ನವದೆಹಲಿ:ಉನ್ನತ ಶಿಕ್ಷಣದ, ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಹಬ್ ಎನಿಸಿಕೊಂಡಿರುವ ರಾಜಸ್ಥಾನದ ಕೋಟಾದಲ್ಲಿ ಹಾಗೂ ದೇಶದ ಕೆಲವು ಪ್ರದೇಶಗಳಲ್ಲಿ ನಡೆದ ಆತ್ಮಹತ್ಯೆ ಪ್ರಕರಣಗಳು ದೇಶಾದ್ಯಂತ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಇವೆಲ್ಲದರ ಮಧ್ಯೆ ಈ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಪಿಎಚ್​ಡಿ ಮಾಡಿದ್ದಾರೆ.
ಕೋಟಾದಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ದಿನೇಶ್ ಶರ್ಮಾ ಈ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುತ್ತಿರುವ 400 ವಿದ್ಯಾರ್ಥಿಗಳ ಜೊತೆ ಆಪ್ತ ಸಮಾಲೋಚನೆ ನಡೆಸಿ ಅವರು ಈ ಪಿಎಚ್​ಡಿ ಕೈಗೊಂಡಿದ್ದಾರೆ.
ತಮ್ಮ ಪಿಎಚ್​ಡಿ ಅಧ್ಯಯನದ ಬಳಿಕ ದಿನೇಶ್ ಮೂರು ಪ್ರಮುಖ ಶಿಫಾರಸುಗಳನ್ನು ಮಾಡಿದ್ದು, ಇವುಗಳನ್ನು ಪಾಲಿಸಿದರೆ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಆಗುವ ಅಥವಾ ಇಲ್ಲವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊದಲನೆಯದಾಗಿ ಕೋಚಿಂಗ್​ನಲ್ಲಿ ರ್ಯಾಂಕಿಂಗ್ ಸಿಸ್ಟಂ ಇರಬಾರದು. ಕಡೇಪಕ್ಷ ಕೋಚಿಂಗ್ ಸಂಸ್ಥೆಗಳು ಆರಂಭದ ಕೆಲವು ತಿಂಗಳುಗಳಲ್ಲಿ ಹದಿನೈದು ದಿನಕ್ಕೊಮ್ಮೆ ನಡೆಸುವ ಪರೀಕ್ಷೆಗಳಲ್ಲಿ ರ್ಯಾಂಕ್ ಸಿಸ್ಟಂ ಇರಬಾರದು. ನಂತರದ ಮುಖ್ಯ ಪರೀಕ್ಷೆಗಳಲ್ಲೂ ರ್ಯಾಂಕ್ ಇರಬಾರದು ಎಂಬ ಅಭಿಪ್ರಾಯ ನನ್ನದಾಗಿದ್ದರೂ, ಆ ಸಮಯಕ್ಕೆ ವಿದ್ಯಾರ್ಥಿಗಳು ಸ್ವಲ್ಪ ಹೊಂದಿಕೊಂಡಿರುವುದರಿಂದ ಅಂಥ ಸಮಸ್ಯೆ ಆಗುವುದಿಲ್ಲ ಎಂದಿದ್ದಾರೆ. ಮಾತ್ರವಲ್ಲ ರ್ಯಾಂಕ್ ಬದಲು ಗ್ರೇಡ್ ನೀಡುವುದು ಉತ್ತಮ ಎಂದಿದ್ದಾರೆ. ಇದುವರೆಗಿನ ಬಹಳಷ್ಟು ಆತ್ಮಹತ್ಯೆಗಳು ಪಾಕ್ಷಿಕವಾಗಿ ನಡೆಯುವ ಪರೀಕ್ಷೆಗಳ ಫಲಿತಾಂಶ ಹೊರಬಿದ್ದ ಬಳಿಕ ನಡೆದಿರುವುದರಿಂದ ಈ ಅಭಿಪ್ರಾಯ ತಳೆಯಲಾಗಿದೆ ಎಂದಿದ್ದಾರೆ.
ಎರಡನೆಯದಾಗಿ ಕೋಚಿಂಗ್​ಗೆ ಬರುವ ವಿದ್ಯಾರ್ಥಿಗಳಿಂದ ಪೂರ್ತಿ ಶುಲ್ಕವನ್ನು ಒಮ್ಮೆಗೇ ಅಥವಾ 2-3 ಕಂತುಗಳಲ್ಲಿ ಪಡೆಯುವ ಬದಲು ಮೂರು ತಿಂಗಳ ಕಂತುಗಳಲ್ಲಿ ಸ್ವೀಕರಿಸುವಂತಾಗಬೇಕು. ಎರಡು ತಿಂಗಳ ಬಳಿಕ ವಿದ್ಯಾರ್ಥಿಗೆ ಕಲಿಕೆ ಕಷ್ಟ ಎನಿಸಿದರೆ ಪೂರ್ತಿ ಫೀಸ್ ಅದಾಗಲೇ ಪಾವತಿಸಿದ ಕಾರಣಕ್ಕೆ ಆತ ಅನಿವಾರ್ಯವಾಗಿ ಮುಂದುವರಿಯಬೇಕಾಗುತ್ತದೆ. ಮನೆಯವರಿಗೆ ನಷ್ಟ ಆಗುತ್ತದೆ ಎಂದು ಕಷ್ಟಪಟ್ಟು ಮುಂದುವರಿಯುವ ಆತ ಕೊನೆಗೆ ಸಹಿಸಿಕೊಳ್ಳಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದೂ ಹೇಳಿದ್ದಾರೆ. ಕೋಚಿಂಗ್ ಮೊಟಕುಗೊಳಿಸುವ ವಿದ್ಯಾರ್ಥಿಗೆ ಶುಲ್ಕ ಹಿಂಪಾವತಿ ಮಾಡಬೇಕು ಎಂಬ ಸೂಚನೆ ಇದ್ದರೂ ಅದು ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
ಮೂರನೆಯದಾಗಿ ವಿದ್ಯಾರ್ಥಿಗಳ ಸ್ಕೋರ್​ಗೆ ಅನುಗುಣವಾಗಿ ಅವರನ್ನು ಬ್ಯಾಚ್​ಗಳಲ್ಲಿ ವಿಂಗಡಿಸುವುದು ಸರಿಯಲ್ಲ. ಹೆಚ್ಚಿನ ಸ್ಕೋರ್​ಗಳ ವಿದ್ಯಾರ್ಥಿಗಳ ಬ್ಯಾಚ್​ ಕಡಿಮೆ ಸ್ಕೋರ್​ನ ವಿದ್ಯಾರ್ಥಿಗಳ ಬ್ಯಾಚ್​ನವರಲ್ಲಿ ಕೀಳರಿಮೆಯನ್ನು ಮೂಡಿಸುತ್ತದೆ. ಬುದ್ಧಿವಂತ ಹಾಗೂ ಕಡಿಮೆ ಬುದ್ಧಿವಂತ ವಿದ್ಯಾರ್ಥಿಗಳಿಗೆ ಒಟ್ಟಿಗೇ ಕೋಚಿಂಗ್ ನೀಡಿದಾಗ ಜೊತೆಯಲ್ಲಿನ ಕಲಿಕೆಯಿಂದ ಕಡಿಮೆ ಬುದ್ಧಿವಂತ ಸ್ಫೂರ್ತಿಗೊಂಡು ಹೆಚ್ಚಿನ ಪರಿಣತಿ ಪಡೆಯಲು ಸಾಧ್ಯವಾಗುತ್ತದೆ.
ಮತ್ತೋರ್ವ ಐಐಟಿ-ಜೆಇಇ ಆಕಾಂಕ್ಷಿ ಆತ್ಮಹತ್ಯೆ; ಈ ವರ್ಷದಲ್ಲಿ 22 ನೇ ಪ್ರಕರಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
