ನವದೆಹಲಿ :ಭಾರತದ ಅತ್ಯುನ್ನತ ಕ್ರೀಡಾ ಪುರಸ್ಕಾರಕ್ಕೆ ಇಂದಿನವರೆಗೆ ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿ ಎಂಬ ಹೆಸರಿತ್ತು. ಇಂದು ಬೆಳಿಗ್ಗೆ ಅದಕ್ಕೆ ಹಾಕಿ ದಿಗ್ಗಜ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವುದಾಗಿ ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಘೋಷಿಸಿದರು.
ಕ್ರೀಡಾ ಪ್ರಶಸ್ತಿಗೆ ಕ್ರೀಡಾ ಕ್ಷೇತ್ರದವರದೇ ಹೆಸರು ಇಡುವುದು ಉತ್ತಮ ಕ್ರಮವಾಗಿದೆ ಎಂದು ಹಲವಾರು ಜನರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅದರೊಂದಿಗೇ, ವಿಪಕ್ಷ ನಾಯಕರೂ ಸೇರಿದಂತೆ ಹಲವರು ಗುಜರಾತ್​ನ ಮೊಟೆರಾ ಕ್ರಿಕೆಟ್​ ಕ್ರೀಡಾಂಗಣಕ್ಕೆ ಇತ್ತೀಚೆಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಕ್ರೀಡಾಂಗಣಗಳಿಗೂ ರಾಜಕಾರಣಿಗಳ ಹೆಸರಿನ ಹಂಗು ಬೇಡ ಎಂದು ಕೆಲವರು ಟ್ವಿಟರ್​ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಯುವ ಕ್ರೀಡಾಪಟುಗಳಿಗೆ ಸರ್ಕಾರಿ ನೆರವು; ಶಾಸಕ ರಾಜಾ ವೆಂಕಟಪ್ಪ ನಾಯಕ ಭರವಸೆ
“ಇದು ಮೋದಿ ಸರ್ಕಾರದಿಂದ ಉತ್ತಮ ನಿರ್ಧಾರವಾಗಿದೆ. ನರೇಂದ್ರ ಮೋದಿ ಸ್ಟೇಡಿಯಂ ಮತ್ತು ಜೈಟ್ಲಿ ಸ್ಟೇಡಿಯಂಗೂ ಮರುನಾಮಕರಣ ಮಾಡುವರೆಂದು ಆಶಿಸುತ್ತೇನೆ. ಎಲ್ಲಾ ರಾಜಕಾರಣಿಗಳ ಹೆಸರನ್ನು ತೆಗೆಯಿರಿ” ಎಂದು ಯೂಟ್ಯೂಬರ್​ ಧೃವ ರಾಠಿ ಬರೆದಿದ್ದಾರೆ. ಮೋದಿ ಸ್ಟೇಡಿಯಂ ಹೆಸರನ್ನು ಕಪಿಲ್ ದೇವ್​ ಅಥವಾ ಸಚಿನ್ ಸ್ಟೇಡಿಯಂ ಎಂದು ಬದಲಿಸಿ ಎಂದು ಅಮರ್​ಕಾಂತ್​ ಸಿಂಗ್​ ಎಂಬುವರು ಸಲಹೆ ನೀಡಿದ್ದಾರೆ.
ಈ ರೀತಿ ಸಂದೇಶ ಕಳುಹಿಸಿದವರಲ್ಲಿ ಕ್ರಿಕೆಟಿಗ ಇರ್​​ಫಾನ್ ಪಠಾನ್ ಕೂಡ ಒಬ್ಬರು. “ಕ್ರೀಡಾಪಟುವಿಗೆ ಮಾನ್ಯತೆ ಸಿಗುವುದು, ಅವರ ಮೇಲೆ ಪ್ರಶಸ್ತಿಯನ್ನು ಹೆಸರಿಸುವುದು ಉತ್ತಮ ಬೆಳವಣಿಗೆಯಾಗಿದೆ… ಭವಿಷ್ಯದಲ್ಲಿ ಕ್ರೀಡಾಂಗಣಗಳಿಗೂ ಕ್ರೀಡಾಪಟುಗಳ ಹೆಸರು ಸಿಗಲಿವೆ ಎಂದು ಆಶಿಸುತ್ತೇನೆ” ಎಂದು ಪಠಾಣ್​ ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್)
ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್​ಚಂದ್​ ಹೆಸರು

ಬೆನ್ನು, ಸೊಂಟ ನೋವು ನಿಯಂತ್ರಣಕ್ಕೆ ಈ ಆಸನ ಉಪಯುಕ್ತ

ಸಾಧನೆಯ ಪಥದಲ್ಲಿ ನೆರವಾದ ಟ್ರಕ್​ ಚಾಲಕರನ್ನು ಸತ್ಕರಿಸಿದ ಮೀರಾಬಾಯಿ ಚಾನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
