆಕೆಯ ಮೇಲೆ ಬ್ಲೇಡ್​, ರಾಡ್​ನಿಂದ ಹಲ್ಲೆ ನಡೆಸಿದ್ಧಾರೆ.
ಇದನ್ನೂ ಓದಿ:ಲೋಕಲ್​ ರೈಲಿನಲ್ಲಿ ಯೋಗಾಭ್ಯಾಸ ಮಾಡಿದ ಪ್ರಯಾಣಿಕರು; ವಿಡಿಯೋ ವೈರಲ್​
ಆರೋಪಿಗಳಿಬ್ಬರು ಮನೆಯಲ್ಲಿ ಜೋರಾಗಿ ಮ್ಯೂಸಿಕ್​ ಹಾಕಿಕೊಂಡು ನಿಜ ಒಪ್ಪಿಕೊಳ್ಳುವಂತೆ ಸಮೀನಾ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ಧಾರೆ. ಆಕೆಯ ದೇಹದ ಭಾಗಗಳನ್ನು ಸಹ ಈ ಇಬ್ಬರು ಬ್ಲೇಡ್​ನಿಂದ ಕೊಯ್ದಿದ್ಧಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಮೀನಾ ಸ್ಥಳದಲ್ಲೇ ಮೃತಪಟ್ಟಿದ್ಧಾರೆ.
ಸಮೀನಾ ಮೃತಪಟ್ಟಿದ್ದರಿಮದ ಭಯಗೊಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಎರಡು ದಿನ ಕಳೆದರೂ ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡದೆ ಇರುವುದನ್ನು ಗಮಿನಿಸಿದ ನೆರೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.
ತಲೆಮಾರಿಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸಿಪಿ ರವಿ ಕುಮಾರ್​ ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 13 =
Remember me
