ನವದೆಹಲಿ:   ಕಷ್ಟವಾದ್ರು ನಾವು ಇಷ್ಟ ಪಟ್ಟು ಮಾಡುವ ಪ್ರತಿಯೊಂದು ಕೆಲಸವು ನಮ್ಮ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಹೀಗೆ ಇಲ್ಲೊಬ್ಬ ಯುವ ಉದ್ಯಮಿ ನೀರುದ್ಯೋಗಿಗಳಿಗೆ ಸ್ಪೂರ್ತಿಯಾಗಿದ್ದಾರೆ. ವೇದಾಂತ್ ಲಂಬಾ   ಉದ್ಯಮ ಈಗ ದೊಡ್ಡಮಟ್ಟದಲ್ಲಿ ವಿಸ್ತಾರಗೊಂಡಿದೆ.
ಮೇನ್‌ಸ್ಟ್ರೀಟ್ ಮಾರ್ಕೆಟ್‌ಪ್ಲೇಸ್‌ನ ಸಂಸ್ಥಾಪಕ ವೇದಾಂತ್ ಲಂಬಾ. ಹೈಸ್ಕೂಲ್ ಓದಿದ್ದ ವೇದಾಂತ್ ಲಂಬಾ ಪ್ರಯಾಣ ಶುರುವಾಗಿದ್ದು, ಯುಟ್ಯೂಬ್ ಚಾನೆಲ್ ಮೂಲಕ.   2017 ರಲ್ಲಿ  ಮೇನ್ ಸ್ಟ್ರೀಟ್ ಹೆಸರಿನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು. ನಂತ್ರ ಅದನ್ನು ಮೇನ್‌ಸ್ಟ್ರೀಟ್ ಮಾರ್ಕೆಟ್‌ಪ್ಲೇಸ್ ಹೆಸರಿನ ಸ್ಟಾರ್ಟ್ ಅಪ್ ಆಗಿ ಅಭಿವೃದ್ಧಿಪಡಿಸಿದ್ರು. ಮೇನ್ ಸ್ಟ್ರೀಟ್ ಮಾರ್ಕೆಟ್ ಪ್ಲೇಸ್ ಮೂಲಕ ವೇದಾಂತ್ ಲಂಬಾ, ಆನ್ಲೈನ್ ನಲ್ಲಿ ವ್ಯವಹಾರ ನಡೆಸುತ್ತಾರೆ. ಅವರು ಆನ್ಲೈನ್ ನಲ್ಲಿ ಸ್ನೀಕರ್ಸ್ ಮಾರಾಟ ಶುರು ಮಾಡಿದ್ರು.
ವೇದಾಂತ್ ಲಂಬಾ, ಫ್ಲಿಪ್‌ಕಾರ್ಟ್, ಅಮೆಜಾನ್, ಮೈಂತ್ರಾ ಮತ್ತು ಝೆಬಾಂಗ್‌ನಂತಹ ಮೇನ್ ಸ್ಟ್ರೀಟ್ ನಲ್ಲಿ ಆನ್‌ಲೈನ್ ಮಾರುಕಟ್ಟೆ ಆರಂಭಿಸಿದ್ದಾರೆ.  ವೇದಾಂತ್ ಲಂಬಾ ಆನ್ಲೈನ್ ಮಾರುಕಟ್ಟೆಯಲ್ಲಿ ಜನಸಾಮಾನ್ಯರು ಮಾತ್ರವಲ್ಲದೆ ಬಾಲಿವುಡ್ ಸ್ಟಾರ್ಸ್ ಗಳಾದ ರಣಬೀರ್ ಕಪೂರ್, ಕರಣ್ ಜೋಹರ್, ರಣವೀರ್ ಸಿಂಗ್ ಕೂಡ ಗ್ರಾಹಕರು. ವೇದಾಂತ್ ಲಂಬಾ ಯಶಸ್ಸಿಗೆ ವ್ಯಾಪಾರದಲ್ಲಿ ಅವರು ಅಳವಡಿಸಿರುವ ಬುದ್ಧಿವಂತಿಕೆ ಕಾರಣವಾಗಿದೆ.
ವೇದಾಂತ್ ಲಂಬಾ ಸ್ಟಾರ್ಟ್ ಆಪ್ ಶುರು ಮಾಡುವಾಗ್ಲೇ ಕೆಲವು ಬಿಲಿಯನೇರ್ ಕೈಗಾರಿಕೋದ್ಯಮಿಗಳು 2 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರು. ಇವರಲ್ಲಿ ಝೊಮಾಟೊ ಸಿಇಒ ದೀಪಿಂದರ್ ಗೋಯಲ್, ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಬಾದ್‌ಶಾ ಅವರಂತಹ ರಾಪರ್‌ಗಳು ಸೇರಿದ್ದಾರೆ.  ಉದ್ಯಮ ಶುರು ಮಾಡಿದ ಕೆಲವೇ ಕೆಲವು ವರ್ಷಗಳಲ್ಲಿ ವೇದಾಂತ್ ಲಂಬಾ,24 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದ್ದಾರೆ. ಈ ವರ್ಷ ಅವರ ಆದಾಯ 100 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ.ಸ್ನೀಕರ್ಸ್ ಮಾರಾಟ ಮಾಡ್ತಿರುವ ವೇದಾಂತ್ ಲಂಬಾ ಕಂಪನಿಗೆ ಬಾಲಿವುಡ್ ತಾರೆಯರು, ಕೈಗಾರಿಕೋದ್ಯಮಿಗಳು ಕೂಡ ಗ್ರಾಹಕರಾಗಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
