ಮುಂಬೈ:ಮುಖೇಶ್​ ಅಂಬಾನಿ ಅವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ನಿವ್ವಳ ಲಾಭವು ನಾಲ್ಕನೇ ತ್ರೈಮಾಸಿಕದಲ್ಲಿ ಸ್ಥಿರವಾಗಿ ಉಳಿದಿದ್ದು, 0.1% ರಷ್ಟು ಅಲ್ಪ ಏರಿಕೆ ಕಂಡಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 18,951 ಕೋಟಿ ರೂ. ಆಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಸೋಮವಾರ ತನ್ನ ಜನವರಿ-ಮಾರ್ಚ್ 2024 ರ ತ್ರೈಮಾಸಿಕ ಫಲಿತಾಂಶಗಳನ್ನು ಷೇರು ಮಾರುಕಟ್ಟೆಗೆ ವರದಿ ಮಾಡಿದೆ. ಇದರ ಪ್ರಕಾರ, ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 18,951 ಕೋಟಿ ರೂ. ಆಗಿದೆ. ಅಂದರೆ ಪ್ರತಿ ಷೇರಿಗೆ ರೂ. 28.01 ಆಗಿದೆ. ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ರೂ. 19,299 ಕೋಟಿ ಅಂದರೆ ಪ್ರತಿ ಷೇರಿಗೆ ರೂ. 28.52 ಲಾಭ ಆಗಿತ್ತು. ಇದೇ ವೇಳೆಯಲ್ಲಿ ಕಂಪನಿಯ ಆದಾಯದಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ವಾರ್ಷಿಕವಾಗಿ 2.64 ಲಕ್ಷ ಕೋಟಿ ರೂ. ಆದಾಯವು ತಲುಪಿ ಶೇ.11ರಷ್ಟು ಏರಿಕೆಯಾಗಿದೆ.
ಇದೇ ಸಮಯದಲ್ಲಿ, 2023-24 ರ ಸಂಪೂರ್ಣ ಹಣಕಾಸು ವರ್ಷದಲ್ಲಿ, ರಿಲಯನ್ಸ್ 69,621 ಕೋಟಿ ರೂಪಾಯಿಗಳ ದಾಖಲೆಯ ನಿವ್ವಳ ಲಾಭವನ್ನು ಗಳಿಸಿದರೆ, 2022-23 ರ ಹಣಕಾಸು ವರ್ಷದಲ್ಲಿ ಇದು 66,702 ಕೋಟಿ ರೂಪಾಯಿಗಳಷ್ಟಿತ್ತು. ಇದರೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಹಣಕಾಸು ವರ್ಷದಲ್ಲಿ 10 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಸಿದ ಮೊದಲ ಭಾರತೀಯ ಕಂಪನಿಯಾಗಿದೆ. ಕಂಪನಿಯ ವಹಿವಾಟು 2022-23ರ ಆರ್ಥಿಕ ವರ್ಷದಲ್ಲಿ 9.74 ಲಕ್ಷ ಕೋಟಿಯಷ್ಟಿತ್ತು. 2022-23ರ ಆರ್ಥಿಕ ವರ್ಷದಲ್ಲಿ 10 ಲಕ್ಷ ಕೋಟಿ ರೂ.ಗೆ ತಲುಪಿ. 2.6 ಪ್ರತಿಶತದಷ್ಟು ಹೆಚ್ಚಾಗಿದೆ.
ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಪ್ರತಿ ಈಕ್ವಿಟಿ ಷೇರಿಗೆ ರೂ. 10 ರ ಮಧ್ಯಂತರ ಲಾಭಾಂಶವನ್ನು (ಡಿವಿಡೆಂಡ್​) ಕಂಪನಿ ಘೋಷಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸೋಮವಾರ ಸ್ವಲ್ಪ ಕುಸಿತದೊಂದಿಗೆ 2,962.90 ರೂಪಾಯಿ ತಲುಪಿವೆ.
https://youtu.be/tYaJqryNEmM
ರೂ. 3ರಿಂದ 123ಕ್ಕೆ ಏರಿದ ಷೇರು ಬೆಲೆ: ಇವಿಗೆ ಸಾಲ ನೀಡುವ ಸ್ಟಾಕ್​ ಈಗ ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್​

ಒಂದು ವರ್ಷದಲ್ಲಿ 186% ಲಾಭ ನೀಡಿದ ಫಾರ್ಮಾ ಷೇರು: ಈಗ ಮತ್ತೆ 12% ಏರಿದ್ದೇಕೆ?

ಒಂದು ವರ್ಷದ ಗರಿಷ್ಠ ಬೆಲೆಯಿಂದ 15% ಕುಸಿದ ವಿಪ್ರೋ ಷೇರು: ಇದು ಹೂಡಿಕೆಗೆ ಸೂಕ್ತ ಸಮಯವೇ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:9 + 15 =
Remember me
