ಬೆಂಗಳೂರು:ಟ್ವಿಟರ್​ನಲ್ಲಿ ಸದಾ ಯಾವುದಾದರೂ ಒಂದು ವಿಷಯ ಟ್ರೆಂಡಿಂಗ್ ಆಗುತ್ತಲೇ ಇರುತ್ತದೆ. ಆ ಮೂಲಕ ಜನರ ಮೂಡ್​, ಜಗತ್ತಿನ ದಿನದ ಬೆಳವಣಿಗೆ ಇತ್ಯಾದಿಗಳು ಸುಲಭದಲ್ಲಿ ಅರಿವಿಗೆ ಬರುತ್ತಿರುತ್ತವೆ. ಇಂದು ಮೆಟ್ಟಿಲೊಂದರ ವಿಷಯದ ಕುರಿತಾಗಿ ಮಾಡಿದ್ದ ಟ್ವೀಟ್​ಗೆ ಪ್ರತಿಯಾಗಿ ಸರಸ್ವತಿ ಟ್ರೆಂಡಿಂಗ್ ಆಗಿರುವುದರಿಂದ ಪುಸ್ತಕಗಳ ಕುರಿತು ಭಾರತೀಯರ ದೈವಿಕ ಭಾವನೆ ಮತ್ತೊಮ್ಮೆ ಜಾಹೀರಾಗಿದೆ.
ಸುಧೀರ್ ಎಂಬ ಇಂಜಿನಿಯರ್​ ಒಬ್ಬರು ಪುಸ್ತಕಗಳ ಶೆಲ್ಫ್​ ಥರ ಇರುವಂಥ ಮೆಟ್ಟಿಲ ಚಿತ್ರವೊಂದನ್ನು ಹಂಚಿಕೊಂಡು, ‘ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?’ ಎಂದು ಪ್ರಶ್ನಿಸಿದ್ದರು. ಅವರು ಹೀಗೆ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಪುಸ್ತಕಗಳೆಂದರೆ ನಮಗೆ ಸರಸ್ವತಿ ಎಂದು ನಾನಾ ರೀತಿಯಲ್ಲಿ ಹಲವರು ಪ್ರತಿಕ್ರಿಯಿಸಿದ್ದರಿಂದ ಸರಸ್ವತಿ ಟ್ರೆಂಡಿಂಗ್ ಆಗಿತ್ತು.
ಇದನ್ನೂ ಓದಿ:ನೌಕರಿ ಕೊಟ್ಟವರನ್ನೇ ಕೊಲೆ ಮಾಡಲು ಯತ್ನ; ಸಲೂನ್​ ಶಾಪ್​ ಮಾಲೀಕ ಹಾಗೂ ತಂದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಇದನ್ನು ಟ್ವೀಟ್ ಮಾಡಲಾದ ಐದೇ ಗಂಟೆಗಳಲ್ಲಿ 290ಕ್ಕೂ ಅಧಿಕ ಮಂದಿ ಇದನ್ನು ರಿಟ್ವೀಟ್​ ಮಾಡಿಕೊಂಡಿದ್ದಷ್ಟೇ ಅಲ್ಲದೆ, 160ಕ್ಕೂ ಅಧಿಕ ಮಂದಿ ಕೋಟ್​ ಟ್ವೀಟ್ ಮಾಡಿದ್ದು, 2900ಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಹೀಗೊಂದು ಟ್ವೀಟ್​ ಹಾಕಿದ್ದ ವ್ಯಕ್ತಿಗೆ ಕೆಲವರು ನೆಗೆಟಿವ್ ಆಗಿ ರಿಪ್ಲೈ ಮಾಡಿದ್ದರೂ ಬಹಳಷ್ಟು ಮಂದಿ ಭಾರತೀಯರು ಯಾಕೆ ಹೀಗೆ ಮಾಡುವುದಿಲ್ಲ ಎಂದು ತಮ್ಮದೇ ಆದ ರೀತಿಯಲ್ಲಿ ವಿವರಿಸಿ ಸರಸ್ವತಿಯನ್ನು ನೆನಪಿಸಿಕೊಳ್ಳುವ ಜತೆಗೆ ಭಾರತೀಯ ಸಂಸ್ಕೃತಿಯ ಮಹತ್ವವನ್ನೂ ಹೇಳಿದ್ದಾರೆ. ಹೀಗೆ ಜನರೆಲ್ಲ ಪ್ರತಿಕ್ರಿಯಿಸಲಾರಂಭಿಸಿದ್ದು, ಟ್ವೀಟ್​ ಮಾಡಿದ್ದ ವ್ಯಕ್ತಿ ಪೋಸ್ಟ್​ ಮಾಡಿದ್ದ ನಾಲ್ಕು ಗಂಟೆಗಳ ಒಳಗೆ, ‘ಪುಸ್ತಕ ಎಂದರೆ ಸರಸ್ವತಿ ಇದ್ದಂತೆ..’ ಎಂದು ತಾವೂ ರಿಪ್ಲೈ ಮಾಡಿದ್ದಾರೆ.
Why Indians can never ever have this in their house?pic.twitter.com/duEOOYpIGT— 𝐒𝐮𝐝𝐡𝐢𝐫 🇮🇳 (@seriousfunnyguy)September 26, 2021
Why Indians can never ever have this in their house?pic.twitter.com/duEOOYpIGT
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
