ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ನಡುವೆ ಭಾರತ 73ನೇ ಗಣತಂತ್ರ ದಿವಸವನ್ನು ಮನಮುಟ್ಟುವಂತೆ ಆಚರಿಸಲಾಗಿದೆ. ಕೋವಿಡ್ ನಿಯಮ ಪಾಲನೆಯೊಂದಿಗೆ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು. ಬಳಿಕ ರಾಜಪಥಕ್ಕೆ ಆಗಮಿಸಿದರು. ಇದೇ ವೇಳೆ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಕೂಡ ಆಗಮಿಸಿದರು. ಬೆಳಗ್ಗೆ 10.30ಕ್ಕೆ ರಾಷ್ಟ್ರಪತಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಪರೇಡ್ ಆರಂಭವಾಯಿತು.
ಗಮನಸೆಳೆದ ಟ್ಯಾಂಕ್: ಗಣತಂತ್ರ ಪರೇಡ್​ನಲ್ಲಿ ಸೆಂಚುರಿಯನ್ ಟ್ಯಾಂಕ್, ಪಿಟಿ-76 ಟ್ಯಾಂಕ್, 75/24 ಪ್ಯಾಕ್ ಹೊವಿಟ್ಜರ್ ಮತ್ತು ಒಟಿ -62 ಟೋಪಾಝå್ ಸಶಸ್ತ್ರ ಸಿಬ್ಬಂದಿ ವಾಹಕಗಳು ಪ್ರದರ್ಶನಗೊಂಡವು. ಪಾಕಿಸ್ತಾನದ ವಿರುದ್ಧ 1971ರ ಯುದ್ಧ ಗೆದ್ದ 50ನೇ ವರ್ಷಾಚರಣೆ (ರ್ಸÌಮ್ ವಿಜಯ್ ವರ್ಷ್)ಯನ್ನೂ ದೇಶ ಇದೇ ವರ್ಷ ಆಚರಿಸುತ್ತಿದೆ.
ಅದ್ದೂರಿ ವೈಮಾನಿಕ ಪ್ರದರ್ಶನ:ಆಜಾದಿ ಕಿ ಅಮೃತ ಮಹೋತ್ಸವದ ನಿಮಿತ್ತ ರಾಜಪಥದ ಬಾನಂಗಳದಲ್ಲಿ ಅದ್ದೂರಿ ವೈಮಾನಿಕ ಪ್ರದರ್ಶನ ನಡೆಯಿತು. ಇದರಲ್ಲಿ 75 ವಿಮಾನಗಳು ಭಾಗಿಯಾಗಿದ್ದವು. 17 ಜಾಗ್ವಾರ್​ಗಳು ಅಮೃತ್ ಎಂಬ ಪದದ ಆಕಾರದಲ್ಲಿ ಹಾರಾಟ ನಡೆಸಿ ಸಂಚಲನ ಮೂಡಿಸಿದವು. ಟೆಲಿವಿಷನ್ ನೇರ ಪ್ರಸಾರದಲ್ಲಿ ಕಾಕ್​ಪಿಟ್ ದೃಶ್ಯಗಳೂ ಪ್ರಸಾರವಾಗಿದ್ದವು. ಒಂದು ಡಕೋಟಾ, ಎರಡು ಡೋರ್ನಿಯರ್, 1 ಚಿನೂಕ್, ನಾಲ್ಕು ಎಂಐ-17, 9 ಅಡ್ವಾನ್ಸ್ ್ಡ ಲೈಟ್ ಹೆಲಿಕಾಪ್ಟರ್, ರಫೇಲ್, ಮಿಗ್ 29ಕೆ, ಪಿ-8ಐ ಮತ್ತು ಇತರೆ ವಿಮಾನಗಳು ಭಾಗವಹಿಸಿದ್ದವು.
ವಿರಾಟ್ ನಿವೃತ್ತಿ:ರಾಷ್ಟ್ರಪತಿಯವರ ಬಾಡಿಗಾರ್ಡ್ ಕಮಾಂಡೆಂಟ್​ನ ಕಪು್ಪ ಕುದುರೆ ವಿರಾಟ್ 73ನೇ ಗಣತಂತ್ರ ದಿನವೇ ಸುದೀರ್ಘ ಅವಧಿಯ ಸೇವೆಯಿಂದ ನಿವೃತ್ತಿಯಾಗಿದೆ. ಕಮೆಂಡೇಶನ್ ಪುರಸ್ಕಾರವೂ ವಿರಾಟ್​ಗೆ ಸಿಕ್ಕಿದೆ. ಈ ಕುದುರೆ ಸಮೀಪ ತೆರಳಿದ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅದನ್ನು ತಟ್ಟಿ ಪ್ರಶಂಸಿಸಿ ನಿವೃತ್ತಿ ವಿದಾಯ ಸೂಚಿಸಿದರು.
ಗಮನಸೆಳೆದ ಮೋದಿ ಉಡುಪು:ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಸಾಂಪ್ರದಾಯಿಕ ಉಡುಪು ಎಲ್ಲರ ಗಮನಸೆಳೆಯಿತು. ಉತ್ತರಾಖಂಡದ ರಾಜ್ಯ ಪುಷ್ಪ ಬ್ರಹ್ಮಕಮಲದ ಚಿತ್ರ ಇರುವ ಟೋಪಿ, ಮಣಿಪುರದ ಶಾಲು ಧರಿಸಿದ್ದರು. ಅಧಿಕೃತ ಮೂಲಗಳ ಪ್ರಕಾರ ಅವರು ಕೇದಾರನಾಥನ ದರ್ಶನಕ್ಕೆ ಹೋದಾಗೆಲ್ಲ ಬ್ರಹ್ಮಕಮಲ ಪುಷ್ಪವನ್ನೇ ಸಮರ್ಪಿಸುತ್ತಾರೆ. ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭೆಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯುತ್ತಿರುವ ಕಾರಣ ಮೋದಿ ಈ ರೀತಿ ಕಾಣಿಸಿಕೊಂಡರು ಎಂಬ ಚರ್ಚೆಯೂ ನಡೆಯುತ್ತಿದೆ.
ರಫೇಲ್ ಜೆಟ್​ನ ಮಹಿಳಾ ಪೈಲಟ್:ಗಣತಂತ್ರ ದಿನಾಚರಣೆ ಪರೇಡ್​ನಲ್ಲಿ ಪ್ರದರ್ಶನಗೊಂಡ ವಾಯಪಡೆಯ ಸ್ತಬ್ಧಚಿತ್ರದಲ್ಲಿ ರಫೇಲ್ ಫೈಟರ್ ಜೆಟ್​ನ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಉಪಸ್ಥಿತರಿದ್ದರು. ಗಣತಂತ್ರ ದಿನಾಚರಣೆ ಪರೇಡ್​ನಲ್ಲಿ ವಾಯುಪಡೆಯ ಸ್ತಬ್ಧಚಿತ್ರದಲ್ಲಿ ಭಾಗಿಯಾದ ಎರಡನೇ ಮಹಿಳಾ ಪೈಲಟ್ ಇವರು. ಕಳೆದ ವರ್ಷ ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಮಿಗ್ 21 ವಿಮಾನದ ಪೈಲಟ್ ಆಗಿ ಭಾಗವಹಿಸಿದ್ದರು. ವಾರಾಣಸಿ ಮೂಲದ ಶಿವಾಂಗಿ ಸಿಂಗ್ 2017ರ ಬ್ಯಾಚಿನ ಪೈಲಟ್. ಶಿವಾಂಗಿ ಕೂಡ ರೇಫಲ್​ಗೆ ಮುನ್ನ ಮಿಗ್ 21 ವಿಮಾನ ಚಾಲನೆ ಮಾಡುತ್ತಿದ್ದರು. ಅಂಬಾಲದ ವಾಯುನೆಲೆಯಲ್ಲಿ ಗೋಲ್ಡನ್ ಏರೋಸ್ ಸ್ಕಾ್ವಡ್ರನ್​ನ ಯೋಧರಲ್ಲೊಬ್ಬರು ಶಿವಾಂಗಿ.
ವಿಶ್ವದ ಏಕೈಕ ಅಶ್ವದಳ:ಗಣತಂತ್ರ ದಿವಸದ ಪರೇಡ್​ನಲ್ಲಿ ಮುಂಚೂಣಿಯಲ್ಲಿದ್ದುದು ಜಗತ್ತಿನಲ್ಲಿ ಸಕ್ರಿಯವಾಗಿರುವ ಏಕೈಕ ಅಶ್ವದಳದ ರೆಜಿಮೆಂಟ್ ಭಾರತೀಯ ಸೇನೆಯ 61ನೇ ಕಾವಲ್ರಿ ರೆಜಿಮೆಂಟ್. ಮೇಜರ್ ಮೃತ್ಯುಂಜಯ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಈ ತಂಡ ಪಥಸಂಚಲನ ನಡೆಸಿತು. ಈ ದಳವನ್ನು 1953ರಲ್ಲಿ ರಚಿಸಲಾಗಿದೆ.
ಸರಗೋಡಿನಲ್ಲಿ ತಲೆಕೆಳಗಾದ ರಾಷ್ಟ್ರಧ್ವಜ:ಕೇರಳದ ಕಾಸರಗೋಡಿನ ಜಿಲ್ಲಾ ಕೇಂದ್ರದಲ್ಲಿ ನಡೆದ ಗಣತಂತ್ರ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡಿತ್ತು. ಬಂದರು ಮತ್ತು ಪುರಾತತ್ತ್ವ ಇಲಾಖೆ ಸಚಿವ ಅಹಮ್ಮದ್ ದೇವರ್​ಕೋವಿಲ್ ರಾಷ್ಟ್ರಧ್ವಜಾರೋಹಣ ಮಾಡಿದ್ದರು. ತಲೆಕೆಳಗಾದ ಸ್ಥಿತಿಯಲ್ಲೇ ಅದಕ್ಕೆ ಗೌರವ ಸಲ್ಲಿಸಿದ ಸಚಿವ, ಭಾಷಣ ಮಾಡಲಾರಂಭಿಸಿದರು. ಲೋಪವಾಗಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ ಕೂಡಲೇ ಅದನ್ನು ಸರಿಪಡಿಸಿದರು. ಇದು ರಾಜಕೀಯ ವಿವಾದಕ್ಕೆ ಎಡೆ ಮಾಡಿದ್ದು, ವಿಪಕ್ಷ ಬಿಜೆಪಿ ಸದಸ್ಯರು ಸಚಿವ ರಾಜೀನಾಮೆಗೆ ಆಗ್ರಹಿಸಿದರು.
ಕ್ರಿಸ್ ಗೇಲ್, ಜಾಂಟಿ ರೋಡ್ಸ್​ಗೆ ಪ್ರಧಾನಿ ಪತ್ರ:ವೃತ್ತಿಜೀವನದ ಜತೆಗೆ ವೈಯಕ್ತಿಕವಾಗಿಯೂ ಭಾರತದೊಂದಿಗೆ ವಿಶೇಷ ನಂಟು ಹೊಂದಿರುವ ಕ್ರಿಕೆಟಿಗರಾದ ಜಾಂಟಿ ರೋಡ್ಸ್ ಹಾಗೂ ಟಿ20 ಕ್ರಿಕೆಟ್​ನ ದೈತ್ಯ ಕ್ರಿಸ್ ಗೇಲ್​ಗೆ ಪ್ರಧಾನಿ ನರೇಂದ್ರ ಮೋದಿ, 73ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಪತ್ರ ಬರೆದು ಅಭಿನಂದಿಸಿದ್ದಾರೆ. ‘ನಿಮಗೆ ಗಣರಾಜ್ಯೋತ್ಸವ ಶುಭಾಶಯಗಳು’ ಎಂದು ಪ್ರಧಾನಿ ರೋಡ್ಸ್​ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಮುಖ ಅಂಶಗಳು
* ನೇತಾಜಿ ಸುಭಾಷ್​ಚಂದ್ರ ಬೋಸರ 125ನೇ ಜಯಂತಿ ಮತ್ತು ಇಂಡಿಯನ್ ನ್ಯಾಷನಲ್ ಆರ್ವಿು (ಐಎನ್​ಎ)ಯ ಪರಂಪರೆಯನ್ನು ಪುಷ್ಪಗಳ ನಡುವೆ ಬಿಂಬಿಸಿದ್ದ ಸ್ತಬ್ಧಚಿತ್ರ ಕಣ್ಮನ ಸೆಳೆಯಿತು.
* ವೇದಕಾಲದ ಗುರುಕುಲ ಶಿಕ್ಷಣದಿಂದ ಆಧುನಿಕ ಮೆಟಾವರ್ಸ್ ತನಕದ ಶಿಕ್ಷಣ ವ್ಯವಸ್ಥೆ ಬಿಂಬಿಸುವ ಹೊಸ ಶಿಕ್ಷಣ ನೀತಿಯ ಅಂಶಗಳನ್ನು ಪ್ರತಿಪಾದಿಸುವ ಸ್ತಬ್ಧಚಿತ್ರವನ್ನು ಶಿಕ್ಷಣ ಸಚಿವಾಲಯ ಪ್ರಸ್ತುತಪಡಿಸಿತು.
* ಮುಂಚೂಣಿಯ ಆರೋಗ್ಯ ಸೇವಾ ಕಾರ್ಯಕರ್ತರು, ಸ್ವಚ್ಛತಾ ಕಾರ್ವಿುಕರು, ರಿಕ್ಷಾ ಚಾಲಕರು, ನಿರ್ಮಾಣ ಕಾಮಗಾರಿ ಶ್ರಮಿಕರು ಮತ್ತು ಸ್ತಬ್ಧಚಿತ್ರಗಳನ್ನು ನಿರ್ವಿುಸಿದ ಕುಶಲಕರ್ವಿುಗಳು, ನ್ಯೂ ಡೆಲ್ಲಿ ಮುನ್ಸಿಪಲ್ ಕೌನ್ಸಿಲ್​ನ ನೂರು ‘ಸಫಾಯಿ ಮಿತ್ರ’ರು ಈ ಸಲ ಪ್ರಜಾಪ್ರಭುತ್ವ ದಿನ ಪರೇಡ್​ನ ವಿಶೇಷ ಅತಿಥಿಗಳು.
* ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್​ವೆುಂಟ್ ಆರ್ಗನೈಸೇಷನ್ (ಡಿಆರ್​ಡಿಒ)ದ ಮೊದಲ ಸ್ತಬ್ಧಚಿತ್ರದಲ್ಲಿ ಉತ್ತಮ್ ಎಂಬ ರಾಡಾರ್ ಮತ್ತು ಐದು ವಿಭಿನ್ನ ವಾಯು ಉಡಾವಣಾ ಶಸ್ತ್ರಗಳು ಮತ್ತು ನಾಲ್ಕನೇ ತಲೆಮಾರಿನ ತೇಜಸ್, ಇಲೆಕ್ಟ್ರಾನಿಕ್ ವಾರ್​ಫೇರ್ ಜಾಮರ್ ಇದ್ದರೆ, ಎರಡನೇಯದರಲ್ಲಿ ಭಾರತದ ನೌಕಾಪಡೆಯ ಜಲಾಂತರ್ಗಾಮಿ ಬಳಕೆಗಾಗಿ ಸಿದ್ಧಪಡಿಸಿದ ಏರ್ ಇಂಡಿಪೆಂಡೆಂಟ್ ಪ್ರೊಪಲ್ಶನ್ (ಎಐಪಿ) ವ್ಯವಸ್ಥೆಗಳಿದ್ದವು.
* ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿ ಜತೆಗೆ ವಿಲೀನವಾದ ಅಮರ ಜವಾನ್ ಜ್ಯೋತಿಯ ಚಿತ್ರ, ರಾಷ್ಟ್ರಧ್ವಜವನ್ನು ಒಳಗೊಂಡ ಚಿತ್ರವನ್ನು ಶೇರ್ ಮಾಡಿದ ರಾಹುಲ್ ಗಾಂಧಿ, 1950ರಲ್ಲಿ ಗಣತಂತ್ರದ ದಿನ ದೇಶ ಸರಿಯಾದ ದಿಶೆಯಲ್ಲೇ ವಿಶ್ವಾಸದೊಂದಿಗೆ ಹೊರಟಿತ್ತು. ಸತ್ಯ ಮತ್ತು ಸಮಾನತೆಯ ಈ ಮೊದಲ ಹೆಜ್ಜೆಗೆ ಗೌರವ ಸಲ್ಲಿಸುತ್ತಿರುವೆ. ಗಣತಂತ್ರ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
* ಗಣತಂತ್ರ ದಿನದ ಗೂಗಲ್ ಡೂಡಲ್ ಗಮನಸೆಳೆದಿದ್ದು, ಅದರಲ್ಲಿ ಎಡದಿಂದ ಬಲಕ್ಕೆ ಪ್ರಾಣಿಗಳ ಪರೇಡ್ ದಾಖಲಾಗಿದೆ. ಆನೆ, ಕುದುರೆ, ನರಿ, ಒಂಟೆಗಳಿವೆ. ನಂತರ ಗುಲಾಬಿ ಬಣ್ಣದ ತಬಲಾ, ಪರೇಡ್​ನ ಪಥ, ಸ್ಯಾಕ್ಸೊಫೋನ್, ಪಾರಿವಾಳಗಳು, ತಿರಂಗಾ ಇದ್ದವು.
* ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಗಣ್ಯರು ದೇಶವಾಸಿಗಳಿಗೆ ಗಣತಂತ್ರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
* ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ದೇಶದ ಪ್ರಜಾಪ್ರಭುತ್ವವ ದಿನವನ್ನು ಆಚರಿಸಿದ ಬಗ್ಗೆ ವರದಿಗಳು ಬಂದಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − eight =
Remember me
