ನವದೆಹಲಿ:ಸಮೀಪ ಸಂಬಂಧಿಕರು, ಸ್ವ ಇಚ್ಛೆಯಿಂದ ಮುಂದೆ ಬರುವ ಯಾವುದೇ ಮಹಿಳೆಗೆ ಬಾಡಿಗೆ ತಾಯ್ತನದ ಅವಕಾಶ ನೀಡಬೇಕೆಂದು ರಾಜ್ಯಸಭೆಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ.
35ರಿಂದ 45 ವಯೋಮಿತಿಯೊಳಗಿನ ವಿಧವೆ ಅಥವಾ ವಿಚ್ಛೇದಿತ ‘ಒಂಟಿ ಭಾರತೀಯ ಮಹಿಳೆ’ಗೂ ಅವಕಾಶ ಕಲ್ಪಿಸಬಹುದೆಂದು 2019ರ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯ ಬದಲಾವಣೆಗಳಿಗೆ ಸಂಬಂಧಿಸಿದ 15 ಪ್ರಮುಖ ಶಿಫಾರಸಿನಲ್ಲಿ ಸಮಿತಿ ಅಭಿಪ್ರಾಯಪಟ್ಟಿದೆ. 23 ಸದಸ್ಯರ ಸಮಿತಿಯ ಅಧ್ಯಕ್ಷ ಭೂಪೇಂದ್ರ ಯಾದವ್ ಬುಧವಾರ ವರದಿಯನ್ನು ಮಂಡಿಸಿದರು.
‘ಬಂಜೆತನ’ದ ವ್ಯಾಖ್ಯಾನವನ್ನು ತೆಗೆದು ಹಾಕಲೂ ಶಿಫಾರಸು ಮಾಡಲಾಗಿದೆ. ದಂಪತಿ ಐದು ವರ್ಷ ಕಾಲ ಗರ್ಭನಿರೋಧಕ ಬಳಸದಿದ್ದರೂ ಪತ್ನಿ ಗರ್ಭವತಿ ಆಗದಿರುವುದು ಬಂಜೆತನ ಎಂಬ ವ್ಯಾಖ್ಯಾನವಿದೆ. ಮಗುವಿಗಾಗಿ ದಂಪತಿ ಇಷ್ಟು ದೀರ್ಘ ಕಾಲ ಕಾಯುವುದು ಅಸಮಂಜಸ ಎನ್ನುವ ಆಧಾರದಲ್ಲಿ ಈ ಒಕ್ಕಣೆ ತೆಗೆದುಹಾಕಲು ಸಮಿತಿ ಶಿಫಾರಸು ಮಾಡಿದೆ. ಮಸೂದೆಯನ್ನು ರಾಜ್ಯಸಭೆ ಇನ್ನೂ ಅಂಗೀಕರಿಸಿಲ್ಲ. ಪರೋಪಕಾರದ ನೆಲೆಯ ಬಾಡಿಗೆ ತಾಯ್ತನಕ್ಕೆ ಮಾತ್ರ ಅವಕಾಶ ನೀಡಬೇಕು. ವಾಣಿಜ್ಯಿಕ ಉದ್ದೇಶಕ್ಕೆ ಅಲ್ಲ ಎಂಬ ಮಸೂದೆಯ ನಿಯಮಕ್ಕೆ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
