ಬೆಂಗಳೂರು:ಮಾರಕ ಕರೊನಾ ವೈರಸ್​ ಸಂಹಾರಕ್ಕೆ ನಂಜನಗೂಡಿನ ಜುಬಿಲೆಂಟ್​ ಕಾರ್ಖಾನೆಯಲ್ಲಿ ತಯಾರಾಗುತ್ತಿರುವ ಲಸಿಕೆ ಬಳಸಿಕೊಳ್ಳಲು ಕೇಂದ್ರೀಯ ಔಷಧ ಮಾನದಂಡ ಹಾಗೂ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ) ಅನುಮತಿ ನೀಡಿದೆ.
ಪರವಾನಗಿ ನೀಡುವ ಸಮಯದಲ್ಲಿ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿ ಲಸಿಕೆಯನ್ನು 10 ದಿನಗಳ ಕಾಲ ವಿಸ್ತರಿತ ಬಳಕೆಗೆ ಸಿಡಿಎಸ್​ಸಿಒ ಅನುಮತಿ ನೀಡಿದೆ ಎಂದು ಹೇಳಲಾಗಿದೆ. ಔಷಧ ನಿಯಂತ್ರಣಕ್ಕೆ ದೇಶದಲ್ಲಿ ಅತ್ಯುಚ್ಛ ಸಂಸ್ಥೆಯಾಗಿರುವ ಸಿಡಿಎಸ್​ಸಿಒ ಆ್ಯಂಟಿವೈರಲ್​ ಲಸಿಕೆ ‘ರೆಮ್​ಡೆಸಿವಿರ್​’ಅನ್ನು ಶಂಕಿತ ಹಾಗೂ ಸೋಂಕು ದೃಢಪಟ್ಟು ಗಂಭೀರ ಸ್ಥಿತಿಯಲ್ಲಿರುವ ಮಕ್ಕಳು ಹಾಗೂ ವಯಸ್ಕ ರೋಗಿಗಳ ಚಿಕಿತ್ಸೆಗೆ ಬಳಸಬಹುದು ಎಂದು ತಿಳಿಸಿದೆ.
ಇದನ್ನೂ ಓದಿ;ಜುಬಿಲೆಂಟ್​ಗೆ  ಅನುಮತಿ ನೀಡಿದ ಗಿಲಿಯಾಡ್​ ಸೈನ್ಸ್​
ಈ ಮೊದಲು ಈ ಲಸಿಕೆಯನ್ನು ಗರಿಷ್ಠ ಐದು ದಿನಗಳ ಬಳಕೆಗೆ ಭಾರತದ ಔಷಧ ಮಹಾನಿಯಂತ್ರಣಾಧಿಕಾರಿ ಸಂಸ್ಥೆಯ ಡಾ.ವಿ.ಜಿ. ಸೋಮಾನಿ ಅನುಮತಿ ನೀಡಿದ್ದರು. ಇದೀಗ ಹತ್ತು ದಿನಗಳ ಬಳಕೆಗೆ ವಿಸ್ತರಿಸಲಾಗಿದೆ.ರೆಮ್​ಡಿಸಿವಿರ್​ ಔಷಧವನ್ನು ಅಮೆರಿಕದ ಗಿಲಿಯಾಡ್​ ಸಂಸ್ಥೆ ಸಂಶೋಧಿಸಿದೆ. ಇದರ ಹಿಂದೆಯೂ ರೋಚಕ ಕತೆಯಿದೆ. ಯಾವ ಉದ್ದೇಶಕ್ಕಾಗಿ ಇದನ್ನು ಸಂಶೋಧಿಸಲಾಗಿತ್ತೋ ಅದರಲ್ಲಿ ಇದು ಯಶಸ್ವಿಯಾಗಿರಲಿಲ್ಲ. ಬದಲಾಗಿ ಕರೊನಾಗೆ ಪರಿಣಾಮಕಾರಿ ಎನಿಸಿದೆ.
ಇದನ್ನೂ ಓದಿ;ರೆಮ್​ಡೆಸಿವಿರ್​ ಸಂಶೋಧನೆ ಹಿಂದಿನ ರೋಚಕ ಕತೆ
ಸದ್ಯ ಈ ಔಷಧವನ್ನು ಭಾರತವೂ ಸೇರಿ 123 ದೇಶಗಳಲ್ಲಿ ಉತ್ಪಾದಿಸಿ ಮಾರಾಟ ಮಾಡಲು ನಂಜನಗೂಡಿನ ಜುಬಿಲೆಂಟ್​ ಸಂಸ್ಥೆ ಅನುಮತಿ ಪಡೆದಿದೆ. ಈಗಾಗಲೇ ಈ ಲಸಿಕೆಯ ಉತ್ಪಾದನೆಗೆ ಚಾಲನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೇರೆ ಬೇರೆ ದೇಶಗಳಲ್ಲಿ ರೆಮ್​ಡೆಸಿವಿರ್​ ಬಳಕೆಗೆ ಶಿಫಾರಸು ಮಾಡಲಾಗಿತ್ತದರೂ, ಭಾರತ ಇನ್ನೂ ಅವಕಾಶ ನೀಡಿರಲಿಲ್ಲ. ಇದೀಗ ಭಾರತವೂ ಈ ಲಸಿಕೆ ಬಳಕೆಗೆ ಮುಂದಾಗಿದೆ. ಕರೊನಾ ರೋಗಿ ಚೇತರಿಸಿಕೊಳ್ಳುವ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುವಲ್ಲಿ ಈ ಔಷಧ ಪರಿಣಾಮಕಾರಿ ಎಂದು ಚೀನಾ, ಜಪಾನ್​, ಅಮೆರಿಕ ಸೇರಿ ಹಲವು ದೇಶಗಳಲ್ಲಿ ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ.
ಕರೊನಾಗೆ ಲಸಿಕೆ ಸಜ್ಜಾದರೆ, ಮುಂದೊದಗುವ ಪರಿಸ್ಥಿತಿ ಭಾರಿ ಭೀಕರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
