ಕರ್ತವ್ಯದಲ್ಲಿದ್ದಾಗ ಮಹಿಳೆಯೊಬ್ಬರು ನೀಡಿದ್ದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸ್​ ಇನ್​ಸ್ಪೆಕ್ಟರ್ ಒಬ್ಬರು, ನಿವೃತ್ತಿ ಬಳಿಕ ಅದೇ ಮಹಿಳೆಯ ವಿರುದ್ಧ ಸುಲಿಗೆ ಆರೋಪ ಹೊರಿಸಿ ಪೊಲೀಸ್​ ಠಾಣೆ ಮೆಟ್ಟಿಲೇರುವಂತಾಗಿದೆ.
ಇನ್ನಿಬ್ಬರ ಜತೆ ಸೇರಿ ಆ ಮಹಿಳೆ 1 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿರುವುದಾಗಿ ರಿಟೈರ್ಡ್ ಪೊಲೀಸ್​ ಇನ್​​ಸ್ಪೆಕ್ಟರ್ ದೂರು ನೀಡಿದ್ದರೆ, ಇನ್ನೊಂದೆಡೆ ಅವರು ತನ್ನನ್ನು ಅತ್ಯಾಚಾರ ಮಾಡಿದ್ದರು ಎಂದು ಮಹಿಳೆ ಪ್ರತ್ಯಾರೋಪ ಹೊರಿಸಿದ್ದಾಳೆ.
ಒಂದು ತಿಂಗಳ ಹಿಂದೆ ನಿವೃತ್ತರಾಗಿರುವ ಹರಿಯಾಣದ ಗುರುಗ್ರಾಮದ ಪೊಲೀಸ್​ ಇನ್​​ಸ್ಪೆಕ್ಟರ್​ ದಲ್ಬೀರ್ ಸಿಂಗ್​ ಬುಧವಾರ ಈ ದೂರು ದಾಖಲಿಸಿದ್ದಾರೆ. ನಾನು ಹನ್ನೊಂದು ತಿಂಗಳ ಹಿಂದೆ ಗುರುಗ್ರಾಮದ ಸದರ್ ಪೊಲೀಸ್​ ಠಾಣೆಗೆ ನಿಯೋಜನೆಗೊಂಡಿದ್ದೆ. ಆಗ ಈ ಮಹಿಳೆ ಠಾಣೆಗೆ ಬಂದು ದೂರು ನೀಡಿದ್ದು, ಆ ಕುರಿತು ಕಾನೂನು ಪ್ರಕಾರ ಕ್ರಮ ಜರುಗಿಸಿದ್ದೆ. ಆದರೆ ಈ ಮಹಿಳೆ ಆ ಬಳಿಕ ರಾಜ್​ದೀಪ್​ ಮತ್ತು ಮೋನು ಎಂಬಿಬ್ಬರ ಜತೆ ಸೇರಿ ನನ್ನನ್ನು ಬ್ಲ್ಯಾಕ್​ಮೇಲ್​ ಮಾಡಲು ಯತ್ನಿಸಿದ್ದಳು. ತುಂಬ ಸಲ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ 1 ಕೋಟಿ ರೂ. ನೀಡುವಂತೆ ಹೆದರಿಸಿದ್ದರು ಎಂಬುದಾಗಿ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ.
ಹಣ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ 2019ರ ಆಗಸ್ಟ್​ನಲ್ಲಿ ಅವರು ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು. ಆಗ ನಾನು ಬಂಧಿತನಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದೆ ಎಂದು ದಲ್ಬೀರ್ ಹೇಳಿದ್ದಾರೆ. ಮತ್ತೊಂದೆಡೆ ದಲ್ಬೀರ್​ ನನಗೆ ಬಾರ್​ ಆ್ಯಂಡ್​ ರೆಸ್ಟೋರೆಂಟ್​ನಲ್ಲಿ ಕೆಲಸ ಕೊಡಿಸಿ ನೆರವಾದಂತೆ ನಟಿಸಿ, 4 ತಿಂಗಳ ಕಾಲ ಆಗಾಗ ಅತ್ಯಾಚಾರ ನಡೆಸಿ ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್​​ಮೇಲ್​ ಮಾಡಿದ್ದರು ಎಂಬುದಾಗಿ ಜಿಂದ್ ಪೊಲೀಸ್​ ಠಾಣೆಯಲ್ಲಿ ಮಹಿಳೆ 2019ರ ಆಗಸ್ಟ್​ನಲ್ಲಿ ದೂರು ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ದಲ್ಬೀರ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 2 =
Remember me
