|ರಾಘವ ಶರ್ಮ ನಿಡ್ಲೆನವದೆಹಲಿ
2019ಕ್ಕೂ ಮುನ್ನ ಕಾಶಿ ವಿಶ್ವನಾಥನ ಜ್ಯೋತಿರ್ಲಿಂಗ ದರ್ಶನ ಪಡೆಯುವುದೇ ಹರಸಾಹಸದ ಕೆಲಸವಾಗಿತ್ತು. ಗಲ್ಲಿ ಗಲ್ಲಿಗಳಲ್ಲಿ ದಲ್ಲಾಳಿಗಳ ಕಾಟ. ಯಾತ್ರಾರ್ಥಿಗಳ ಮೇಲೆರಗಿ ಬೀಳುವ ಜನಸಂದಣಿ. ‘ನಿಮ್ಮ ಮೊಬೈಲ್, ಚಪ್ಪಲಿಗಳನ್ನು ನಾವಿಟ್ಟುಕೊಳ್ಳುತ್ತೇವೆ, ಇಲ್ಲೇ ಜಮೆ ಮಾಡಿ’ ಎಂದು ಪ್ರಾಣಹಿಂಡುತ್ತಿದ್ದ ಅಂಗಡಿ ಮಾಲೀಕರು. ಸರಿ, ಇದನ್ನೆಲ್ಲ ಏಗಿಕೊಂಡು ದೇಗುಲದೊಳಕ್ಕೆ ಹೋಗೋಣ ಎಂದರೆ ಹತ್ತಾರು ದಾರಿಗಳು. ಎಲ್ಲಿ ಕಾಲಿಡುವುದು ಎಂದೇ ಹೊಳೆಯದು. ಹಾದಿಯುದ್ದಕ್ಕೂ ಬಿಡಾಡಿ ದನಗಳು. ನೂರಿನ್ನೂರು ರೂಪಾಯಿಗೆ ತ್ವರಿತವಾಗಿ ವಿಶ್ವನಾಥ ದರ್ಶನ ಮಾಡಿಸುವುದಾಗಿ ದುಂಬಾಲು ಬೀಳುವ ಮಧ್ಯವರ್ತಿಗಳು. ಈ ತಲೆನೋವುಗಳ ಮಧ್ಯೆ ಓಣಿ, ಗಲ್ಲಿಗಳ ಉಬ್ಬು ತಗ್ಗಿನ, ಅಂಕುಡೊಂಕಾದ, ಕಿರಿದಾದ ರಸ್ತೆಗಳಲ್ಲಿ ದಾಟಿ ವಿಶ್ವನಾಥನ ದರ್ಶನ ಪಡೆಯಬೇಕು. ಈ ನಡುವೆ, ಏಕಕಾಲಕ್ಕೆ ವಿರುದ್ಧ ದಿಕ್ಕಿನಿಂದ ಎರಡು ದ್ವಿಚಕ್ರ ವಾಹನಗಳು ಬಂದರೆ ನಮ್ಮನ್ನು ಭಗವಾನ್ ವಿಶ್ವನಾಥನೇ ಕಾಪಾಡಬೇಕಾದ ಪರಿಸ್ಥಿತಿ!
ವಿಶ್ವನಾಥ ಮಂದಿರ ಸುತ್ತಮುತ್ತ ಎಲ್ಲಿ ನೋಡಿದರಲ್ಲಿ ಮಂದಿರ, ಗೋಪುರ, ದೇವಸ್ಥಾನಗಳು. ಕೆಲ ದೇಗುಲಗಳು ಮನೆಗಳೊಳಗೆ ನುಸುಳಿಕೊಂಡಿವೆಯೋ ಅಥವಾ ಮನೆಗಳೇ ದೇಗುಲದೊಳಗೆ ಅತಿಕ್ರಮಿಸಿವೆಯೋ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಯಾತ್ರಾರ್ಥಿಗಳಿಗೆ ವಿಶ್ವನಾಥನ ದರ್ಶನ ಸುಲಭದಲ್ಲಿ ದಕ್ಕುವಂಥದ್ದಲ್ಲ. ಹಾಗಿದ್ದರೂ, ಇದು ವಿಶ್ವವಿಖ್ಯಾತ ಮಂದಿರ ಕ್ಷೇತ್ರ. ವಿಶ್ವನಾಥನ ಮೇಲಿನ ಪ್ರಾಮಾಣಿಕ ಭಕ್ತಿಯಿಂದ ಬರುವ ಜನರು, ‘ವಿಶ್ವಮಾನ್ಯ ಧಾರ್ವಿುಕ ಕೇಂದ್ರದಲ್ಲಿ ವ್ಯವಸ್ಥೆ ಇನ್ನೂ ಚೆನ್ನಾಗಿರಬೇಕು’ ಎಂದು ಮನದೊಳಗೇ ಗೊಣಗಾಡಿಕೊಳ್ಳುತ್ತಾರೆ. ಅದು ತಪ್ಪಲ್ಲ ಬಿಡಿ.
ಒಟ್ಟಿನಲ್ಲಿ, ಇನ್ನು ಈ ತಲೆನೋವಿಲ್ಲ. ಕಾಶಿ ಕಾರಿಡಾರ್ ಯೋಜನೆ ಈ ಎಲ್ಲ ಸಮಸ್ಯೆಗಳಿಂದ ಭಕ್ತರನ್ನು ಮುಕ್ತಗೊಳಿಸಿದೆ. ಭಕ್ತರ ಮಂದಿರಪ್ರವೇಶ, ಗಂಗಾನದಿ ಸ್ನಾನ ಸೇರಿ ಎಲ್ಲವೂ ಸರಾಗ, ಸುಗಮ. ದೇವಸ್ಥಾನದ ಪರಿಸರ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಇಟ್ಟುಕೊಂಡು ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಗಂಗಾನದಿಯ ದಶಾಶ್ವಮೇಧ, ಮಣಿಕರ್ಣಿಕಾ, ಲಲಿತಾ ಘಾಟ್ ಸೇರಿದಂತೆ ಹತ್ತು ಹಲವು ಘಾಟ್​ಗಳಿಂದ ಮಂದಿರಕ್ಕೆ ತಡೆರಹಿತ ಪ್ರವೇಶ ದೊರೆಯಲಿದೆ.
ಯೋಜನೆ ವೆಚ್ಚ: ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ಧಾಮ ಯೋಜನೆ ಸಾಕಾರಗೊಂಡಿದೆ. 2019ರ ಮಾರ್ಚ್ ತಿಂಗಳಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಯೋಜನೆ ಪ್ರಾರಂಭಕ್ಕೆ ಮುನ್ನ 3000 ಚದರ ಅಡಿ ಸುತ್ತಳತೆಯಲ್ಲಿದ್ದ ವಿಶ್ವನಾಥ ಮಂದಿರ ಪರಿಸರ ಈಗ ಬರೋಬ್ಬರಿ 5,00,000 ಚದರ ಅಡಿಗೆ ವಿಸ್ತರಣೆಗೊಂಡಿದೆ. ಇದರಿಂದಾಗಿ ದೇವಸ್ಥಾನದ ಪ್ರಾಂಗಣಕ್ಕೆ ಪ್ರವೇಶ ನೀಡುವ ನಾಲ್ಕೂ ದ್ವಾರಗಳಲ್ಲಿ ಜನಸಂಚಾರ ತಡೆರಹಿತವಾಗಲಿದೆ. ಮಂದಿರದ ಪಕ್ಕದಲ್ಲೇ ಆಸ್ಪತ್ರೆ, ವಿಶ್ರಾಂತಿಗೃಹ, ಕ್ಯಾಂಟೀನ್, ಮಾಹಿತಿಕೇಂದ್ರ, ವೇದಕೇಂದ್ರ, ಧಾರ್ವಿುಕ ಪುಸ್ತಕ ಮಳಿಗೆ ಸೇರಿ ಭಕರಿಗೆ ಅಗತ್ಯವಿರುವ ಹಲವು ಕಟ್ಟಡಗಳು ತಲೆಯೆತ್ತಿ ನಿಂತಿವೆ.
ಸವಾಲಿನ ಯೋಜನೆ:ದೇಗುಲ ಸುತ್ತಲಿನ ರಸ್ತೆ ಅಗಲೀಕರಣಕ್ಕೆ ಅಕ್ಕಪಕ್ಕದಲ್ಲಿದ್ದ ಹತ್ತಾರು ಕಟ್ಟಡ, ಅತಿಥಿಗೃಹ, ಹೋಟೆಲುಗಳನ್ನು ಕೆಡವುವದು ಅನಿವಾರ್ಯವಾಗಿತ್ತು. ಒಟ್ಟು 314 ಕಟ್ಟಡಗಳನ್ನು ಗುರುತಿಸಿ, ಸಂಬಂಧಪಟ್ಟ ಮಾಲೀಕರಿಗೆ ಪರಿಹಾರಧನ ವಿತರಿಸಲಾಗಿದೆ. ವಿಚಿತ್ರ ಎಂದರೆ ಅನೇಕ ಕಟ್ಟಡಗಳ ಮಾಲೀಕರು ಎಂದು ಹೇಳಿಕೊಂಡವರಲ್ಲಿ ಪೂರಕ ದಾಖಲೆಗಳಿರಲಿಲ್ಲ. ಅಭಿವೃದ್ಧಿ ಯೋಜನೆ ಕಾಮಗಾರಿ ಸಲುವಾಗಿ ಕಟ್ಟಡಗಳನ್ನು ಕೆಡವುತ್ತಿದ್ದಂತೆಯೇ ನೂರಾರು ವರ್ಷಗಳಷ್ಟು ಹಳೆಯದಾದ, ಐತಿಹಾಸಿಕ ಕಥೆಗಳನ್ನು ಹೇಳುವ, ಧಾರ್ವಿುಕ ಮತ್ತು ಸಾಂಸ್ಕೃತಿಕ ಪರಂಪರೆಯ ಒಟ್ಟು 61 ಗೋಪುರ, ಮಂದಿರಗಳು, ದೇವರಮೂರ್ತಿಗಳು ಕಾಣಿಸಿಕೊಂಡವು. ಹೀಗಾಗಿ, ಯೋಜನೆಗೆ ತಿದ್ದುಪಡಿ ತಂದು, ಅವುಗಳನ್ನು ಹಾಗೇ ಉಳಿಸಿಕೊಂಡು ಅಭಿವೃದ್ಧಿಪಡಿಸಲು ತೀರ್ವನಿಸಲಾಯಿತು. ಕಟ್ಟಡ ತೆರವು ಪ್ರಕ್ರಿಯೆಯಿಂದಾಗಿ ಭಕ್ತರು, ಯಾತ್ರಾರ್ಥಿಗಳ ಕಣ್ಣಿಗೇ ಗೋಚರಿಸದಿದ್ದ ಅವೆಷ್ಟೋ ಮಂದಿರಗಳು ಈಗ ನಳನಳಿಸುತ್ತಿವೆ. ಹಿಂದಿನ ರಾಜ-ಮಹಾರಾಜ ಕಾಲದಲ್ಲಿ ನಿರ್ವಣಗೊಂಡಿದ್ದ ಮಂದಿರಗಳೆಲ್ಲವೂ ಸ್ಥಳೀಯರ ಮನೆ, ಹೋಟೆಲ್, ಅತಿಥಿಗೃಹಗಳಿಂದಾಗಿ ಮುಚ್ಚಿ ಹೋಗಿದ್ದವು. ಆರಂಭದಲ್ಲಿ ಕಾರಿಡಾರ್ ಯೋಜನೆಗೆ ಸ್ಥಳೀಯರ ವಿರೋಧ ಕೇಳಿಬಂದಿತ್ತು. ಆದರೆ, ಮಾರುಕಟ್ಟೆ ದರಕ್ಕಿಂತ ನಾಲ್ಕೆ ೖದು ಪಟ್ಟು ಹೆಚ್ಚು ಪರಿಹಾರ ಹಣ ನೀಡಲು ಸರ್ಕಾರ ಒಪ್ಪಿದ್ದರಿಂದ ವಿರೋಧ ಕಡಿಮೆಯಾಯಿತು. ಕಾರಿಡಾರ್ ನಿರ್ವಣದಿಂದಾಗಿ ದೇಗುಲ ಪರಿಸರ ಹಾಳಾಗಿದೆ ಎಂದು ವಿರೋಧಿಗಳು ಹೇಳಿದರೂ, ವಿಶ್ವನಾಥ ಮಂದಿರದ ಸುತ್ತಮುತ್ತ ಹತ್ತಾರು ಪ್ರಾಚೀನ ಮಂದಿರಗಳಿದ್ದವು ಎನ್ನುವುದು ಕಾರಿಡಾರ್ ಯೋಜನೆಯಿಂದ ಸಾಬೀತಾಗಿದೆ.
ಕನ್ನಡಿಗ ಅಧಿಕಾರಿಯ ದೂರದೃಷ್ಟಿ:ಮಂದಿರ ಸುತ್ತಮುತ್ತ ಭಕ್ತರ ಸುಗಮ ಓಡಾಟಕ್ಕೆ ಹಿಂದಿನ ಕಾಶಿ ಕಮಿಷನರ್, ಕನ್ನಡಿಗ ಐಎಎಸ್ ಅಧಿಕಾರಿ ನಿತಿನ್ ರಮೇಶ್ ಗೋಕರ್ಣ ಅವರು ಮೊದಲೇ ಯೋಜನೆ ರೂಪಿಸಿದ್ದರು. ಅವರು ಡೈನಾಮಿಕ್ ಅಧಿಕಾರಿ ಎಂದೇ ಗಮನಸೆಳೆದಿದ್ದರು. ಇವರು ಕಾಶಿ ಆಯುಕ್ತರಾಗಿದ್ದಾಗ ಮಾಯಾವತಿ ಮುಖ್ಯಮಂತ್ರಿಯಾಗಿದ್ದರು. ಕಾಶಿ ಸಮುಚ್ಚಯ ನಿರ್ವಣಕ್ಕೆ ಸಂಬಂಧಿಸಿ ಮಂದಿರದ ಅಕ್ಕಪಕ್ಕದ ಕಟ್ಟಡ, ಮನೆಗಳನ್ನು ಸರ್ಕಾರದ ಮುಖೇನ ಖರೀದಿಸಲು ಜಿಲ್ಲಾಧಿಕಾರಿ ಮುಂದಾಗಿದ್ದರು. ಗಲ್ಲಿ, ಓಣಿಗಳಲ್ಲಿ ಅವ್ಯವಸ್ಥೆಯ ಆಗರವೆಂಬಂತೆ ಕಟ್ಟಿಕೊಂಡಿರುವ ಮನೆ, ಕಟ್ಟಡ ತೆರವುಗೊಳಿಸದಿದ್ದರೆ ಯಾತ್ರಿ, ಭಕ್ತಾದಿಗಳ ಸಮಸ್ಯೆ ನಿತ್ಯನಿರಂತರ ಎಂದು ಭಾವಿಸಿಯೇ ಈ ಕ್ರಮ ಕೈಗೊಂಡರು. ಆದರೆ, ಜಿಲ್ಲಾಧಿಕಾರಿ ಕ್ರಮದಿಂದ ಅಸಂತುಷ್ಟರಾಗಿದ್ದ ಕೆಲ ಸ್ಥಳೀಯರು ಸರ್ಕಾರಕ್ಕೆ ದೂರು ನೀಡಿದ್ದರಿಂದ ಜಿಲ್ಲಾಧಿಕಾರಿ ಕ್ರಮಕ್ಕೆ ಲಗಾಮು ಹಾಕಲಾಯಿತು. 2014ರಲ್ಲಿ ಮೋದಿ ಪ್ರಧಾನಿಯಾಗುತ್ತಿದ್ದಂತೆಯೇ ಗೋಕರ್ಣರನ್ನು ಕಾಶಿಯ ಆಯುಕ್ತರನ್ನಾಗಿ ಮರು ನೇಮಿಸಿಕೊಳ್ಳಲಾಯಿತು ಮತ್ತು ‘ಕಾಶಿ ಕಾರಿಡಾರ್ ಯೋಜನೆ’ಯ ರೂಪುರೇಷೆ ಸಿದ್ಧಪಡಿಸಲು ಸೂಚಿಸಲಾಯಿತು.
ಸಾಮರಸ್ಯದ ಹೆಜ್ಜೆ:ವಿಶ್ವನಾಥನ ಮಂದಿರದ ಪಕ್ಕದಲ್ಲೇ ಜ್ಞಾನವಾಪಿ ಮಸೀದಿಯಿದೆ. ಕಾರಿಡಾರ್ ನಿರ್ವಣಕ್ಕೆ ಮಸೀದಿ ಎದುರು ಭಾಗದಲ್ಲಿ ಭೂಮಿಯ ಅಗತ್ಯವಿತ್ತು. ಈ ಭೂಮಿ ಖರೀದಿಗೆ ಸರ್ಕಾರದ ಪ್ರಸ್ತಾಪವನ್ನು ಒಪ್ಪಿದ ಜ್ಞಾನವಾಪಿ ಮಸೀದಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಂಜುಮನ್ ಇಂತೆಜಮಿಯಾ ಮಸ್ಜಿದ್ ಸಂಸ್ಥೆ 1000 ಚದರ ಅಡಿ ಭೂಮಿಯನ್ನು ಹಂಚಿಕೆ ಮಾಡಿತು.
ರಾಜಕೀಯ ಲಾಭ:2019ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗೆ ಮುಂದಾದ ಕೇಂದ್ರ ಮತ್ತು ಯೋಗಿ ಸರ್ಕಾರ, 2022ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ವಿಶ್ವನಾಥ ಧಾಮ ಉದ್ಘಾಟನೆ ಮಾಡುತ್ತಿದೆ. ಕಾಶಿ ಕಾರಿಡಾರ್ ಉದ್ಘಾಟನೆ ಬಳಿಕ ಹಿಂದೂ ಶ್ರದ್ಧಾಳುಗಳು ಇಲ್ಲಿಗೆ ಭೇಟಿ ನೀಡುವಂತೆ ಪ್ರೇರೇಪಿಸುವ ಅಭಿಯಾನ ಈಗಾಗಲೇ ಬಿಜೆಪಿಯಲ್ಲಿ ಶುರುವಾಗಿದೆ. ಅಲ್ಲದೆ, ವಿಶ್ವನಾಥ ಧಾಮದ ದೇವರ ಪ್ರಸಾದವನ್ನು ಮನೆ-ಮನೆಗೆ ತಲುಪಿಸುವ ಕಾರ್ಯವೂ ಪಕ್ಷದಿಂದ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಭಿವೃದ್ಧಿ ಕಾರ್ಯಸೂಚಿ ಜತೆಗೆ ಕಾಶಿ ಅಭಿವೃದ್ಧಿ ಮತ್ತು ಅಯೋಧ್ಯೆ ಮಂದಿರ ನಿರ್ವಣವೂ ಹಿಂದೂ ಮತಗಳ ಕ್ರೋಡೀಕರಣಕ್ಕೆ ಬಳಸಿಕೊಳ್ಳುವ ತಂತ್ರಗಾರಿಕೆಯ ಭಾಗ ಎಂಬುದು ಗುಟ್ಟಿನದ್ದೇನಲ್ಲ.
ಸೇನಾ ಮುಖ್ಯಸ್ಥರ ಸಾವಿಗೆ ಕೆಲವರು ಸಂಭ್ರಮಿಸಿದ್ದನ್ನು ನೋಡಿ ಬೇಸತ್ತ ಖ್ಯಾತ ನಿರ್ದೇಶಕ, ಇಸ್ಲಾಂ ಧರ್ಮ ಬಿಟ್ಟು ಹಿಂದು ಧರ್ಮಕ್ಕೆ ಸೇರ್ಪಡೆ..

https://www.vijayavani.net/swamiji-lost-life-due-to-snake-bite/
Sign in to your account
Please enter an answer in digits:six − three =
Remember me
