ಬೆಂಗಳೂರು:ಪಕ್ಷ ವಿರೋಧಿ ಹೇಳಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಶಿಸ್ತು ಸಮಿತಿಯು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯಗೆ ನೋಟಿಸ್ ನೀಡಿದೆ. ಈ ಕುರಿತಾಗಿ  ಮಾತನಾಡಿದ ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಪಕ್ಷ ವಿರೋಧಿ ಹೇಳಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ಪಕ್ಷ ಸಾಕಷ್ಟು ಬಾರಿ ತಿಳಿ ಹೇಳಿದರೂ ಕೇಳುತ್ತಿಲ್ಲ. ತಾವು ಪದೇ ಪದೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದೀರಿ ಎಂದು ಮಾಜಿ ಸಚಿವ ರೇಣುಕಾಚಾರ್ಯಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿಯು ನೋಟಿಸ್ ನೀಡಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ ಅವರು, ನನಗೆ ನಿನ್ನೆ ದಿನ ನೋಟಿಸ್ ಬಂದಿದೆ. ಲಿಖಿತವಾಗಿ ಒಂದುವಾರದಲ್ಲಿ ಉತ್ತರಕೊಡುವಂತೆ ತಿಳಿಸಿದ್ದಾರೆ. ಆದರೆ ಸಭೆಗೆ ಬರುವಂತೆ ಕರೆ ಮಾಡಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನನಗೆ ತಾಯಿ ಸಮಾನ, ಮೋದಿಯವರು ವಿಶ್ವ ನಾಯಕರು, ಪಕ್ಷದ ವಿರುದ್ಧ ಮಾತನಾಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಯುವತಿ; ಇತ್ತ ಕೆಲಸ ಕಳೆದುಕೊಂಡ ಪೊಲೀಸರು!
ಸತ್ಯ ಹೇಳಿದ್ದಕ್ಕೆ ನನಗೆ ನೋಟಿಸ್ ಕೊಡ್ತೀರಾ? ಪಕ್ಷ ಉಳಿಸಿ ಎಂಬ ಅಭಿಯಾನ ಮಾಡ್ತೀನಿ. ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ…? ನಮ್ಮಲ್ಲಿ ಒಡಕುಗಳು, ಕತ್ತರಿ ಹಾಕಲು ಯತ್ನಿಸಿದ್ರು, ಸೂಜಿ ದಾರದ ಕೆಲಸ ಮಾಡಲಿಲ್ಲ.. ಸಿದ್ದರಾಮಯ್ಯ- ಡಿ ಕೆ ಶಿವಕುಮಾರ್ ಇಬ್ಬರಲ್ಲಿ ಒಡಕಿದ್ರು ಇಬ್ಬರು ಒಟ್ಟಾಗಿ  ಗೆದ್ದಿದ್ದಾರೆಂದಿದ್ದಾರೆ ಎಂದು ಹೇಳಿದ್ದಾರೆ.
ಅನಿವಾರ್ಯವಾಗಿ ನನ್ನ ನೋವನ್ನ ಹೇಳಿದ್ದೇನೆ. 4 ವರ್ಷದ ಹಿಂದೆ ದೆಹಲಿಯಲ್ಲಿ ಪಕ್ಷದ ಕಚೇರಿಯಲ್ಲಿ ನನ್ನ ಅನಿಸಿಕೆ ತಿಳಿಸಿದ್ದೇನೆ. ಇದೇ ರೀತಿ ಆದ್ರೆ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಹೇಳಿ ಬಂದಿದ್ದೆ. ಪಕ್ಷದಲ್ಲಿ ಶಿಸ್ತುಪಾಲನ ಸಮಿತಿ ಇದೆ ಎಂದು ನಿನ್ನೆ ಮಧ್ಯಾಹ್ನ ನನಗೆ ಗೊತ್ತಾಗಿದ್ದು, ರೇಣುಕಾಚಾರ್ಯಗೆ ನೋಟಿಸ್ ಕೊಟ್ಟ ಮೇಲೆ ಈ ಸಮಿತಿ ಇದೆ ಎಂದು ಗೊತ್ತಾಯ್ತು. ನನಗೊಬ್ಬನಿಗೆ ಏಕೆ ನೋಟಿಸ್ ಕೊಟ್ಟಿದ್ದಾರೆ. ಬೇರೆಯವರು ಎಷ್ಟು ಮಂದಿ ಮಾತನಾಡಿದ್ದಾರೆ ಅವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ…? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಶ್ವಾನ ಪಾಲಕರು ಬೇಕಾಗಿದ್ದಾರೆ!; ಅಬ್ಬಬ್ಬಾ..ಊಟ-ವಸತಿ ಜತೆ ಕೋಟಿ ರೂ. ಸಂಬಳ….
ಪಕ್ಷದ ನಾಯಕರಾದ, ಪಕ್ಷ ಕಟ್ಟಿದ ಯಡಿಯೂರಪ್ಪ ಅವರನ್ನ ಇಳಿಸಿದ್ರು, ಈಶ್ವರಪ್ಪ ಅವರನ್ನು ಮುಗಿಸಿದ್ರಿ, ಜಗದೀಶ್​ ಶೆಟ್ಟರ್ ಅವರನ್ನ ಮುಗಿಸಿದ್ರಿ, ಲಕ್ಷ್ಮಣ ಸವದಿಯವರನ್ನ ಮುಗಿಸಿದ್ರಿ. ಯಡಿಯೂರಪ್ಪನವರಿಗೆ ಎಲ್ಲ ಸಮುದಾಯವನ್ನ ತೆಗೆದುಕೊಂಡು ಹೋಗುವ ಶಕ್ತಿ ಇದೆ. ಅವರ ಪರ ಯಾರು ವಾಸ್ತವಾಂಶ ಹೇಳ್ತಾರೊ ಅವರನ್ನ ದೂರ ಗುರಿ ಮಾಡುವ ಕೆಲಸ ಮಾಡುತ್ತಾರೆ. ಯಡಿಯೂರಪ್ಪ ಅವರನ್ನ ಕಟ್ಟಿಹಾಕಲು ಯತ್ನಿಸಿದ್ರು, ಸೈಕಲ್​​ನಲ್ಲಿ, ಸ್ಕೂಟರ್​​ನಲ್ಲಿ ರಾಜ್ಯ ಸುತ್ತಿದ್ರು. ಅವರನ್ನ ದೂರ ಮಾಡ್ತಿರಲ್ಲ. ಇದು ಎಷ್ಟು ಸರಿ ಎಂದು ತಮ್ಮದೇ ಪಕ್ಷದವರಿಗೆ ಪ್ರಶ್ನೆ ಮಾಡಿದ್ದಾರೆ.
ನಾಲ್ಕು ಗೋಡೆಗಳ ಮಧ್ಯೆ ಇದೆಲ್ಲ ಹೇಳಿದ್ವಿ, ಬಿಎಸ್​​​ವೈ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ವಿ ಆದರೆ ಕೇಳಿಲ್ಲ.  ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಯಾರೆಲ್ಲ ಒತ್ತಡ ಹಾಕಿದ್ರು ನನಗೆ ಗೊತ್ತಿದೆ. ಅವರ ಕಣ್ಣೀರಿನಲ್ಲಿ ಪಕ್ಷ ಕೊಚ್ಚಿ ಹೊಯ್ತು…ಸತ್ಯ ಹೇಳಿದ್ರೆ ನಿಮಗೆ ಕೋಪ ಬರುತ್ತದೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನ ಯಾರು ಮಾಡಿದ್ದು,, ಹಿರಿಯರನ್ನು ಮಾಡಬೇಕಲ್ವಾ…? ಪ್ರಯೋಗ ಮಾಡುವ ಅವಶ್ಯಕತೆ ಇತ್ತ.. ಅಕ್ಕಿ ಕಡಿಮೆ ಮಾಡಿದ್ರು, ಸಿಲಿಂಡರು ಕಡಿಮೆ ಮಾಡಿದ್ರು, ಒಳಮೀಸಲಾತಿ ಕೊಟ್ಟಿದ್ದು, ಇದೆಲ್ಲ ಸೋಲಿಗೆ ಕಾರಣ ಆಯ್ತು. ಈ ಎಲ್ಲ ವಿಚಾರವನ್ನ ಜೆ ಪಿ ನಡ್ಡಾ ಅವರಿಗೆ, ಅಮಿತ್ ಷಾ ಅವರಿಗೆ ಪತ್ರ ಬರೆದು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆದಿಪುರುಷ್​​ ಸಿನಿಮಾಗೆ ಟಕ್ಕರ್​ ನೀಡಲು ಮುಂದಿನ ವಾರದಿಂದ ಟಿವಿಯಲ್ಲಿ ಪ್ರಸಾರವಾಗಲಿದೆ ರಾಮಾಯಣ!
ರೇಣುಕಾಚಾರ್ಯ ಯಾವಗಿದ್ದರು ಬಿಜೆಪಿನೇ. ಇವರಾಗಿಯೇ ಕಳಿಸುತ್ತಾರೆಂದರೆ ಗೊತ್ತಿಲ್ಲ. ಡಿಕೆಶಿ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಬಿಜೆಪಿ ತಾಯಿ ಸಮಾನ, ಕಾಂಗ್ರೆಸ್ ಹೋಗುತ್ತೇನೆ ಎಂದು ಯಾರು ಪ್ರಚಾರ ಮಾಡಿದ್ರೆ ನಾನು ಮಾಡಲಿ. ನನ್ನ ಮುಂದೆ ನಡೆ, ಸಮಾನ‌ ಮನಸ್ಕರ ಜೊತೆ ಮಾತುಕತೆ ಮಾಡುತ್ತೇನೆ. ಬಿಜೆಪಿ ಉಳಿಸಿ ಎಂದು ಅಭಿಯಾನ ಮಾಡುತ್ತೇನೆ. ಮೋದಿಯವರು ಪಿಎಂ ಆಗಬೇಕು ಅದಕ್ಕೆ ವೇದಿಕೆ ರೆಡಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಹಿಜಾಬ್ ಬಗ್ಗೆ ಮಾತನಾಡಿದಕ್ಕೆ ದುಬೈನಿಂದ ನನಗೆ ಅನಾಮಧೇಯ ಕರೆ ಬಂತು. ದೂರು ಕೊಟ್ಟೆ, ಆದರೆ ಸೌಜನ್ಯಕ್ಕಾದ್ರು ರಾಜ್ಯ ಅಧ್ಯಕ್ಷರು ನನ್ನ ಜೊತೆ ಮಾತನಾಡೊಲ್ಲ ಎಂದು ತಮ್ಮ ಪಕ್ಷದ ಕುರಿತಾಗಿ ದೂರಿದ್ದಾರೆ.
ದುಬಾರಿ ಬೆಲೆಯ ಎಲೆಕ್ಟ್ರಿಕ್ ಕಾರು ಖರೀದಿಸಿದ ನಟ ನಾಗಾರ್ಜುನ ಅಕ್ಕಿನೇನಿ; ಬೆಲೆ ಎಷ್ಟು ಗೊತ್ತಾ?

ಕರ್ನಾಟಕ ಮುಕ್ತ ವಿವಿಯಿಂದ ರಾಷ್ಟ್ರಪತಿಗಳು ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
