ನವದೆಹಲಿ:ಭಾರತೀಯ ಸೇನೆಯನ್ನು 2022ರ ವೇಳೆಗೆ 5 ಮಿಲಿಟರಿ ಥಿಯೇಟರ್ ಕಮಾಂಡ್​ಗಳಾಗಿ ಮರುಸಂಘಟಿಸಲು ಚಿಂತನೆ ನಡೆದಿದೆ. ಪ್ರದೇಶಗಳ ಆಧಾರದ ಮೇಲೆ ಕಮಾಂಡ್​ಗಳನ್ನು ರಚಿಸಲಾಗುತ್ತಿದ್ದು, ಪಾಕಿಸ್ತಾನ ಮತ್ತು ಚೀನಾ ಬೆದರಿಕೆ ಎದುರಿಸಲು ಪ್ರತ್ಯೇಕ ಕಮಾಂಡ್​ಗಳನ್ನು ರಚಿಸಲಾಗುತ್ತದೆ.
ಹೊಸ ಕಮಾಂಡ್​ಗಳನ್ನು ರಚಿಸಲು ಮೂರು ಸೇನೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಭೂಸೇನೆ, ವಾಯುಪಡೆ ಹಾಗೂ ನೌಕಾದಳ ಈ ಮೂರು ಸೇನೆಗಳ ಸಿಬ್ಬಂದಿಯನ್ನು ಜಂಟಿ ಮಿಲಿಟರಿ ವಿಧಾನದೊಂದಿಗೆ ಸಾಮೂಹಿಕ ಕಮಾಂಡರ್ ಅಡಿಯಲ್ಲಿ ತರುವ ಮೂಲಕ ಮಾನವಶಕ್ತಿ ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವುದು ಕಮಾಂಡ್​ನ ಪ್ರಮುಖ ಉದ್ದೇಶ. ಥಿಯೇಟರ್ ಕಮಾಂಡ್ ರಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ಅಗತ್ಯವಾಗಿದೆ.
ಯಾವ್ಯಾವ ಕಮಾಂಡ್ ರಚನೆ?:ಲಡಾಖ್​ನ ಕಾರಕೋರಂ ಪಾಸ್​ನಿಂದ ಅರುಣಾಚಲ ಪ್ರದೇಶದ ಕೊನೆಯ ಚೆಕ್​ಪಾಯಿಂಟ್ ಕಿಬಿತುವರೆಗೆ ಉತ್ತರ ಕಮಾಂಡ್ ಮರುಸಂಘಟಿಸಲಾಗುತ್ತದೆ. ಇದರ ಪ್ರಧಾನ ಕಚೇರಿಯನ್ನು ಲಖನೌದಲ್ಲಿ ಸ್ಥಾಪಿಸುವ ಸಾಧ್ಯತೆ ಇದೆ. ಪಶ್ಚಿಮ ಕಮಾಂಡ್​ನ ಜವಾಬ್ದಾರಿ ಸಿಯಾಚಿನ್ ಗ್ಲೇಸಿಯರ್ ಪ್ರದೇಶದ ಸಾಲ್ಟೋರೊ ರಿಡ್ಜ್​ನಲ್ಲಿರುವ ಇಂದಿರಾ ಕೋಲ್​ನಿಂದ ಗುಜರಾತ್​ನ ಗಡಿ ಅಂತ್ಯದವರೆಗೆ ಇರುತ್ತದೆ. ಇದರ ಪ್ರಧಾನ ಕಚೇರಿಯನ್ನು ಜೈಪುರದಲ್ಲಿ ನಿರ್ವಿುಸುವ ಸಾಧ್ಯತೆ ಇದೆ. ಮೂರನೆಯದು ಎ ಪೆನಿನ್ಸುಲರ್ ಕಮಾಂಡ್, ನಾಲ್ಕನೆಯದು ಸಂಪೂರ್ಣವಾಗಿ ವಾಯು ರಕ್ಷಣಾ ಕಮಾಂಡ್ ಹಾಗೂ ಐದನೆಯದ್ದು ಮರೀನ್ ಕಮಾಂಡ್ ಆಗಿರಲಿದೆ.
ಹೊಸ ವ್ಯವಸ್ಥೆಯಿಂದ ಏನು ಲಾಭ?:ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಒಂದೇ ಕಮಾಂಡ್ ಅಡಿಯಲ್ಲಿ ಎಲ್ಲ ಸೇವೆಗಳ ಸಂಪನ್ಮೂಲಗಳನ್ನು ಏಕೀಕರಿಸಲಾಗುತ್ತದೆ. ಇದರ ಅನ್ವಯ, ಅಗತ್ಯಗಳಿಗೆ ಅನುಗುಣವಾಗಿ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಂಪನ್ಮೂಲಗಳು, ಲಾಜಿಸ್ಟಿಕ್ ಸೇರಿ ಎಲ್ಲ ಸೌಲಭ್ಯಗಳನ್ನು ಒಂದೇ ಕಮಾಂಡ್ ಅಡಿಯಲ್ಲಿ ಬಳಸಲಾಗುತ್ತದೆ.
ಈಗಿನ ವ್ಯವಸ್ಥೆ ಏನಿದೆ?
ಸದ್ಯ ಭಾರತೀಯ ಭೂಸೇನೆ, ವಾಯುಪಡೆ ಹಾಗೂ ನೌಕಾದಳ ತಮ್ಮದೇ ವಿಭಿನ್ನ ಕಮಾಂಡ್​ಗಳ ಮೂಲಕ ಮತ್ತು ಸಮನ್ವಯವಿಲ್ಲದೆ ರಕ್ಷಣಾ ಕಾರ್ಯ ನಡೆಸುತ್ತಿವೆ. ಮೂರು ಸೇನೆಗಳು ಒಟ್ಟು 17 ಕಮಾಂಡ್​ಗಳನ್ನು ಹೊಂದಿವೆ. ಭೂಸೇನೆ ಮತ್ತು ವಾಯುಪಡೆ ತಲಾ 7 ಹಾಗೂ ನೌಕಾಪಡೆಯು ಮೂರು ಕಮಾಂಡ್​ಗಳನ್ನು ಹೊಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
