ಪುಣೆ:ವಾಹನಗಳಿಗೆ ಡೀಸೆಲ್​ – ಪೆಟ್ರೋಲ್​ ಅನ್ನು ಸಾಮಾನ್ಯವಾಗಿ ಬಂಕ್​ಗಳಲ್ಲಿ ಹಾಕಿಸುತ್ತೇವೆ. ಆದರೆ ಇಲ್ಲೊಂದು ಆ ದಂಪತಿ ವಿಭಿನ್ನವಾಗಿ ಆಲೋಚಿಸಿ ಗ್ರಾಹಕರ ಮನೆ ಬಾಗಿಲಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಬರಾಜು ಮಾಡಿ 200ಕೋಟಿ ಸಾಮ್ರಾಜ್ಯದ ಒಡೆಯರಾಗಿದ್ದಾರೆ. ಪುಣೆಯ ಚೆತನ್​ ವಾಲುಂಜ್​ ಮತ್ತು ಅದಿತಿ ಭೋಸ್ಲೆ ಇಂತಹ ಸಾಧನೆ ತೋರಿದ ದಂಪತಿ, ಇವರ ಯಶೋಗಾಥೆ ಕಂಡು ರಾಷ್ಟ್ರದ ಖ್ಯಾತ ಉದ್ಯಮಿ ರತನ್​ ಟಾಟಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, ಸಾಧಿಸುವ ಛಲ ಮತ್ತು ಕಠಿಣ ಶ್ರಮವಿದ್ದರೆ ಅಸಾಧ್ಯವಾದದ್ದನ್ನೂ ಸಾಧಿಸಬಹುದು ಎನ್ನುವುದಕ್ಕೆ ಈ ದಂಪತಿ ಆದರ್ಶಪ್ರಾಯವಾಗಿ ನಿಲ್ಲುತ್ತಾರೆ. ಹಲವು ಸಂಸ್ಥೆಗಳು ಆಹಾರ, ತರಕಾರಿ, ಔಷಧ ಸೇರಿದಂತೆ ಹಲವು ವಸ್ತುಗಳನ್ನು ಡೋರ್​ ಡೆಲವರಿ ಮಾಡುತ್ತಿರುವುದನ್ನು ಕಂಡು ಫ್ಯೂಯೆಲ್​(ಡೀಸೆಲ್​ ಮತ್ತು ಪೆಟ್ರೋಲ್​)ನ್ನು ಸಹ ಅದೇ ರೀತಿ ಮಾರಾಟ ಮಾಡಬೇಕೆಂದು ಆಲೋಚಿಸಿ ‘ರೆಪೋಸ್​ ಎನರ್ಜಿ'(ರೆಪೋಸ್​ ಮೊಬೈಲ್ ಪೆಟ್ರೋಲ್ ಪಂಪ್ ) ಸಂಸ್ಥೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ:ಇ ತ್ಯಾಜ್ಯ ಬಳಸಿ ಎಲೆಕ್ಟ್ರಿಕ್ ಸೈಕಲ್ ನಿರ್ಮಿಸಿದ 84ರ ಹರೆಯದ ವೃದ್ಧ !
ರಾಷ್ಟ್ರದಲ್ಲಿ ಸ್ಟಾರ್ಟಾಪ್ ಸಂಸ್ಕೃತಿ ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ ಹೊಸ ಉದ್ದಿಮೆಗಳು ಹುಟ್ಟಿಕೊಳ್ಳುತ್ತಿವೆ. ಸ್ವಿಗ್ಗಿ, ಜೊಮಾಟೊ ತರಹದ ವಾಹನ ಬಳಕೆದಾರರಿಗೆ ಅಗತ್ಯವಾದ ಡೀಸೆಲ್, ಪೆಟ್ರೋಲ್​ ಅನ್ನು ಮನೆ ಬಾಗಿಲಿಗೆ ಒದಗಿಸಿ 200 ಕೋಟಿ ರೂ.ಸಂಪಾದನೆ ಮಾಡಿದ್ದಾರೆ.
ಅದಿತಿಗೆ ಸ್ಟಾರ್ಟಾಪ್​ ಕನಸು: ಮದುವೆ ನಂತರ ಹೇಗಾದರೂ ಮಾಡಿ ಸ್ಟಾರ್ಟಾಪ್ ಸಂಸ್ಥೆ ಮಾಡಬೇಕೆಂದು ಕನಸು ಕಂಡಿದ್ದ ಅದಿತಿ, ಪತಿ ಜೊತೆ ಪುಣೆಯಲ್ಲಿ ರೆಪೋಸ್ ಎನರ್ಜಿ ಪ್ರಾರಂಭಿಸಿದರು. ಪ್ರಸ್ತುತ ದೇಶಾದ್ಯಂತ 65 ನಗರಗಳಿಗೆ ಇದರ ಬ್ರಾಂಚ್​ಗಳು ವಿಸ್ತರಿಸಿದ್ದು ವ್ಯಾಪಾರ-ವಹಿವಾಟಿನಲ್ಲಿ ಯಶಸ್ಸು ಕಂಡಿದ್ದಾರೆ.
ಪ್ರಾರಂಭದಲ್ಲಿ ಮಾಸಿಕ 70ಸಾವಿರ ರೂ.ವಹಿವಾಟು ನಡೆಯುತ್ತಿತ್ತು. ಆದರೆ ಈಗ 200ಕೊಟಿ ರೂ.ವಹಿವಾಟು ನಡೆಸುತ್ತಿರುವುದು ಪ್ರಮುಖ ವಾಣಿಜ್ಯೋದ್ಯಮಿಗಳು ಇತ್ತ ತಿರುಗಿ ನೋಡುವಂತೆ ಮಾಡಿದೆ. ಈ ದಂಪತಿಯ ಹೊಸ ಆಲೋಚನೆಗೆ ಮಂತ್ರಮುಗ್ಧರಾಗಿರುವ ದೇಶದ ಪ್ರಮುಖ ಉದ್ಯಮಿ ರತನ್​ ಟಾಟಾ ‘ರೆಪೋಸ್​ ಎನರ್ಜಿ’ ಸಂಸ್ಥೆಯಲ್ಲಿ ಹೂಡಿಕೆಗೆ ಮುಂದೆ ಬಂದಿದ್ದಾರೆ. ಹೀಗಾಗಿ ಸಂಸ್ಥೆ ಆದಾಯ ಕಳೆದ ವರ್ಷ 65 ಕೋಟಿ ರೂ,ಗಳಿಸಿದೆ.
‘ರೆಪೋಸ್​ ಎನರ್ಜಿ’ ಪ್ರಸ್ತುತ ಟಾಟಾ ಗ್ರೂಪ್​, ಮಹಿಂದ್ರಾ ಅಂಡ್​ ಮಹಿಂದ್ರಾ, ಜನರಲ್​ ಎಲೆಕ್ರಿಕಲ್​, ಲಾರೆನ್ಸ್​ ಅಂಡ್​ ಟಬ್ರೋ, ಷಿಂಡ್ಲರ್​, ಜೆಡಬ್ಲ್ಯೂ, ಮಾರಿಯಟ್​ ಹೋಟೆಲ್​, ಫೀನಿಕ್ಸ್​ ಮಾಲ್​, ದಿ ವೆಸ್ಟಿನ್​ ಹೋಟೆಲ್​ನಂಥ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fourteen =
Remember me
