ಮಹಾಮಾರಿಕರೊನಾದಂತಹ ಸಂಕಷ್ಟ ಸಮಯದಲ್ಲಿ ದೇಶದ ಒಳಿತಿಗಾಗಿ ತನು, ಮನ, ಧನ ಅರ್ಪಿಸಿದ ಪ್ರತಿಯೊಬ್ಬ ಭಾರತೀಯನ ಉತ್ಸಾಹಕ್ಕೆ ನೀತಾ ಅಂಬಾನಿ ಮುಖ್ಯಸ್ಥರಾಗಿರುವ ರಿಲಯನ್ಸ್​ ಫೌಂಡೇಶನ್​ ಕೂಡ ತನ್ನ ಹಲವು ಉಪಕ್ರಮಗಳ ಮೂಲಕ ಕೈಜೋಡಿಸಿದೆ.
ಹಾಡಿನ ಸಂದೇಶ ಹೊತ್ತ ವಿಡಿಯೋವೊಂದನ್ನು ರಿಲಯನ್ಸ್​ ಫೌಂಡೇಶನ್ ಬಿಡುಗಡೆ ಮಾಡಿದ್ದು,​ ವಿಶಾಲ್​ ಮಿಶ್ರಾ ಎಂಬುವರು ಸಂಗೀತದ ಜತೆಗೆ ಧ್ವನಿಯನ್ನು ನೀಡಿದ್ದಾರೆ. ಗಾಯನದ ಮೂಲಕ ವಿಡಿಯೋದಲ್ಲಿ ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ರಿಲಯನ್ಸ್​ ಫೌಂಡೇಶನ್​ ಜನತೆಯ ಬೆನ್ನಿಗೆ ನಿಂತಿದ್ದನ್ನು ಕಣ್ಣಿಗೆ ಕಟ್ಟಿಕೊಡಲಾಗಿದೆ.
ಕೋವಿಡ್​-19 ಭಾರತವನ್ನು ಸ್ತಬ್ಧವಾಗಿಸಿದೆ ಹೊರತು ನಮ್ಮ ಉತ್ಸಾಹವನ್ನಲ್ಲ ಎಂದು ಸಂದೇಶದೊಂದಿಗೆ ಆರಂಭವಾಗುವ ಹಾಡಿನಲ್ಲಿ ರಿಲಯನ್ಸ್​ ಫೌಂಡೇಶನ್​ ಮಾನವೀಯ ಕಾರ್ಯಗಳನ್ನು ವಿವರಿಸಲಾಗಿದೆ.
ತಾಯ್ನಾಡಿಗಾಗಿ ರಿಯಲನ್ಸ್​ ತಂಡವು ಏನೇನು ಸಾಧ್ಯವೋ ಎಲ್ಲವನ್ನು ಮಾಡುತ್ತಿದೆ. ರಿಲಯನ್ಸ್​ ಸೈನ್ಸ್​ ಟೀಮ್​ ಭಾರತದ ಅತಿದೊಡ್ಡ ಟೆಸ್ಟಿಂಗ್​ ಲ್ಯಾಬ್​ ಅಳವಡಿಸಿದ್ದು, ದಿನವೊಂದಕ್ಕೆ 3500 ಪರೀಕ್ಷೆಗಳನ್ನು ನಡೆಸುತ್ತಿದೆ. ಭಾರತದ ಮೊದಲ ಕೋವಿಡ್​ 19 ವಿಶೇಷ ಆಸ್ಪತ್ರೆಯನ್ನು ಅಳವಡಿಸಿದ್ದೇವೆ. ಹೆಚ್ಚುವರಿ ಸೌಲಭ್ಯವಾಗಿ 2000 ಬೆಡ್​ಗಳನ್ನು ಅಳವಡಿಸಲಾಗಿದೆ. ಗುಣಮುಖರಾದ ರೋಗಿಗಳ ಹಾಗೂ ಅವರ ಕುಟುಂಬದ ಕೃತಜ್ಞತೆಗಳಿಂದ ನಮ್ಮ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕದೆ. ವಿಶೇಷ ಕಾರ್ಖಾನೆಯಲ್ಲಿ 100,000 ಪಿಪಿಇ ಮತ್ತು ಮಾಸ್ಕ್​ಗಳನ್ನು ತಯಾರಿಸಲಾಗುತ್ತಿದೆ ಎಂದು ದೃಶ್ಯ ಸಹಿತ ತಿಳಿಸಲಾಗಿದೆ.
ಇಷ್ಟೇ ಅಲ್ಲದೆ, ಕರೊನಾ ವಾರಿಯರ್ಸ್​ಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ಶ್ರಮಿಕ ವರ್ಗದವರಿಗೆ ರೇಷನ್ ಹಾಗೂ ರಿಮೋಟ್​ ಕಂಟ್ರೋಲ್​ ಏರಿಯಾಗಳಿಗೂ ಅಗತ್ಯ ಸೌಲಭ್ಯ​ ಮತ್ತು ಜಾನುವಾರುಗಳಿಗೆ ಮೇವು ಸೇರಿದಂತೆ ಅನೇಕ ಸೌಲಭ್ಯಗಳನ್ನು ರಿಲಯನ್ಸ್​ ಫೌಂಡೇಶನ್​ ಒದಗಿಸುವ ಮೂಲ ಕೋವಿಡ್​ ಹೋರಾಟದಲ್ಲಿ ಭಾರತೀಯರ ಬೆನ್ನಿಗೆ ನಿಂತಿದೆ.
https://www.facebook.com/VVani4U/videos/730249404382468/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 10 =
Remember me
