ಕಲ್ಕತ್ತಾ:ಸಾಮಾಜಿಕ ಮಾಧ್ಯಮದ ಯುಗದಲ್ಲಿ ಯಾರು ಯಾವಾಗ ಬೇಕಾದರೂ ಫೇಮಸ್​ ಆಗಬಹುದು ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವಾರು ನಿದರ್ಶನಗಳಿವೆ. ಒಂದು ಸಣ್ಣ ವಿಡಿಯೋದ ಮೂಲಕ ಅನೇಕರು ರಾತ್ರೋ ರಾತ್ರಿ ಸ್ಟಾರ್​ಗಳಾದ ಹಲವು ನಿದರ್ಶನಗಳನ್ನು ನಮ್ಮ ಕಣ್ಣ ಮುಂದಿವೆ. ಆದರೆ, ಜನ ಎಷ್ಟು ಬೇಗ ಕ್ಲಿಕ್​ ಆಗುತ್ತಾರೋ ಅಷ್ಟೇ ವೇಗವಾಗಿ ನೇಪಥ್ಯಕ್ಕೆ ಸರಿಯುತ್ತಾರೆ. ಇದಕ್ಕೆ ಪೂರಕ ಭುವನ್​ ಬದ್ಯಕರ್​ ಎಂದು ಹೇಳಬಹುದಾಗಿದೆ.
2022ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಟ್ರೆಂಡ್​ ಸೃಷ್ಟಿಸಿದ್ದ ಕಚ್ಚಾ ಬಾದಾಮ್ ಹಾಡು ಎಲ್ಲರಿಗೂ ನೆನಪಿರುತ್ತದೆ. ಈ ಹಾಡಿಗೆ ಸಾಮಾನ್ಯರಿಂದ ಹಿಡಿದು ಖ್ಯಾತ ಸೆಲೆಬ್ರಿಟಿಗಳು ಸ್ಟೆಪ್ಸ್​ ಹಾಕಿದ್ದರು. ಈ ಹಾಡಿನ ಹಿಂದಿರುವ ಧ್ವನಿಯ ಕುರಿತು ಜನರು ಅಷ್ಟಾಗಿ ಯಾರು ತಲೆಕೆಡಿಸಿಕೊಂಡಿರಲಿಲ್ಲ. ಹಾಡು ಹಾಡಿದವರು ಭುವನ್​ ಬದ್ಯಕರ್​ ಎಂದು ತಿಳಿದ ಕೂಡಲೇ ಅವರಿಗೆ ಸಿಕ್ಕ ಜನಮನ್ನಣೆ ಅಷ್ಟಿಷ್ಟಲ್ಲಾ.
ಭುವನ್ ಬದ್ಯಕರ್ ಅವರು ಮೂಲತಃ ಪಶ್ಚಿಮ ಬಂಗಾಳದ ಬಿರ್ಭೊಮ್ ಜಿಲ್ಲೆಯ ಲಕ್ಷೀನಾರಾಯಣ ತಾಲೂಕಿನ ಕುರಲ್ಜುರಿ ಗ್ರಾಮದ ದುಬ್ರಾಜ್ಪುರದ ನಿವಾಸಿ. ವೃತ್ತಿಯಲ್ಲಿ ಕಡೆಲೇಕಾಯಿ ವ್ಯಾಪಾರಿಯಾಗಿರುವ ಇವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯಿದ್ದಾರೆ. ಪ್ರತಿನಿತ್ಯ ಸೈಕಲ್ ತುಳಿದುಕೊಂಡು ದೂರದ ಊರುಗಳಿಗೆ ಕಡಲೇಕಾಯಿ ಮಾರಾಟ ಮಾಡಲು ಹೋಗುತ್ತಿದ್ದ ಇವರು ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹಾಡುತ್ತಿದ್ದರು. ಆದರೆ, ಕಚ್ಚಾ ಬಾದಾಮ್​ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬಳಿಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್​ನಲ್ಲಿದ್ದರು. ಆ ಬಳಿಕ ಕಾಣೆಯಾದ ಇವರ ಬಗ್ಗೆ ಜನರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಭುವನ್​ ಅವರು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಇವರ ವಿಡಿಯೋ ವೈರಲ್​ ಆಗಿದೆ.
View this post on InstagramA post shared by bhuban badyakar official (fan club sanju ) (@bhuban_0.2)

A post shared by bhuban badyakar official (fan club sanju ) (@bhuban_0.2)
ಇದನ್ನೂ ಓದಿ:ಕಾರು-ಲಾರಿ ನಡುವೆ ಭೀಕರ ರಸ್ತೆ ಅಪಘಾತ; ಆರು ಮಂದಿ ಸ್ಥಳದಲ್ಲೇ ಸಾವು
ಕಳೆದ ಕೆಲ ತಿಂಗಳುಗಳಿಂದ ಕಣ್ಮರೆಯಾಗಿದ್ದ ಭುವನ್​ ತಮ್ಮ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಇತ್ತ ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕರು ಇವರ ಡ್ಯಾನ್ಸ್​ಅನ್ನು ಮೆಚ್ಚಿ ಕಮೆಂಟ್​ ಹಾಕುತ್ತಿದ್ದಾರೆ. ಹೊಸ ಹಾಡು ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಕೇಳುತ್ತಿದ್ದಾರೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಜೀವನೋಪಾಯಕ್ಕಾಗಿ ಈಗಲೂ ಊರೂರು ತಿರುಗುತ್ತಾ ಕಡಲೇಕಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
“ನಾನು ಬಿಡುವಿನ ಸಮಯದಲ್ಲಿ ಹಾಡುಗಳನ್ನು ಬರೆದು ವ್ಯಾಪಾರದ ಸಮಯದಲ್ಲಿ ಹಾಡಿ ಜನರನ್ನು ಹೆಚ್ಚು ರಂಜಿಸುತ್ತಿದ್ದೆ. ನಾನು ಹಾಡುವ ಹಾಡುಗಳ ಬಗ್ಗೆ ಜನರು ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂದು ಬಯಸುತ್ತೇನೆ ಮತ್ತು ಈ ಮೂಲಕ ನಮಗೆ ಜೀವನೋಪಾಯಕ್ಕಾಗಿ ಸರ್ಕಾರ ಶಾಶ್ವತ ವ್ಯವಸ್ಥೆಗಳನ್ನು ಮಾಡಿಕೊಡಬೇಕು,” ಎಂದು ಭುವನ್​ ಬದ್ಯಕರ್​ ಆಗ್ರಹಿಸಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:11 − four =
Remember me
