ಮಲಪ್ಪುರಂ:ಕೇರಳದಲ್ಲಿ ನಡೆದಿದ್ದ ರೆಸ್ಟೋರೆಂಟ್​ ಮಾಲೀಕ ಸಿದ್ದಿಖ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಪ್ಪುರಂ ಪೊಲೀಸ್​ ವರಿಷ್ಠಾಧಿಕಾರಿ ಸುಜಿತ್​ ದಾಸ್​ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಆರೋಪಿಗಳಾದ ಶಿಬಿಲಿ ಮತ್ತು ಫರ್ಹಾನ ಎಣೆದಿದ್ದ ಹನಿಟ್ರ್ಯಾಪ್​ ಬಲೆಗೆ ಬಿದ್ದ ಸಿದ್ದಿಖ್​ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಭಾರೀ ಹಣ ಸಂಪಾದನೆ ಮಾಡುವ ಬಯಕೆಯಿಂದ ಶಿಬಿಲಿ ಮತ್ತು ಫರ್ಹಾನ ಅಡ್ಡದಾರಿ ಹಿಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್​ಪಿ ಸುಜಿತ್​ ಹೇಳಿದರು. ಫರ್ಹಾನ, ಸಿದ್ದಿಖ್​ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಶಿಬಿಲಿಗೆ ರೆಸ್ಟೋರೆಂಟ್​ನಲ್ಲಿ ಕೆಲಸ ಕೊಡುವಂತೆ ಸಿದ್ದಿಖ್​ನನ್ನು ಪ್ರೇರೆಪಿಸಿದ್ದಳು. ಬಳಿಕ ಶಿಬಿಲಿ ಹನಿಟ್ರ್ಯಾಪ್​ ಯೋಜನೆ ರೂಪಿಸಿ, ಸಿದ್ದಿಖ್​ನನ್ನು ಹೋಟೆಲ್​ಗೆ ಕರೆಸಿಕೊಂಡನು. ಬಳಿಕ ಬೆತ್ತಲೆಯಾಗುವಂತೆ ಫರ್ಹಾನ, ಸಿದ್ದಿಖ್​ನನ್ನು ಕೇಳಿದಳು. ಆತನನ್ನು ಬೆತ್ತಲೆ ಮಾಡಿ ಫೋಟೋಶೂಟ್​ ಮಾಡಿ ಬೆದರಿಕೆ ಹಾಕುವುದು ಅವರ ದುರುದ್ದೇಶವಾಗಿತ್ತು. ಆದರೆ, ಸಿದ್ದಿಖ್​ ನಿರಾಕರಿಸಿದನು. ಇದಾದ ನಂತರ ಶಿಬಿಲಿ, ಸಿದ್ದಿಖ್​ ತಲೆ ಮತ್ತು ಎದೆಯ ಮೇಲೆ ಸುತ್ತಿಗೆಯಿಂದ ಹೊಡೆದನು. ಈ ವೇಳೆ ಶಿಬಿಲಿಗೆ ಸುತ್ತಿಗೆ ನೀಡಿದ್ದೇ ಫರ್ಹಾನ. ಇವರಿಬ್ಬರ ಕಾಮನ್ ಫ್ರೆಂಡ್ ಆಶಿಕ್, ಸಿದ್ದಿಕ್ ಎದೆಯನ್ನು ತುಳಿದು ಸಾವನ್ನು ಖಚಿತಪಡಿಸಿಕೊಂಡನು.
ಇದನ್ನೂ ಓದಿ:ಪ್ಯಾಟೆ ಹುಡುಗೀರ ಹಳ್ಳಿ ಲೈಫು! ಎವಿಕೆ ಕಾಲೇಜಲ್ಲಿ ದೇಸೀ ಕಲರವ
ಬಳಿಕ ಮೂವರು ದೇಹದ ಭಾಗಗಳನ್ನು ತುಂಡರಿಸಿ, ಟ್ರಾಲಿಯಲ್ಲಿ ಪ್ಯಾಕ್ ಮಾಡಲು ಯೋಜಿಸಿದ್ದರು. ನಂತರ ಒಂದು ಕಟ್ಟರ್ ಮತ್ತು ಟ್ರಾಲಿಯನ್ನು ಖರೀದಿಸಿದರು. ದೇಹವನ್ನು ಹಲವಾರು ಭಾಗಗಳಾಗಿ ಕತ್ತರಿಸಲಾಯಿತು. ಆಶಿಕ್, ಅಟ್ಟಪಾಡಿಯ ಯಾವುದೋ ನಿರ್ಜನ ಪ್ರದೇಶದಲ್ಲಿ ಟ್ರಾಲಿಯನ್ನು ಹಾಕಲು ಐಡಿಯಾ ತಂದ. ನಂತರ ಮೂವರು ಚೆನ್ನೈ ಮೂಲಕ ಅಸ್ಸಾಂಗೆ ಪಲಾಯನ ಮಾಡಲು ಪ್ರಯತ್ನಿಸಿದರು. ಆದರೆ, ಪ್ರಯತ್ನ ಫಲಿಸದೇ ಮೂವರು ಸಿಕ್ಕಿಬಿದ್ದರು.
ಸಿದ್ದಿಕ್‌ನ ಎಟಿಎಂ ಕಾರ್ಡ್‌ನ ಪಿನ್ ನಂಬರ್​ ಅನ್ನು ಫರ್ಹಾನ ಪಡೆದುಕೊಂಡಿದ್ದಳು. ಸಾವಿನ ನಂತರ ಆತನ ಖಾತೆಯಿಂದ 2 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಹಣ ಪಡೆದ ಸಂದೇಶ ನೇರವಾಗಿ ಸಿದ್ದಿಕ್ ಅವರ ಮಗನ ಮೊಬೈಲ್ ಫೋನ್‌ಗೆ ಹೋಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ತಂದೆಗಾಗಿ ಹುಡುಕಾಡಿ, ಸಿಗದಿದ್ದಾಗ ನಾಪತ್ತೆ ದೂರು ದಾಖಲಿಸಿದ್ದರು. ಕೊನೆಗೆ ಶವವಾಗಿ ಸಿದ್ದಿಖ್​ ಪತ್ತೆಯಾಗಿದ್ದು, ಮೂವರು ಆರೋಪಿಗಳು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.(ಏಜೆನ್ಸೀಸ್​)
ವಿಪಕ್ಷಗಳ ಬಹಿಷ್ಕಾರದ ನಡುವೆ ಹೊಸ ಸಂಸತ್​ ಭವನ ಲೋಕಾರ್ಪಣೆ: ಪ್ರಮುಖ 10 ಅಂಶಗಳು ಇಲ್ಲಿವೆ…

ಮದುವೆಯಾಗುವುದಾಗಿ ನಂಬಿಸಿ ಓಯೋ ರೂಮ್​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ! ದೂರು ದಾಖಲು

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರ ಒತ್ತಾಯ: ಕಾಂಗ್ರೆಸ್​ಗೆ ಕಾಡುತ್ತಿದೆ ಗ್ಯಾರಂಟಿಗಳ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 4 =
Remember me
