ಮುಂಬೈ:ಅನಿಲ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್​ (Reliance Infrastructure Ltd.) ಷೇರುಗಳಲ್ಲಿ ಮಂಗಳವಾರ ಬಿರುಸಿನ ಏರಿಕೆ ಕಂಡುಬಂದಿದೆ. ವಹಿವಾಟಿನ ಸಮಯದಲ್ಲಿ ಈ ಷೇರು ಶೇಕಡಾ 6.36ರಷ್ಟು ಜಿಗಿದು 177.25 ರೂ.ಗೆ ತಲುಪಿದೆ.
ಪ್ರಸ್ತುತ, ಕೆಲವು ತಜ್ಞರು ಈ ಸ್ಟಾಕ್ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕೆಂಬ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನು ಅನೇಕ ತಜ್ಞರು ಇನ್ನೂ ಸ್ಟಾಕ್​ನಲ್ಲಿ ಏರುಪ್ರವೃತ್ತಿ ಇದೆ ಎಂದಿದ್ದಾರೆ.
ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್​ ಷೇರುಗಳು ತಿದ್ದುಪಡಿ ಹಂತದಲ್ಲಿವೆ ಎಂದು ಪ್ರಭುದಾಸ್ ಲೀಲಾಧರ್‌ ಬ್ರೋಕರೇಜ್​ ಸಂಸ್ಥೆಯ ವೈಶಾಲಿ ಪಾರೇಖ್ ಅವರು ಈ ಷೇರುಗಳ ಕುರಿತು ಅಭಿಪ್ರಾಯ ತಿಳಿಸಿದ್ದಾರೆ. ಈ ಸ್ಟಾಕ್ ರೂ 150 ಮಟ್ಟದಲ್ಲಿ ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ ಎಂದಿದ್ದಾರೆ.
ಆನಂದ್ ರಾಠಿ ಷೇರ್ಸ್ ಆ್ಯಂಡ್ ಸ್ಟಾಕ್ ಬ್ರೋಕರ್ಸ್‌ನ ಜಿಗರ್ ಎಸ್ ಪಟೇಲ್ ಪ್ರಕಾರ, ಈ ಸ್ಟಾಕ್ ರೂ 165 ನಲ್ಲಿ ಬೆಂಬಲವನ್ನು ಪಡೆಯುತ್ತದೆ ಮತ್ತು ಬ್ರೇಕ್‌ಔಟ್ ರೂ 178 ನಲ್ಲಿ ಇರುತ್ತದೆ. ಷೇರು ರೂ 200 ತಲುಪಬಹುದು ಎಂದಿದ್ದಾರೆ.
Tips2Trades ನ ಮತ್ತೊಬ್ಬ ತಜ್ಞ AR ರಾಮಚಂದ್ರನ್ ಅವರು, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಷೇರು ಅಸಹಜವಾಗಿ ಕಾಣುತ್ತಿದೆ, ಆದರೆ ದೈನಂದಿನ ಚಾರ್ಟ್‌ನಲ್ಲಿ 182 ರೂ.ಗಳಲ್ಲಿ ಬಲವಾದ ಬ್ರೇಕ್‌ಔಟ್‌ನೊಂದಿಗೆ ಅತಿಯಾಗಿ ಮಾರಾಟವೂ ಆಗಿದೆ. ಅಲ್ಪಾವಧಿಯಲ್ಲಿ ಈ ಷೇರು 228 ರೂ.ಗಳ ಗುರಿಯನ್ನು ತಲುಪಬಹುದು ಎಂದಿದ್ದಾರೆ.
ರಿಲಯನ್ಸ್ ಇನ್‌ಫ್ರಾದಲ್ಲಿನ ಟ್ರೆಂಡ್ ದುರ್ಬಲವಾಗಿ ಕಾಣುತ್ತದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ರೂಪಕ್ ಡಿ ಹೇಳಿದ್ದಾರೆ. ಈ ಷೇರು 145-150 ರೂ.ಗೆ ಕುಸಿಯಬಹುದು ಎಂದು ಅವರು ಹೇಳಿದ್ದಾರೆ.
ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 2,641 ಮತ್ತು ಕನಿಷ್ಠ ಬೆಲೆ ರೂ. 8.65 ಇದೆ. ಕಳೆದ ಏಪ್ರಿಲ್‌ನಲ್ಲಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಷೇರುಗಳ ಬೆಲೆ 308 ರೂ. ಇತ್ತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾಗಿತ್ತು. ಈ ಷೇರು ಮೇ 2023 ರಲ್ಲಿ 131 ರೂ.ಗೆ ಕುಸಿದಿತ್ತು. ಇದು ಈ ಷೇರಿನ 52 ವಾರಗಳ ಕನಿಷ್ಠ ಬೆಲೆಯಾಗಿದೆ.
ಕೆಲವು ವರ್ಷಗಳ ಹಿಂದೆ ಈ ಷೇರು ರೂ. 2400 ಬೆಲೆಯನ್ನು ದಾಟಿತ್ತು ಎಂದು ಹೇಳೋಣ. ಇದಾದ ನಂತರ, ಲಾಭದ ಬುಕಿಂಗ್‌ನಿಂದಾಗಿ (ಲಾಭ ಮಾಡಿಕೊಳ್ಳಲು ಷೇರುಗಳ ಮಾರಾಟ) ಷೇರುಗಳು ಹೂಡಿಕೆದಾರರನ್ನು ದಿವಾಳಿಗೊಳಿಸಿದವು.
ಇದು ಅಂಬಾನಿ ಗ್ರೂಪ್ ಕಂಪನಿಯಾಗಿದ್ದು, ಇಂಜಿನಿಯರಿಂಗ್ ಮತ್ತು ನಿರ್ಮಾಣ ಸೇವೆಗಳಲ್ಲಿ ವಿದ್ಯುತ್, ರಸ್ತೆಗಳು, ಮೆಟ್ರೋ ರೈಲು ಮತ್ತು ಇತರ ಮೂಲಸೌಕರ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಮಾರ್ಚ್ 2024 ರವರೆಗೆ, ಪ್ರವರ್ತಕರು ಈ ಕಂಪನಿಯಲ್ಲಿ 16.50 ಪ್ರತಿಶತ ಪಾಲನ್ನು ಹೊಂದಿದ್ದಾರೆ. ಸಾರ್ವಜನಿಕ ಷೇರುದಾರರು ಶೇಕಡಾ 83.39 ಪಾಲನ್ನು ಹೊಂದಿದ್ದಾರೆ.

ಸಲ್ಮಾನ್​ ಖಾನ್ ಅಥವಾ ರಣಬೀರ್​ ಕಪೂರ್… ನೀವು ಯಾರನ್ನು ಮದುವೆಯಾಗುತ್ತೀರಿ? ಪುಟಾಣಿ ಅಭಿಮಾನಿ ಪ್ರಶ್ನೆಯಿಂದ ನಟಿ ಕತ್ರಿನಾ ಕೈಫ್​ ಪಾರಾಗಿದ್ದು ಹೇಗೆ?

ಮತ್ತೊಂದು ಡೀಪ್​ ಫೇಕ್​ ವಿಡಿಯೋದಲ್ಲಿ ನಟಿ ಆಲಿಯಾ ಭಟ್​: ಈ ಬಾರಿ ನಕಲು ಆಗಿದ್ದೇನು?

ಬಿಜೆಪಿ ಸೇರುವ ಕುರಿತು ನಿನ್ನೆವರೆಗೂ ಗೊತ್ತಿರಲಿಲ್ಲ: ಕೇಸರಿ ಪಡೆ ಸೇರ್ಪಡೆ ಬಗ್ಗೆ ನಟ ಶೇಖರ್ ಸುಮನ್ ಹೇಳಿದ್ದೇನು?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:12 + fifteen =
Remember me
