ಮುಂಬೈ:ಪ್ರಮುಖ ಸಾಮಾಜಿಕ ಜಾಲತಾಣ ಫೇಸ್​ಬುಕ್​ ಕಳೆದ ತಿಂಗಳು ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್ ಜಿಯೋದಲ್ಲಿ 5.7 ಬಿಲಿಯನ್​ ಡಾಲರ್​ (43,574 ಕೋಟಿ ರೂ.)ಹೂಡಿಕೆ ಮಾಡುವ ಮೂಲಕ ಶೇ.9.99 ರಷ್ಟು ಪಾಲುದಾರಿಕೆ ಪಡೆದುಕೊಂಡಿದೆ.
ಅದರ ಬೆನ್ನಲ್ಲೇ ರಿಯಲನ್ಸ್​ ಸಂಸ್ಥೆ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ರಿಲಯನ್ಸ್​​ ಇಂಡಸ್ಟ್ರೀಸ್​ ಎಲ್​ಟಿಡಿ (ಆರ್​ಐಎಲ್​)ನಿಂದ ಆನ್​ಲೈನ್​ನಲ್ಲಿ ಕಿರಾಣಿ ವಸ್ತುಗಳನ್ನು ಒದಗಿಸುವ ಸೇವೆ ‘ ಜಿಯೋ ಮಾರ್ಟ್​​’ ಪ್ರಾರಂಭವಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಸದ್ಯ ವಿದೇಶಿ ಇ-ಕಾಮರ್ಸ್​ ಸಂಸ್ಥೆಗಳಾದ ಅಮೇಜಾನ್​, ಫ್ಲಿಪ್​ಕಾರ್ಟ್​ಗಳು ಮುಂಚೂಣಿಯಲ್ಲಿದ್ದು, ಅಗತ್ಯ ದಿನಸಿ ವಸ್ತುಗಳನ್ನು ಆನ್​ಲೈನ್ ಮೂಲಕ ಪೂರೈಸುತ್ತಿವೆ. ಇದೀಗ ಜಿಯೋ ಮಾರ್ಟ್​ ಆನ್​ಲೈನ್ ಸರ್ವೀಸ್ ಪ್ರಾರಂಭವಾಗಿದ್ದು ಮಹತ್ವದ ಬೆಳವಣಿಗೆ ಎನಿಸಿದೆ. ಜಿಯೋ ಮಾರ್ಟ್​ನಲ್ಲಿ ದಿನಸಿ ವಸ್ತುಗಳು ಸೇರಿ ಎಲ್ಲ ಅಗತ್ಯ ವಸ್ತುಗಳೂ ಆನ್​ಲೈನ್​ ಮೂಲಕ ಲಭ್ಯ ಆಗಲಿವೆ.
ಇದನ್ನೂ ಓದಿ:ರಾಜ್ಯದಲ್ಲಿ 2000ದ ಗಡಿದಾಟಿದ ಕರೊನಾ ಸೋಂಕಿತರ ಸಂಖ್ಯೆ; ಡಿಸ್​ಚಾರ್ಜ್ ಆದವರು 654, ಐಸಿಯುನಲ್ಲಿ 17 ಮಂದಿ
ರಿಲಯನ್ಸ್​ ಇಂಡಸ್ಟ್ರೀಸ್​ನ ರಿಟೇಲ್​ ವಿಭಾಗವಾದ ರಿಲಯನ್ಸ್​ ಸ್ಮಾರ್ಟ್​ನ ಸಿಇಒ ದಾಮೋದರ್ ಮಾಲ್​ ಅವರು ಜಿಯೋ ಮಾರ್ಟ್​ ಪ್ರಾರಂಭವಾದ ಬಗ್ಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಹಾಗೇ ಜಿಯೋ ಮಾರ್ಟ್​ ತನ್ನ ಸೇವೆಯನ್ನು ದೇಶದ 200 ನಗರಗಳಲ್ಲಿ ಶೀಘ್ರವೇ ಪ್ರಾರಂಭ ಮಾಡಲಿದೆ ಎಂದೂ ತಿಳಿಸಿದ್ದಾರೆ.
ದಾಮೋದರ್ ಮಾಲ್​ ಅವರು ಟ್ವೀಟ್ ಮಾಡಿದ್ದಾರೆ ಹೊರತು ಇದುವರೆಗೂ ಮುಂಬೈನಲ್ಲಿರುವ ರಿಲಯನ್ಸ್​ ಪ್ರಧಾನ ಕಚೇರಿಯಿಂದ ಜಿಯೋ ಮಾರ್ಟ್​ ಪ್ರಾರಂಭವಾದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.ಕಳೆದ ತಿಂಗಳು ಫೇಸ್​ಬುಕ್​ ಜಿಯೋದಲ್ಲಿ ಹಣ ಹೂಡಿಕೆ ಮಾಡಿದ ಬೆನ್ನಲ್ಲೇ ರಿಲಯನ್ಸ್​ನಿಂದ ಜಿಯೋ ಮಾರ್ಟ್​ ಕೂಡ ಶುರುವಾಗಿದೆ. ಆದರೆ ಪರೀಕ್ಷಾರ್ಥವಾಗಿ ಮುಂಬೈನ ಕೆಲವು ಏರಿಯಾಗಳಿಗೆ ಮಾತ್ರ ಸರ್ವೀಸ್ ಕೊಡಲಾಗುತ್ತಿತ್ತು. ಇದೀಗ ದೊಡ್ಡ ಪ್ರಮಾಣದಲ್ಲಿ ಶುರು ಮಾಡಲಾಗಿದ್ದು, ಶೀಘ್ರದಲ್ಲೇ ದೇಶದ ಬೇರೆ ನಗರಗಳಲ್ಲೂ ಜಿಯೋ ಮಾರ್ಟ್​ ಸೇವೆ ಪ್ರಾರಂಭವಾಗಲಿದೆ.
ಇದನ್ನೂ ಓದಿ:ಭಾರತದಲ್ಲಿ ಲಾಕ್​ಡೌನ್​ ಸಾಮಾಜಿಕ ರೋಗನಿರೋಧಕ ಚುಚ್ಚುಮದ್ದಿನಂತೆ ಕೆಲಸ ಮಾಡಿದೆ!
ಸದ್ಯ ಲಾಕ್​ಡೌನ್​ ಬಿಕ್ಕಟ್ಟಿನಿಂದಾಗಿ ಅನೇಕ ನಗರಗಳಲ್ಲಿ ಜನಸಾಮಾನ್ಯರು ಮನೆಯಿಂದ ಹೊರಬೀಳದಂತಾಗಿದೆ. ಈ ಹೊತ್ತಲ್ಲೇ ರಿಲಯನ್ಸ್​ ಕೂಡ ಜಿಯೋ ಮಾರ್ಟ್​ ಪ್ರಾರಂಭ ಮಾಡಿದ್ದು, ಅನುಕೂಲವಾದಂತೆ ಆಗಿದೆ. ಹಾಗೇ ಅಮೆಜಾನ್​, ಫ್ಲಿಪ್​ಕಾರ್ಟ್ನಂತಹ ಇ-ಕಾಮರ್ಸ್​ ಸಂಸ್ಥೆಗಳಿಗೆ ಪ್ರತಿಸ್ಫರ್ಧಿಯಾಗಲಿದೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × one =
Remember me
