ನವದೆಹಲಿ:ಇದೇ ಮೊದಲ ಬಾರಿಗೆ ಭಾರತೀಯ ಕಂಪನಿಯೊಂದು ಜಾಗತಿಕ ದೈತ್ಯರಿಗೆ ಭೀತಿ ಮೂಡಿಸುವ ಮಟ್ಟದಲ್ಲಿ ಬೆಳೆದು ನಿಲ್ಲಲು ಸಜ್ಜಾಗಿದೆ.
ಡಿಜಿಟಲ್​ ಕ್ಷೇತ್ರದಲ್ಲಿ ರಿಲಯನ್ಸ್​ನ ಜಿಯೋ ಕ್ರಾಂತಿಯನ್ನೇ ಉಂಟು ಮಾಡಿದೆ. ವರ್ಷದ ಹಿಂದಷ್ಟೇ ಆರಂಭಿಸಿದ ಜಿಯೋ ಪ್ಲಾಟ್​ಫಾರಂಗೆ ಈಗಾಗಲೇ ಒಂದೂವರೆ ಲಕ್ಷ ಕೋಟಿ ರೂ. ಗೂ ಹೆಚ್ಚು ಬಂಡವಾಳ ಹರಿದು ಬಂದಿದೆ. ಗೂಗಲ್​, ಫೇಸ್​ಬುಕ್​ ಸೇರಿ ಜಾಗತಿಕ ಕಂಪನಿಗಳು ಇದರಲ್ಲಿ ಹೂಡಿಕೆ ಮಾಡಿವೆ.
ಇದನ್ನೂ ಓದಿ;ರಿಲಾಯನ್ಸ್​ ಪ್ರತಿಷ್ಠಾನ ಮುನ್ನಡೆಸ್ತಾರಾ ಮಗಳು ಇಶಾ ಅಂಬಾನಿ?
ಭಾರತದಲ್ಲಿ ಫೇಸ್​ಬುಕ್​ನ 40 ಕೋಟಿ ಬಳಕೆದಾರರಿದ್ದು, ಅವರನ್ನು ಜಿಯೋ ಮಾರ್ಟ್​ಗೆ ಸಂಪರ್ಕಿಸುವ ನಿಟ್ಟಿನಲ್ಲಿ ಮಹಾತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ. ಇದು ಸಹಜವಾಗಿಯೇ ರಿಟೇಲ್​ ಕ್ಷೇತ್ರದಲ್ಲಿ ಜಾಗತಿಕ ದೈತ್ಯರೆನಿಸಿರುವ ಅಮೆಜಾನ್​ ಹಾಗೂ ವಾಲ್​ ಮಾರ್ಟ್​ಗೆ ಭಾರಿ ಭೀತಿ ಮೂಡಿಸಿದೆ.
ಈವರೆಗೆ ತೈಲೋದ್ಯಮವನ್ನೇ ಪ್ರಮುಖ ಕ್ಷೇತ್ರವಾಗಿಸಿಕೊಂಡಿದ್ದ ರಿಲಯನ್ಸ್​ ಇಂಡಸ್ಟ್ರೀಸ್​ ಈಗ ಡಿಜಿಟಲ್​ ಬಳಿಕ ರಿಟೇಲ್​ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ. ಇದಕ್ಕಾಗಿ ಬಿಗ್​ ಬಜಾರ್​ ಸರಣಿಯ ಸೂಪರ್​ ಮಾರ್ಕೆಟ್​ಗಳನ್ನು ತನ್ನದಾಗಿಸಿಕೊಳ್ಳುತ್ತಿದೆ
ಇದನ್ನೂ ಓದಿ;ಅಮೆಜಾನ್​ ಹಿಂದಿಕ್ಕಿ ಬಿಗ್​ ಬಜಾರ್​ ತೆಕ್ಕೆಗೆ ಪಡೆದ ಅಂಬಾನಿ…?
ಆನ್​ಲೈನ್​ ಶಾಪಿಂಗ್​, ಕ್ಲೌಡ್​ ಕಂಪ್ಯೂಟಿಂಗ್​, ಟೆಲಿಕಾಮ್​, ಡಿಜಿಟಲ್​ ಪೇಮೆಂಟ್ಸ್​ ಮೊದಲಾದ ಕ್ಷೇತ್ರಗಳಲ್ಲಿ ವಿಸ್ತರಿಸಿಕೊಳ್ಳುತ್ತಿರುವ ರಿಲಯಲ್ಸ್​ ಡಿಜಿಟಲ್​ ಸಂಸ್ಥೆಯನ್ನು ಚೀನಾದ ಅಲಿಬಾಬಾ, ಟೆನ್ಸೆಂಟ್​ ಮೊದಲಾದ ಕಂಪನಿಗಳೊಂದಿಗೆ ಹೋಲಿಸಲಾಗುತ್ತಿದೆ.
ಜಿಯೋ ಮಾರ್ಟ್​ ಸದ್ಯಕ್ಕೆ 200 ನಗರಗಳಲ್ಲಿ ಸೇವೆಗಳನ್ನು ನೀಡುತ್ತಿದೆ. ಇದನ್ನು ದೇಶಾದ್ಯಂತ ಇನ್ನಷ್ಟು ನಗರಗಳಿಗೆ, ಇನ್ನಷ್ಟು ವರ್ಗಗಳಿಗೆ ಹಾಗೂ ಕ್ಷೇತ್ರಗಳಿಗೆ ವಿಸ್ತರಿಸಿಕೊಳ್ಳಲಿದೆ ಎಂದು ಮುಖೇಶ್​ ಅಂಬಾನಿ ತಿಳಿಸಿದ್ದಾರೆ. ಇದು ಸಹಜವಾಗಿಯೇ ಪ್ರತಿಸ್ಪರ್ಧಿ ಕಂಪನಿಗಳಾದ ಅಮೆಜಾನ್​ ಹಾಗೂ ವಾಲ್​ಮಾರ್ಟ್​ಗಳ ನಿದ್ದೆಗೆಡಿಸಿರುವುದಂತೂ ಹೌದು.
ಗುಣಲಕ್ಷಣಗಳಿಲ್ಲದವರಿಂದ ಕರೊನಾ ಹರಡುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಯಿಂದಲೇ ಹೇಳಿಕೆ; ಇಲ್ಲಿದೆ ಫ್ಯಾಕ್ಟ್​ಚೆಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eighteen =
Remember me
