ನವದೆಹಲಿ:ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್​ ಅವರ ಮೊದಲ ವರ್ಷದ ಪುಣ್ಯ ತಿಥಿ ಇಂದು. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಕೇಂದ್ರ ಸಚಿವರು ಸುಷ್ಮಾ ಅವರನ್ನು ನೆನಪಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಿದ್ದಾರೆ.ಇದನ್ನೂ ಓದಿ:ಚೀನಾ ಸೈನಿಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಯಾಕೆ ಹೇಳಿದರು?-ರಾಹುಲ್ ಗಾಂಧಿ
ಕಳೆದ ವರ್ಷ ಸುಷ್ಮಾ ಸ್ವರಾಜ್​ ಮೃತಪಟ್ಟಾಗ, ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾವು ಮಾತಾಡಿದ್ದ ವಿಡಿಯೋವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿರುವ ಪ್ರಧಾನಿ, ಸುಷ್ಮಾ ಜಿ ಅವರ ಮೊದಲ ವರ್ಷದ ಪುಣ್ಯತಿಥಿ ಇಂದು. ಅವರ ಅಕಾಲಿಕ ನಿಧನ ಅನೇಕರಿಗೆ ದುಃಖ ತಂದಿದೆ. ಅವರು ನಿಸ್ವಾರ್ಥವಾಗಿ ದೇಶಸೇವೆ ಮಾಡಿದ್ದಾರೆ. ವಿಶ್ವಮಟ್ಟದಲ್ಲಿ ಭಾರತಕ್ಕೆ ಸ್ಪಷ್ಟ ಧ್ವನಿಯಾಗಿದ್ದರು ಎಂದು ಹೇಳಿದ್ದಾರೆ.
ಕಳೆದ ವರ್ಷ ಹಮ್ಮಿಕೊಂಡಿದ್ದ ಸುಷ್ಮಾ ಸ್ವರಾಜ್​ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನರೇಂದ್ರ ಮೋದಿಯವರು, ಸುಷ್ಮಾ ಸ್ವರಾಜ್ ಭಾರತದ ಗೌರವಾನ್ವಿತ ನಾಯಕರಲ್ಲಿ ಒಬ್ಬರು ಎಂದು ಹೊಗಳಿದ್ದರು. ಅಲ್ಲದೆ, ಅವರೊಬ್ಬ ಬಹುಮುಖ ಪ್ರತಿಭೆಯುಳ್ಳ ನಾಯಕಿ. ಸಮರ್ಥ ವಾಗ್ಮಿ. ಅವರ ಮಾತುಗಳು ತುಂಬ ಪರಿಣಾಮಕಾರಿಯಾಗಿರುತ್ತದೆ ಮತ್ತು ಸ್ಫೂರ್ತಿದಾಯಕವಾಗಿರುತ್ತದೆ ಎಂದು ಹೇಳಿದ್ದರು. (ಏಜೆನ್ಸೀಸ್​)
Remembering Sushma Ji on her first Punya Tithi. Her untimely and unfortunate demise left many saddened. She served India selflessly and was an articulate voice for India at the world stage.
Here is what I had spoken at a prayer meet in her memory.https://t.co/nHIXCw469P
— Narendra Modi (@narendramodi)August 6, 2020

ಶಿಲಾನ್ಯಾಸದ ನಂತರ ಪ್ರಧಾನಿ ಮೋದಿ ಜೈ ಶ್ರೀರಾಮ್​ ಹೇಳದೆ, ಜೈ ಸಿಯಾ ರಾಮ್​ ಎಂದೇ ಹೇಳಿದ್ದೇಕೆ? ಕಾರಣ ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
