ಮುಂಬೈ:ದಕ್ಷಿಣ ಆಫ್ರಿಕಾದಿಂದ ಮರಳಿದ ಮಹಾರಾಷ್ಟ್ರದ ಪುರುಷನೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಒಮಿಕ್ರಾನ್​ ರೂಪಾಂತರಿ ಭಾರತ ಪ್ರವೇಶಿಸಿತೇ ಎಂಬ ಪ್ರಶ್ನೆ ಮೂಡಿಸಿದೆ. ಥಾಣೆ ಜಿಲ್ಲೆಯ ದಾಂಬಿವಲಿಯ ನಿವಾಸಿಯಾದ ಈತನನ್ನು ಐಸೋಲೇಷನ್​ನಲ್ಲಿರಿಸಲಾಗಿದ್ದು, ಜೀನೋಮ್​ ಸೀಕ್ವೇಂಸಿಂಗ್​ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಲಾಗಿದೆ ಎಂದು ನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ರಿಕಾದ ಕೇಪ್​​ ಟೌನ್​​ನಿಂದ ನ.24 ರಂದು ವಿಮಾನದಲ್ಲಿ ಥಾಣೆ ತಲುಪಿದ ಈ ವ್ಯಕ್ತಿಯ ಕರೊನಾ ಪರೀಕ್ಷೆ ಪಾಸಿಟಿವ್ ಬಂದಿದ್ದು, ಅವನನ್ನು ಕಲ್ಯಾಣ್​-ದಾಂಬಿವಲಿ ಮುನಿಸಿಪಲ್​ ಕಾರ್ಪೋರೇಷನ್ನಿನ ಆರ್ಟ್​ ಗ್ಯಾಲರಿ ಐಸೋಲೇಷನ್​ ಸೆಂಟರಿನಲ್ಲಿರಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಪ್ರತಿಭಾ ಪನ್​ಪಾಟೀಲ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಲಂಚಬಾಕ ಪಾತಪಾಳ್ಯ ಪಿಎಸ್‌ಐ : ಹಣ ಕೊಟ್ರೆ ಕೆಲ್ಸ, ಇಲ್ಲದಿದ್ರೆ ಕೇಸ್ !
ಇತ್ತೀಚೆಗಷ್ಟೇ, ವಿಶ್ವ ಆರೋಗ್ಯ ಸಂಸ್ಥೆಯು ವೇರಿಯೆಂಟ್​ ಆಫ್​ ಕರ್ನರ್ನ್​ ಎಂದು ಘೋಷಿಸಿದ ಒಮಿಕ್ರಾನ್​ ರೂಪಾಂತರಿ ದಕ್ಷಿಣಾ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ಈ ಅಂತಾರಾಷ್ಟ್ರೀಯ ಪ್ರಯಾಣಿಕನಿಗೆ ತಗುಲಿರುವ ಸೋಂಕಿಗೆ ಕರೊನಾದ ಯಾವ ರೂಪಾಂತರಿ ಕಾರಣವಾಗಿದೆ ಎಂದು ಪತ್ತೆ ಹಚ್ಚಲಾಗುತ್ತಿದೆ. ಹೊಸ ರೂಪಾಂತರಿಯನ್ನು ಎದುರಿಸಲೂ ನಾವು ಸಿದ್ಧರಾಗಿದ್ದೇವೆ ಎಂದು ವೈದ್ಯಾಧಿಕಾರಿ​ ಹೇಳಿದ್ದಾರೆ.(ಏಜೆನ್ಸೀಸ್)
ಮಹಿಳಾ ಸದಸ್ಯರೊಂದಿಗೆ ಕಾಂಗ್ರೆಸ್​ ಸಂಸದ ಶಶಿ ತರೂರ್​ ಸೆಲ್ಫಿ! ಶೀರ್ಷಿಕೆ ನೋಡಿ ಸಿಟ್ಟಾದ ನೆಟ್ಟಿಗರು

ಬಿಟ್​ಕಾಯಿನ್​ಗೆ ಭಾರತದಲ್ಲಿ ಸಿಗುವುದೇ ಮಾನ್ಯತೆ? ವಿತ್ತ ಸಚಿವಾಲಯ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
