ನವದೆಹಲಿ:ಕರೊನಾ ಸೋಂಕಿನಿಂದ ಬಳಲುತ್ತಿದ್ದ ಇಲ್ಲಿಯ ಯುವ ಪತ್ರಕರ್ತನೋರ್ವ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದ ಪ್ರಕರಣಕ್ಕೀಗ ಬಾರಿ ಟ್ವಿಸ್ಟ್‌ ಸಿಕ್ಕಿದೆ!
34 ವರ್ಷದ ತರುಣ್ ಸಿಸೋಡಿಯಾ, ಇಲ್ಲಿಯ ಹಿಂದಿ ಪತ್ರಿಕೆಯೊಂದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವರದಿಗಾರಿಕೆ ಮಾಡುತ್ತಿದ್ದರು. ಕರೊನಾ ಸೋಂಕಿತರಾಗಿದ್ದ ಇವರನ್ನು ಇಲ್ಲಿಯ ದೆಹಲಿಯ ಏಮ್ಸ್ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದನ್ನೂ ಓದಿ:ಕರೊನಾದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಹೆಲ್ತ್‌ ರಿಪೋರ್ಟರ್‌!
ಈಶಾನ್ಯ ದೆಹಲಿಯ ಭಜನ್‌ಪುರದ ನಿವಾಸಿಯಾಗಿದ್ದ ಇವರು, ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆದರೆ ನಿನ್ನೆ ಏಕಾಏಕಿಯಾಗಿ ನಾಲ್ಕನೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿತ್ತು. ಕರೊನಾ ಸೋಂಕಿನಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೇ ಬಿಂಬಿಸಲಾಗಿತ್ತು.
ಆದರೆ ಇದೀಗ ಅವರು ತಮ್ಮ ಸ್ನೇಹಿತರು ಇರುವ ಗ್ರೂಪ್‌ನಲ್ಲಿ ಕಳುಹಿಸಿರುವ ಕೊನೆಯ ವಾಟ್ಸ್‌ಆ್ಯಪ್‌ ಸಂದೇಶ ಇದೀಗ ವೈರಲ್‌ ಆಗಿದೆ. ಅದರಲ್ಲಿ ಅವರು, ‘ಮರ್ಡರ್‌ ಹೋ ಸಕ್ತಾ ಹೈ’ (ಕೊಲೆಯಾಗುವ ಸಾಧ್ಯತೆ ಇದೆ) ಎಂದು ಬರೆದಿದ್ದರು ಎನ್ನಲಾಗಿದೆ.
AIIMS statement on Tarun Sisodia's death and his whatsaap message in a group few days ago that he could be murdered#JusticeForTarunSisodiaTruth needs to be investigated .pic.twitter.com/2qkuy0a3yF
— Mausami Singh/मौसमी लखनवी (@mausamii2u)July 6, 2020

ಅಷ್ಟಕ್ಕೂ ಆಗಿದ್ದೇನೆಂದರೆ ಈ ಆಸ್ಪತ್ರೆಯಲ್ಲಿನ ವೈದ್ಯರ ಬೇಜವಾಬ್ದಾರಿ ಹಾಗೂ ಆಸ್ಪತ್ರೆಯ ಕಳಪೆ ಗುಣಮಟ್ಟದ ಕುರಿತಂತೆ ತರುಣ್‌ ಮೆಸೇಜ್‌ ಮಾಡುತ್ತಿದ್ದರು. ಅವ ಈ ಮೆಸೇಜ್‌ ಇದೀಗ ಆರೋಗ್ಯ ಸಚಿವಾಲಯದ ಗಮನಕ್ಕೂ ಬಂದಿದೆ. ಈ ನಡುವೆಯೇ ಅಲ್ಲಿಯ ನಡವಳಿಕೆಗೆ ಬೇಸತ್ತಿದ್ದ ಅವರು, ತಮ್ಮ ಕೊಲೆಯಾಗುವ ಸಾಧ್ಯತೆ ಇದೆ ಎಂದೂ ಬರೆದಿದ್ದರು ಎನ್ನಲಾಗಿದೆ. ಅವರು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸುತ್ತಿದ್ದಂತೆಯ ಆಸ್ಪತ್ರೆಯ ಸಿಬ್ಬಂದಿ ಫೋನ್‌ ತೆಗೆದುಕೊಂಡು ಅವರನ್ನು ಐಸಿಯುಗೆ ಶಿಫ್ಟ್‌ ಮಾಡಿದ್ದರು.
ಏತನ್ಮಧ್ಯೆ, ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. ಆದರೆ ವಾಟ್ಸ್‌ಆ್ಯಪ್‌ ಸಂದೇಶ ಈಗ ಎಲ್ಲೆಡೆ ಹರಿದಾಡುತ್ತಿದ್ದು,#JusticeForTarunSisodiaಹ್ಯಾಷ್‌ಟ್ಯಾಗ್‌ನಲ್ಲಿ ಸಾವಿಗೆ ನ್ಯಾಯ ಕೊಡಿಸುವಂತೆ ಹೋರಾಟ ಶುರುವಾಗಿದೆ.
ಕರೊನಾ ವೈರಸ್‌ನಿಂದ ತರುಣ್‌ ಖಿನ್ನತೆಗೆ ಒಳಗಾಗಿದ್ದರು ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ. ಸಾವಿನ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಆರೋಗ್ಯ ಸಚಿವಾಲಯ, ಆರೋಪದ ಕುರಿತು ಮಾಹಿತಿ ನೀಡುವಂತೆ ಆಸ್ಪತ್ರೆಗೆ ಹೇಳಿದೆ(ಏಜೆನ್ಸೀಸ್‌)
ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 4 =
Remember me
