ತಿರುಪತಿ:ತಿಮ್ಮಪ್ಪ ಭಕ್ತರ ಸುರಕ್ಷತೆ ದೃಷ್ಟಿಯಿಂದ ತಿರುಮಲೆಗೆ ತೆರಳುವ ದ್ವಿಚಕ್ರ ವಾಹನಗಳ ಮೇಲೆ ತಿರುಪತಿ-ತಿರುಮಲ ದೇವಸ್ಥಾನ ಸಮಿತಿ(ಟಿಟಿಡಿ)ನಿರ್ಬಂಧ ಹೇರಿದೆ.
ಇದನ್ನೂ ಓದಿ:ಕವಿತಾಗೆ ಮಧ್ಯಂತರ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್
ಆಗಸ್ಟ್​ 12ರ ಸೋಮವಾರದಿಂದ ಸೆಪ್ಟೆಂಬರ್ 30 ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ತಿರುಮಲೆಯಲ್ಲಿ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಬರುವ ಎರಡೂ ಘಾಟ್ ರಸ್ತೆಗಳಲ್ಲಿ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕಾಡು ಪ್ರಾಣಿಗಳ ಸಂತಾನವೃದ್ಧಿ ಹೆಚ್ಚಾಗಿರುತ್ತದೆ. ಇವು ಮಾರ್ಗದ ಮೇಲೆ ಸಂಚರಿಸುತ್ತಿರುತ್ತವೆ. ಅಷ್ಟೇ ಅಲ್ಲ ಭಕ್ತಾದಿಗಳು ಹಾಗೂ ವನ್ಯಜೀವಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟಿಟಿಡಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಕಚೇರಿ ತಿಳಿಸಿದೆ.
ಇತ್ತೀಚೆಗೆ ತಿರುಮಲೆಯಿಂದ ತಿರುಪತಿಗೆ ಬರುತ್ತಿದ್ದ ದ್ವಿಚಕ್ರವಾಹನ ಆಯತಪ್ಪಿ ಬಸ್​ ಕೆಳಗೆ ಬಿದ್ದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೇ ಅಲ್ಲದೆ ಪದೇ ಪದೇ ಎರಡೂ ಘಾಟ್​ ಮಾರ್ಗಗಳಲ್ಲಿ ಆಗಾಗ ಅಪಘಾತಗಳು ಘಟಿಸುತ್ತಿರುವುದೂ ಟಿಟಿಡಿ ಈ ತೀರ್ಮಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಹಸೀನಾ ಪಕ್ಷ ನಿಷೇಧವಿಲ್ಲ..ಬಾಂಗ್ಲಾ ಗೃಹ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 11 =
Remember me
