ಪಂಜಾಬ್:ಆಗಸ್ಟ್ 15 ರಂದು ಭಾರತವು 76ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದು, ಪಂಜಾಬ್‍ನ ಬರ್ನಾಲಾದ ಕುತ್ಬಾ ಬಹಮಾನಿಯಾ ಗ್ರಾಮದಲ್ಲಿ ಸಂತೋಷ ವ್ಯಾಪಿಸಿದೆ. ವೈವಿಧ್ಯತೆಯಲ್ಲಿ ಏಕತೆ ಎಂಬ ಸಂದೇಶದ ನಿಜವಾದ ಸಾರವು ಇಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತದೆ.
ಪ್ರಶಾಂತವಾದ ಹಳ್ಳಿಯ ವಾತಾವರಣದಲ್ಲಿ, ಇತ್ತೀಚೆಗೆ ಪುನರ್ ನಿರ್ಮಾಣವಾದ ವಿಭಜನೆಯ ಪೂರ್ವದ ನಾಸಿರ್ ಮಸೀದಿಯಿಂದ ಶುಕ್ರವಾರದ ಪ್ರಾರ್ಥನೆಯ ಕರೆ, ಆಜಾನ್ ಪ್ರತಿಧ್ವನಿಸಿದೆ.
ಇದನ್ನೂ ಓದಿ:ಕೋಮು ಸೌಹಾರ್ದತೆಗೆ ಧಕ್ಕೆ ಸಂದೇಶ 1 ತಿಂಗಳಲ್ಲಿ 21 ಪ್ರಕರಣ ದಾಖಲು
ಕುತ್ಬಾ ಬಹಮನಿಯಾದ ಸರಪಂಚ್ (ಗ್ರಾಮದ ಮುಖ್ಯಸ್ಥ) ಬೂಟಾ ಸಿಂಗ್, ವಿಭಜನೆಯ ನಂತರ ಮೂಲ ಮಸೀದಿಯು ಬಳಕೆಯಲ್ಲಿರಲಿಲ್ಲ. ಇದೀಗ ಅನೇಕ ವರ್ಷಗಳ ನಂತರ ಗ್ರಾಮಸ್ಥರು ತಮ್ಮ ಊರಿನಲ್ಲಿ ಮೊದಲ ಮಸೀದಿಯ ಉದ್ಘಾಟನೆಗೆ ಸಾಕ್ಷಿಯಾದರು. ಈ ಗ್ರಾಮದ ಮುಸ್ಲಿಂ ಜನರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರಿಂದ ಕೇವಲ ನಾಲ್ಕು ಕುಟುಂಬಗಳು ಮಾತ್ರ ಇಲ್ಲಿ ಉಳಿದಿವೆ.
“ನಾವು ಗುರುದ್ವಾರ ಸಂಕೀರ್ಣದೊಳಗೆ ಮಸೀದಿ ಮತ್ತು ಪೀರ್ ಮಜರ್ ಅನ್ನು ನಿರ್ವಹಿಸುತ್ತಿದ್ದೆವು. ಆದರೆ ನಾವು ಹಣವನ್ನು ಒಟ್ಟುಗೂಡಿಸಲು ಮತ್ತು ಮಸೀದಿಯನ್ನು ನವೀಕರಿಸಲು ನಿರ್ಧರಿಸಿದ್ದೇವೆ, ಆ ಹಣ ಇದೀಗ ವಿನಿಯೋಗ ಆಗಿದೆ” ಎಂದು ಬೂಟಾ ಸಿಂಗ್ ವಿವರಿಸುತ್ತಾರೆ.
ಇದನ್ನೂ ಓದಿ:ಯೇಸುಕ್ರಿಸ್ತ ಪ್ರತಿಮೆ ಭಗ್ನ: ಸೂಸೆಪಾಳ್ಯದಲ್ಲಿ ಕಿಡಿಗೇಡಿಗಳ ಕೃತ್ಯ ಕೋಮು ಸೌಹಾರ್ದತೆ ಕದಡುವ ಯತ್ನ
ವಿಭಜನೆಯ ಸಮಯದಲ್ಲಿ ಮುಸ್ಲಿಂ ಗ್ರಾಮಸ್ಥರು ಪಾಕಿಸ್ತಾನಕ್ಕೆ ತೆರಳಿದ‍ದರು. ಮಹಿಳೆಯೊಬ್ಬರು “ಹಳ್ಳಿಯ ಎಲ್ಲಾ ಸಮುದಾಯಗಳು ಒಟ್ಟಿಗೆ ಇರುವುದು ನನಗೆ ಸಂತೋಷ ತಂದಿದೆ” ಎಂದಿದ್ದಾರೆ. ಮಹತ್ವದ ಸಂದರ್ಭಗಳಲ್ಲಿ ಇಡೀ ಸಮುದಾಯವು ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಗ್ರಾಮಸ್ಥ ಮೊಹಮ್ಮದ್ ತಾರಿಕ್ ಹೇಳಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಕೇವಲ ಮುಸ್ಲಿಮರಿಗೆ ಮಾತ್ರ ಸಹಾಯ ಮಾಡಲಾಗುತ್ತದೆ ಎಂದರೆ ತಪ್ಪಾಗಬಹುದು. ಇಲ್ಲಿ ಎಲ್ಲಾ ಸಮುದಾಯದವರೂ ಸೇರಿ ಒಬ್ಬರೊಬ್ಬರಿಗೆ ಸಹಾಯ ಮಾಡುತ್ತಾರೆ.
ಬರ್ನಾಲಾದ ಮೂಮ್ ಗ್ರಾಮದಲ್ಲಿ, ಪಂಡಿತ ಕುಟುಂಬವೊಂದು “ಅಮನ್ ಮಸೀದಿ” ನಿರ್ಮಿಸಲು ತಮ್ಮ ಭೂಮಿಯನ್ನು ದಾನ ಮಾಡಿತ್ತು. ಗ್ರಾಮವು 2017ರಲ್ಲಿ ಒಟ್ಟಾಗಿ 12 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿತ್ತು. ಮನ್ಪ್ರೀತ್ ಭಾನೋಟ್ ಅವರ ತಾಯಿಯ ಅಜ್ಜನ ಬೆಂಬಲದೊಂದಿಗೆ 2020ರಲ್ಲಿ ನಿರ್ಮಾಣ ಪೂರ್ಣಗೊಂಡಿತು.
ಇದನ್ನೂ ಓದಿ:ಕೋಮುಸೌಹಾರ್ದ ಕೆಡಿಸುವ ಟ್ವೀಟ್ಸ್​ : ಟ್ವಿಟರ್​ ಇಂಡಿಯ ಎಂಡಿಗೆ ಪೊಲೀಸ್ ನೋಟೀಸ್
ಮನ್ಪ್ರೀತ್ ಭಾನೋಟ್ ಪ್ರಕಾರ “ಮಂದಿರ, ಮಸೀದಿ ಮತ್ತು ಗುರುದ್ವಾರ ಎಲ್ಲವೂ ಹತ್ತಿರದಲ್ಲಿವೆ. ಇಲ್ಲಿನ 12 ಕುಟುಂಬಗಳು ಮಸೀದಿಯನ್ನು ನಿರ್ಮಿಸಲು ಒಗ್ಗೂಡಿದ್ದರಿಂದ ನನ್ನ ಅಜ್ಜ ಭೂಮಿಯನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡರು.
45 ವರ್ಷದ ಕಾರ್ಮಿಕ ನಜಾಮ್ ಖಾನ್ ಅವರು ಪ್ರಾರ್ಥನೆಗಾಗಿ ಇಲ್ಲಿಗೆ ಬರುತ್ತಾರೆ. ಮತ್ತು ಗ್ರಾಮದಲ್ಲಿ ಶಿವ ಮಂದಿರವನ್ನು ನಿರ್ಮಿಸಲು ಸಹಾಯ ಮಾಡಿದ ಹಲವಾರು ಮುಸ್ಲಿಮರಲ್ಲಿ ಅವರೂ ಒಬ್ಬರು. ಸಿಖ್ ಕುಟುಂಬವೊಂದು ಶಿವ ಪಾರ್ವತಿ ಪ್ರತಿಮೆಗಳನ್ನು ಕೊಡುಗೆಯಾಗಿ ನೀಡಿತ್ತು.
ಇದನ್ನೂ ಓದಿ:ಕೋಮುವಾದಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ; ಬಹುತ್ವ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ
ನಮಾಜ್ ನಂತರ, ಇಡೀ ಸಮುದಾಯವು ಮಂದಿರಕ್ಕೆ ಭೇಟಿ ನೀಡುತ್ತದೆ. ದೇವಾಲಯದ ಅರ್ಚಕರು ವಿತರಿಸಿದ ಪ್ರಸಾದವನ್ನು ಸ್ವೀಕರಿಸುತ್ತಾರೆ. ಅವರು ಶಿವರಾತ್ರಿ, ಈದ್ ಅಥವಾ ಗುರುಪುರಬ್ ಆಗಿರಲಿ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತಾರೆ. ನಂತರ ಗ್ರಾಮಸ್ಥರು ಸಾಮೂಹಿಕವಾಗಿ ಗುರುದ್ವಾರಕ್ಕೆ ಭೇಟಿ ನೀಡುತ್ತಾರೆ. ಆಗಾಗ್ಗೆ ಧರ್ಮದಿಂದಾಗಿ ಜಗಳಗಳು ನಡೆಯುತ್ತಿರುವಾಗ ಈ ಗ್ರಾಮಗಳು ಏಕತೆಯ ಸಂದೇಶ ಸಾರುವ ಪುಟ್ಟ ದೀಪಗಳಾಗಿ ಕಾರ್ಯನಿರ್ವಹಿಸುತ್ತವೆ.(ಏಜೆನ್ಸೀಸ್)
ದಾವಣಗೆರೆಯಲ್ಲಿನ ಕೆರೆ ಕಲುಷಿತ? ನೀರು ಸರಬರಾಜು ಸ್ಥಗಿತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + twenty =
Remember me
