ನವದೆಹಲಿ:ರಿಲಯನ್ಸ್ ಫೌಂಡೇಷನ್​ ಅಧ್ಯಕ್ಷೆ ನೀತಾ ಅಂಬಾನಿ ಇಂದು ಬನಾರಸಿ ಬ್ರೊಕೇಡ್ ಸೀರೆಯಲ್ಲಿ ಮಿಂಚಿದ್ದಾರೆ. ನವದೆಹಲಿಯಲ್ಲಿ ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್​​ ಲಿಮಿಟೆಡ್​ 46ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಹೀಗೆ ವಿಶಿಷ್ಟವಾದ ಸೀರೆಯಲ್ಲಿ ಕಾಣಿಸಿಕೊಂಡರು.
ಆರ್​ಐಎಲ್​ನ 46ನೇ ಎಜಿಎಂನಲ್ಲಿ ರಿಲಯನ್ಸ್ ಕುಟುಂಬವನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದರು, ಅಲ್ಲಿ ಅವರು ಎನ್ಎಂಎಸಿಸಿ ಪ್ರಾರಂಭ ಮತ್ತು ರಿಲಯನ್ಸ್ ಫೌಂಡೇಷನ್ ಕಾರ್ಯಗಳ ಕುರಿತು ಪ್ರಸ್ತಾಪಿಸಿದರು.
ನುರಿತ ಕುಶಲಕರ್ಮಿ ಇಕ್ಬಾಲ್ ಅಹ್ಮದ್ ಎಂಬವರು ಕೈಯಿಂದ ನೇಯ್ದ ಈ ಬನಾರಸಿ ಬ್ರೊಕೇಡ್ ಸೀರೆಯಲ್ಲಿ ನೀತಾ ಅಂಬಾನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸೊಗಸಾದ ಲ್ಯಾವೆಂಡರ್ ನೇಯ್ಗೆಯ ಈ ಸೀರೆ ವಾರಣಾಸಿಯ ಶತಮಾನಗಳಷ್ಟು ಹಳೆಯ ಕರಕುಶಲತೆಯ ಪ್ರತೀಕವಾಗಿ. ಇದರ ಸಂಕೀರ್ಣ ವಿನ್ಯಾಸವು ಬರ್ಫಿ ಬೂಟಿ, ಕೊನಿಯಾ ಪೈಸ್ಲೆ ಮೋಟಿಫ್​ಗಳು ಮತ್ತು ಸಾಂಪ್ರದಾಯಿಕ ಜರಿ ಭಾರತೀಯ ಕಲಾತ್ಮಕತೆಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ:ರಿಯಲ್​ ಸ್ಟಾರ್ ಉಪೇಂದ್ರ ಹೇಳಿದ್ದರಲ್ಲಿ ‘ಸತ್ಯ’ ಇದ್ಯಾ?: ‘ಯು-ಐ’ ಮೂಡಿಸಿದ ಪ್ರಶ್ನೆ!
ಭಾರತದ ಸಾಂಪ್ರದಾಯಿಕ ಕಲೆಗಳು ಮತ್ತು ಕರಕುಶಲ ವಸ್ತುಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ನಮ್ಮ ವಿನಮ್ರ ಉಪಕ್ರಮವಾದ ರಿಲಯನ್ಸ್ ಫೌಂಡೇಷನ್​​ನ ಸ್ವದೇಶ್ ಬೆಂಬಲಿತ ಅನೇಕ ಪ್ರಾದೇಶಿಕ ಕಲಾ ಪ್ರಕಾರಗಳಲ್ಲಿ ಬನಾರಸಿ ನೇಯ್ಗೆಯೂ ಒಂದಾಗಿದೆ ಎಂದು ಅವರು ತಿಳಿಸಿದರು. ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮತ್ತು ಅವರು ತಲೆಮಾರುಗಳಿಂದ ಮುಂದುವರಿಸಿಕೊಂಡು ಬಂದ ಪರಂಪರೆಗೆ ತಮ್ಮ ಇತ್ತೀಚಿನ ಪ್ರದರ್ಶನಗಳ ಮೂಲಕ ನೀತಾ ಅಂಬಾನಿ ಗೌರವ ಸಲ್ಲಿಸಿದ್ದಾರೆ.
Photo Gallery | ನಿಲುಕಿದ ನಕ್ಷತ್ರ: ರಾಜಧಾನಿಯಲ್ಲಿ ರಜಿನಿಕಾಂತ್ ಮುಕ್ತ ಸಂಚಾರ, ಅಭಿಮಾನಿಗಳಲ್ಲಿ ಸಂಚಲನ!

ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್​; ಇಲ್ಲಿದೆ ವಿವರ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − eight =
Remember me
