ಮುಂಬೈ:ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್ (Reliance Power) ಕಂಪನಿಯ ಷೇರುಗಳ ಬೆಲೆಯಲ್ಲಿ ಬಲವಾದ ಏರಿಕೆ ಕಂಡುಬಂದಿದೆ. ರಿಲಯನ್ಸ್ ಪವರ್ ಷೇರುಗಳ ಬೆಲೆ ಮಂಗಳವಾರ ಶೇಕಡಾ 5 ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆದವು.
ಮಂಗಳವಾರ ಈ ಷೇರುಗಳ ಬೆಲೆ 25.60 ರೂ.ಗೆ ತಲುಪಿತು. ಸೋಮವಾರದಂದು ಕಂಪನಿಯ ಷೇರುಗಳ ಬೆಲೆ 24.41 ರೂ. ಇತ್ತು. ಕಳೆದ ಕೆಲವು ವರ್ಷಗಳಲ್ಲಿ ರಿಲಯನ್ಸ್ ಪವರ್ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಳೆದ 4 ವರ್ಷಗಳಲ್ಲಿ ಕಂಪನಿಯ ಷೇರುಗಳ ಬೆಲೆ ರೂ. 1 ರಿಂದ ರೂ 25ಕ್ಕೆ ಏರಿದೆ. ರಿಲಯನ್ಸ್ ಪವರ್ ಷೇರುಗಳ 52 ವಾರಗಳ ಗರಿಷ್ಠ ಬೆಲೆ 34.35 ರೂ. ಹಾಗೂ ಕನಿಷ್ಠ ಬೆಲೆ 11.06 ರೂ. ಇದೆ.ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 374.94. 2008ರ ಫೆಬ್ರುವರಿ 11ರಂದು ಈ ಬೆಲೆ ಇತ್ತು.
ಉನ್ನತ ಮಟ್ಟದಿಂದ ತೀವ್ರ ಕುಸಿತದ ನಂತರ, ರಿಲಯನ್ಸ್ ಪವರ್ ಷೇರುಗಳು ಕಳೆದ 4 ವರ್ಷಗಳಲ್ಲಿ ರಾಕೆಟ್ ನಂತಹ ಏರಿಕೆಯನ್ನು ಕಂಡಿವೆ.
ರಿಲಯನ್ಸ್ ಪವರ್ ಷೇರುಗಳ ಬೆಲೆ 27 ಮಾರ್ಚ್ 2020 ರಂದು 1.13 ರೂ. ಇತ್ತು. ಅನಿಲ್ ಅಂಬಾನಿಯವರ ಈ ಕಂಪನಿಯ ಷೇರುಗಳು 14 ಮೇ 2024 ರಂದು ರೂ 25.60 ತಲುಪಿದೆ. ಕಳೆದ 4 ವರ್ಷಗಳಲ್ಲಿ, ರಿಲಯನ್ಸ್ ಪವರ್ ಷೇರುಗಳ ಬೆಲೆ 2168% ರಷ್ಟು ಪ್ರಚಂಡ ಜಿಗಿತವನ್ನು ಕಂಡಿದೆ. ಕಳೆದ 3 ವರ್ಷಗಳಲ್ಲಿ, ಶೇಕಡಾ 275 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
ಕಳೆದ ಒಂದು ವರ್ಷದಲ್ಲಿ ಕೂಡ ಈ ಷೇರುಗಳ ಬೆಲೆ ಉತ್ತಮ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳು 121% ಏರಿಕೆಯಾಗಿದೆ. ಕಳೆದ 2 ತಿಂಗಳಲ್ಲಿ, 25% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ಕಂಪನಿಯ ಷೇರುಗಳ ಬೆಲೆ ಮಾರ್ಚ್ 13, 2024 ರಂದು ರೂ 20.38 ರಷ್ಟಿತ್ತು,
ಇತ್ತೀಚೆಗೆ ಕಂಪನಿಯು ತನ್ನ 45 MW ಪವನ ವಿದ್ಯುತ್ ಯೋಜನೆಯನ್ನು JSW ರಿನ್ಯೂವಬಲ್ ಎನರ್ಜಿ ಲಿಮಿಟೆಡ್‌ಗೆ 132.39 ಕೋಟಿ ರೂ.ಗೆ ಮಾರಾಟ ಮಾಡಿದೆ. ರಿಲಯನ್ಸ್ ಪವರ್ ತನ್ನ ಸಾಲವನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ.

ಆಹಾರ, ತರಕಾರಿ, ಇಂಧನ ಬೆಲೆ ಏರಿಕೆ: ಸಗಟು ಹಣದುಬ್ಬರ ಹೆಚ್ಚಳ
ವಾಹನ, ಲೋಹ ಷೇರುಗಳ ಖರೀದಿ ಭರಾಟೆ: ಷೇರು ಪೇಟೆಯಲ್ಲಿ ಸತತ 3ನೇ ದಿನ ಗುಟುರು ಹಾಕಿದ ಗೂಳಿ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:17 − 7 =
Remember me
