ನವದೆಹಲಿ:ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಇಂಡಸ್ಟ್ರೀಸ್​ ಸಂಸ್ಥೆ 2020ರ ಅಕ್ಟೋಬರ್​ನಿಂದ ಡಿಸೆಂಬರ್​ ತಿಂಗಳವರೆಗಿನ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದೆ. ಈ ಮೂರು ತಿಂಗಳಲ್ಲಿ ಕಳೆದ ತ್ರೈಮಾಸಿಕಕ್ಕಿಂತ ಸುಮಾರು ಶೇ. 40ಕ್ಕಿಂತ ಹೆಚ್ಚು ಲಾಭ ಹಾಗೂ ಕಳೆದ ವರ್ಷದ ಮೂರನೇ ತ್ರೈಮಾಸಿಕಕ್ಕಿಂತ ಶೇ. 12.5 ಹೆಚ್ಚು ಲಾಭ ಪಡೆದುಕೊಂಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:31 ಬಾರಿ ಕೋವಿಡ್ ಪಾಸಿಟಿವ್​: ಟೆಸ್ಟ್​ ಮಾಡಿದಾಗಲೆಲ್ಲ ಬಿಡದ ಕರೊನಾ, ಮಹಿಳೆಯ ರಿಪೋರ್ಟ್​ ನೋಡಿ ವೈದ್ಯರು ಶಾಕ್​!​​
ಮೂರು ತಿಂಗಳಲ್ಲಿ ಸಂಸ್ಥೆಗೆ 1,37,829 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕ ಆದಾಯ ಶೇ. 7.4 ಹೆಚ್ಚಳ ಕಂಡಿದೆ. ಈ ತ್ರೈಮಾಸಿಕದಲ್ಲಿ 15,015 ಕೋಟಿ ರೂಪಾಯಿ ಲಾಭ ಸಿಕ್ಕಿದೆ. ಇದು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 41.6 ಅಧಿಕವಾಗಿದೆ. ಕಳೆದ ವರ್ಷದ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 12.5 ಏರಿಕೆಯಾಗಿದೆ.
ತೈಲ ಮಾರುಕಟ್ಟೆಯಲ್ಲಿ ಸಂಸ್ಥೆಗೆ ಕಳೆದ ವರ್ಷಕ್ಕಿಂತ ಈ ವರ್ಷ ನಷ್ಟ ಉಂಟಾಗಿದೆ. ಕಳೆದ ವರ್ಷದ 3ನೇ ತ್ರೈಮಾಸಿಕ್ಕೆ ಹೋಲಿಸಿದರೆ ಈ ವರ್ಷ 3ನೇ ತ್ರೈಮಾಸಿಕದಲ್ಲಿ ತೈಲ ಮಾರುಕಟ್ಟೆಯ ಆದಾಯದಲ್ಲಿ ಸಂಸ್ಥೆಯು ಶೇ. 22 ಇಳಿಕೆ ಕಂಡಿದೆ. ತೈಲದಿಂದ 1.23 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿರುವುದಾಗಿ ತಿಳಿಸಲಾಗಿದೆ. ಶೇರು ಮಾರುಕಟ್ಟೆಯಲ್ಲೂ ಸೆಪ್ಟೆಂಬರ್​ಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ.
ಇದನ್ನೂ ಓದಿ:ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಟ್ರಂಪ್​ಗೆ ಕೈ ಕೊಟ್ಟ ಮೆಲನಿಯಾ ಟ್ರಂಪ್​?! 15 ವರ್ಷಗಳ ದಾಂಪತ್ಯ ಅಂತ್ಯ?
ರಿಲಯನ್ಸ್​ನ ಹಲವು ಕಂಪನಿಗಳಲ್ಲಿ ಆದಾಯ ಹೆಚ್ಚಳ ಮತ್ತು ಇಳಿಕೆ ಎರಡೂ ಕಂಡುಬಂದಿದೆ. ಜಿಯೋ ಆದಾಯದಲ್ಲಿ ಚೇತರಿಕೆ ಉಂಟಾಗಿದೆ. ಸಂಸ್ಥೆ ಶೇಕಡಾ 32.88 ಷೇರನ್ನು ಹೂಡಿಕೆದಾರರಿಗೆ ಕೊಟ್ಟಿದ್ದು ಅದರಿಂದ 1.52 ಲಕ್ಷ ಕೋಟಿ ರೂಪಾಯಿ ಆದಾಯ ಪಡೆದಿದೆ.
2020 ರ ಡಿಸೆಂಬರ್ ಅಂತ್ಯದ ವೇಳೆಗೆ ಆರ್‌ಐಎಲ್‌ನ ಬಾಕಿ ಸಾಲ 2,57,413 ಕೋಟಿ ರೂ. ಆಗಿದ್ದರೆ, ನಗದು ಮತ್ತು ನಗದು ಸಮಾನತೆಯು 2,20,524 ಕೋಟಿ ರೂ. ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್​)
ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
