ನವದಹೆಲಿ:ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸರಾಸರಿ ಮಾಸಿಕ ಬ್ಯಾಲೆನ್ಸ್‌ ನಿರ್ವಹಣೆ ಮಾಡದ ಗ್ರಾಹಕರಿಂದ ಕೋಟಿಗಟ್ಟಲೆ ದಂಡ ವಸೂಲಿ ಮಾಡುತ್ತಿವೆ. ಈ ದಂಡ ವ್ಯವಸ್ಥೆ ಪ್ರಧಾನಿ ಮೋದಿಯವರ ಚಕ್ರವ್ಯೂಹ ತಂತ್ರದ ಭಾಗವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ (ಜುಲೈ 30) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿ:‘ಕಮಲ’ ಚಕ್ರವ್ಯೂಹವನ್ನು ಆರು ಜನರು ನಿಯಂತ್ರಿಸುತ್ತಾರೆ; ರಾಹುಲ್​ಗಾಂಧಿ
ಪ್ರಧಾನಿ ನರೇಂದ್ರ ಮೋದಿಯವರ ಅಮೃತಕಾಲದಲ್ಲಿ ಸಾಮಾನ್ಯ ಭಾರತೀಯರ ಖಾಲಿ ಜೇಬನ್ನು ಸಹ ಕತ್ತರಿಸಲಾಗುತ್ತಿದೆ. ತನ್ನ ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಮನ್ನಾ ಮಾಡಿದ ಸರ್ಕಾರ ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಳ್ಳಲು ಸಾಧ್ಯವಾಗದ ಬಡ ಜನರಿಂದ 8,500 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ದಂಡ ಪದ್ಧತಿ ಮೋದಿಯವರ ಚಕ್ರವ್ಯೂಹದ ಬಾಗಿಲಾಗಿದ್ದು, ಈ ಮೂಲಕ ಸಾಮಾನ್ಯ ಭಾರತೀಯನ ಬೆನ್ನು ಮುರಿಯುವ ಪ್ರಯತ್ನ ನಡೆಯುತ್ತಿದೆ. ಆದರೆ ಭಾರತದ ಜನರು ಅಭಿಮನ್ಯು ಅಲ್ಲ, ಅವರು ಅರ್ಜುನರು ಎಂಬುದನ್ನು ನೆನಪಿಡಿ. ಚಕ್ರವ್ಯೂಹವನ್ನು ಒಡೆಯುವ ಮೂಲಕ ನಿಮ್ಮ ಪ್ರತಿಯೊಂದು ದೌರ್ಜನ್ಯಕ್ಕೆ ಹೇಗೆ ಉತ್ತರಿಸಬೇಕೆಂದು ಅವರಿಗೆ ತಿಳಿದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ.
नरेंद्र मोदी के अमृतकाल में आम भारतीयों की ‘खाली जेब’ भी काटी जा रही है।मित्र उद्योगपतियों के 16 लाख करोड़ माफ कर देने वाली सरकार ने ‘मिनिमम बैलेंस’ तक मेंटेन न कर पा रहे गरीब भारतवासियों से 8500 करोड़ रुपए वसूल लिए हैं।‘जुर्माना तंत्र’ मोदी के चक्रव्यूह का वो द्वार है जिसके…
21ನೇ ಶತಮಾನದಲ್ಲಿ ರಚಿಸಲಾದ ಚಕ್ರವ್ಯೂಹದಲ್ಲಿ ದ್ರೋಣಾಚಾರ್ಯ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮತ್ತು ಶಕುನಿ ಸೇರಿ ಅಭಿಮನ್ಯುವನ್ನು ಸುತ್ತವರೆದು ಕೊಂದರು. ಆದರೆ ಇಂದಿನ ಚಕ್ರವ್ಯೂಹದಲ್ಲಿ ನರೇಂದ್ರ ಮೋದಿ, ಅಮಿತ್ ಷಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಈ ಆರು ಜನರಿದ್ದಾರೆ. ಈ ಆರು ಜನರ ಚಕ್ರವ್ಯೂಹ ಕೇಂದ್ರವನ್ನು ನಿಯಂತ್ರಿಸುತ್ತಿದೆ ಎಂದು ಈ ಹಿಂದೆ ರಾಹುಲ್​ಗಾಂಧಿ ಹೇಳಿದ್ದರು. (ಏಜೆನ್ಸೀಸ್​​)
ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಲಿದೆ; ಪ್ರಧಾನಿ ಮೋದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − nine =
Remember me
