ನವದೆಹಲಿ:ಭಾರತ ಮಿತ್ರ ರಾಷ್ಟ್ರವಾಗಿದೆ. ಅದು ಅತಿಕ್ರಮಿಸಿಕೊಂಡಿರುವ ನಮ್ಮ ಜಾಗಗಳನ್ನು ಅದು ಒಳ್ಳೆಯ ಮಾತಿನಲ್ಲಿ ನಮಗೆ ಮರಳಿಸಬೇಕು ಎಂದು ನೇಪಾಳದ ರಕ್ಷಣಾ ಸಚಿವ ಈಶ್ವರ್​ ಪೊಖ್ರೇಲ್​ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚೀನಾದ ಚಿತಾವಣೆ ಮೇರೆಗೆ ನಾವು ಇಲ್ಲದ ಗಡಿ ವಿವಾದವನ್ನು ಕೆದುಕುತ್ತಿದ್ದೇವೆ ಎಂಬ ಭಾರತೀಯ ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ಅವರ ಆರೋಪ ಒಂದು ರಾಜಕೀಯ ಸ್ಟಂಟ್​ ಎಂದು ಬಣ್ಣಿಸಿದರು.
ಉತ್ತರಾಖಂಡದ ಧಾರಚುಲಾದೊಂದಿಗೆ ಸಂಪರ್ಕ ಒದಗಿಸುವ ರೀತಿಯಲ್ಲಿ ಲಿಪುಲೇಖ್​ಗೆ ಭಾರತ ರಸ್ತೆ ನಿರ್ಮಿಸಿರುವುದಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿತ್ತು. ಯಾವುದೋ ಬಾಹ್ಯ ಶಕ್ತಿಯ ಒತ್ತಡಕ್ಕೆ ಮಣಿದು ನೇಪಾಳ ಈ ಆರೋಪ ಮಾಡುತ್ತಿದೆ ಎಂದು ಜನರಲ್​ ನರವಾನೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಇದನ್ನೂ ಓದಿ:ಟಿ-ಶರ್ಟ್ ಮೇಲೆ ‘ರಾಬರ್ಟ್’ … ಹೇಗಿದೆ ನೋಡಿ ದರ್ಶನ್ ಹವಾ!
ಆದರೆ, ಇದಾಗಿ ಒಂದೆರಡು ದಿನಗಳಲ್ಲಿ ನೇಪಾಳ ಲಿಪುಲೇಖ್​, ಲಿಂಪಿಯಾಧುರಾ ಮತ್ತು ಕಾಲಾಪಾನಿ ತಮಗೆ ಸೇರಿದ್ದು ಎಂಬಂತೆ ಬಿಂಬಿಸಿ ಪರಿಷ್ಕೃತ ಭೂಪಟವನ್ನು ಬಿಡುಗಡೆ ಮಾಡಿತ್ತು. ಆದರೆ ಈ ಮೂರು ಪ್ರದೇಶಗಳು ಉತ್ತರಾಖಂಡದ ಪಿತ್ತೋರ್​ಗಢ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ ಎಂದು ಭಾರತ ಪ್ರತಿಪಾದಿಸಿದೆ.
ಈ ಮೂರು ಪ್ರದೇಶಗಳನ್ನು ಭಾರತ ಅತಿಕ್ರಮಿಸಿಕೊಂಡಿದೆ. ನೇಪಾಳದೊಂದಿಗೆ ಭಾರತ ಸ್ನೇಹ ಹಾಗೂ ಸೌಹಾರ್ದಯುತ ಸಂಬಂಧ ಹೊಂದಿದೆ. ಆದ್ದರಿಂದ ರಾಜಕೀಯ ಮತ್ತು ರಾಜತಾಂತ್ರಿಕ ಮಾರ್ಗದಲ್ಲಿನ ಮಾತುಕತೆ ಮೂಲಕ ಈ ಪ್ರದೇಶಗಳನ್ನು ನಮಗೆ ಮರಳಿಸಬೇಕು ಎಂದು ನೇಪಾಳದ ರಕ್ಷಣಾ ಸಚಿವ ಈಶ್ವರ್​ ಪೊಖ್ರೇಲ್​ ಹೇಳಿದ್ದಾರೆ.
ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
