ನವದೆಹಲಿ:ಕರೊನಾ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದು, ನಿತ್ಯದ ಆದಾಯವಿಲ್ಲದೇ ಊಟಕ್ಕಾಗಿ ಪರದಾಡುತ್ತಿರುವವರ ನೆರವಿಗೆ ರಿಲಯನ್ಸ್​ ಫೌಂಡೇಶನ್​ ಧಾವಿಸಿದೆ.
ಭಾರತದ ನಂ. 1 ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಪತ್ನಿ ಹಾಗೂ ರಿಲಯನ್ಸ್​ ಫೌಂಡೇಶನ್​ ಚೇರ್​ಪರ್ಸನ್​ ನೀತಾ ಅಂಬಾನಿಯ ಅವರು ತಮ್ಮ ಫೌಂಡೇಶನ್​ ವತಿಯಿಂದ ಭಾರತದ ಜನರಿಗೆ “ಮಿಷನ್​ ಅನ್ನ ಸೇವಾ” ಹೆಸರಿನಲ್ಲಿ ವಿಶ್ವದ ಬಹುದೊಡ್ಡ ಕಾರ್ಪೊರೇಟ್​ ಊಟ ವಿತರಣೆ ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದಾರೆ.
ದೇಶದ ಜನರು ಕರೊನಾ ವೈರಸ್​ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದು, ಕಾರ್ಯಕ್ರಮದ ಮೂಲಕ ದೇಶಾದ್ಯಂತ 3 ಕೋಟಿ ಜನರಿಗೆ ಉಚಿತ ಊಟ ವಿತರಣೆ ಮಾಡಲಿದ್ದಾರೆ. ಲಾಕ್​ಡೌನ್​ನಿಂದ ತೊಂದರೆಗೆ ಸಿಲುಕಿರುವ ಸಮುದಾಯಗಳು ಮತ್ತು ಕೂಲಿ ಕಾರ್ಮಿಕರಿಗೆ ಈ ಕಾರ್ಯಕ್ರಮ ನೆರವಾಗಲಿದೆ.
ಈ ಬಗ್ಗೆ ಮಾತನಾಡಿರುವ ನೀತಾ ಅವರು, ಕರೊನಾ ವೈರಸ್​ ಇಡೀ ವಿಶ್ವ, ಭಾರತ ಮತ್ತು ಮಾನವೀಯತೆಗೆ ಹಿಂದೆದು ಕಂಡಿರದ ಒಂದು ಸಾಂಕ್ರಮಿಕವಾಗಿದೆ. ಇಂತಹ ಕಷ್ಟದ ಸಮಯದಲ್ಲಿ ನಮ್ಮ ಫೌಂಡೇಶನ್​ ವತಿಯಿಂದ ದಿನಗೂಲಿ ನೌಕರರು, ಕೊಳಗೇರಿ ನಿವಾಸಿಗಳು, ನಗರ ಸೇವಾ ಪೂರೈಕೆದಾರರು, ಕಾರ್ಮಿಕರು ಹಾಗೂ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಬಹುದೊಡ್ಡ ಊಟದ ಕಾರ್ಯಕ್ರಮದಡಿಯಲ್ಲಿ ಉಚಿತ ಊಟ ವಿತರಣೆ ಮಾಡಲಾಗುವುದು ಎಂದಿದ್ದಾರೆ.(ಏಜೆನ್ಸೀಸ್​)
https://www.instagram.com/p/B_PCGfnHhOa/
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:six − 4 =
Remember me
