ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ವಿಚಾರಣೆ ಆರಂಭಿಸಿದ ದಿನದಿಂದ ಪ್ರಕರಣಕ್ಕೆ ಹಲವು ರೋಚಕ ತಿರುವುಗಳು ಸಿಗುತ್ತಲೇ ಇವೆ.
ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ವಿರುದ್ಧ ಸುಶಾಂತ್​ ತಂದೆ ಕೆ.ಕೆ. ಸಿಂಗ್​ ಪ್ರಕರಣ ದಾಖಲಿಸುತ್ತಿದ್ದಂತೆ ಆಕೆಯ ವಿರುದ್ಧ ಹಲವರು ಮಾತನಾಡುತ್ತಿದ್ದಾರೆ. ಸುಶಾಂತ್​ನ ಹಲವು ಗೆಳೆಯರು ರಿಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ;ಪಾಲಕರೊಂದಿಗೆ ಮಾತನಾಡಲೂ ಸುಶಾಂತ್​ಗೆ ಬಿಡುತ್ತಿರಲಿಲ್ಲ; ರಿಯಾ ಬಂಡವಾಳ ಬಯಲು ಮಾಡಿದ ಆಪ್ತ ಗೆಳೆಯ..!
ಸುಶಾಂತ್​ ಜತೆಗಿದ್ದುಕೊಂಡು ಮೂರು ವರ್ಷ ಕೆಲಸ ಮಾಡಿದ್ದ ಅಂಕಿತ್​ ಆಚಾರ್ಯ ಕೂಡ ರಿಯಾ ಬಗ್ಗೆ ಹಲವು ಮಾಹಿತಿಯನ್ನು ಹೊರ ಹಾಕಿದ್ದಾನೆ. ಮೊದಲೆಲ್ಲ ನನ್ನನ್ನು ಬಿಗಿದಪ್ಪಿ ಮಾತನಾಡಿಸುತ್ತಿದ್ದ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಸುಶಾಂತ್​ ನಡವಳಿಕೆ ರಿಯಾಳ ಆಗಮನದಿಂದ ಭಾರಿ ಬದಲಾವಣೆಯಾಗಿತ್ತು ಎಂದು ಹೇಳಿದ್ದಾನೆ.
ಮೊದಲೆಲ್ಲ ಎದ್ದಾಗ ಚಂದ್ರನ ಬಗ್ಗೆ ಮಾತನಾಡುತ್ತಿದ್ದ, ಸ್ನೇಹಿತರ ಭೇಟಿಗಾಗಿ ಹೋಗುತ್ತಿದ್ದ. ಅವರೊಂದಿಗೆ ಪಾರ್ಟಿ ಮಾಡುತ್ತಿದ್ದ. ವರ್ಚುವಲ್​ ರಿಯಾಲಿಟಿ ಗೇಮ್​ ಆರಂಭಿಸುವ ಕನಸು ಹೊಂದಿದ್ದ. ಕೃಷಿಯಲ್ಲಿ ಆಸಕ್ತಿ ಹೊಂದಿ ಫಾರ್ಮ್​ಹೌಸ್​ ಮಾಡಿಕೊಂಡಿದ್ದ.
ಇದನ್ನೂ ಓದಿ;ಸುಶಾಂತ್​ ಸಿಂಗ್​ ಸಾವಿನಲ್ಲಿ ರಿಯಾ ಚಕ್ರವರ್ತಿಯೇ ಸುಪಾರಿ ಕಿಲ್ಲರ್​; ಸಿಡಿದೆದ್ದ ಬಿಹಾರ ಸಚಿವ
ಆರಂಭದಲ್ಲಿ ರಿಯಾಳ ಜತೆ ಸುಶಾಂತ್​ಗೆ ಅಂಥ ಬಾಂಧವ್ಯ ಇರಲಿಲ್ಲ. ಬಳಿಕ ಆಕೆ ಎಲ್ಲವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡಳು. ಆತನೆಷ್ಟು ತಿನ್ನಬೇಕು. ಯಾವಾಗ ತಿನ್ನಬೇಕು ಎಂಬುದನ್ನು ರಿಯಾ ನಿರ್ಧರಿಸುತ್ತಿದ್ದಳು ಎಂದು ಅಂಕಿತ್​ ಹೇಳಿದ್ದಾನೆ.
ಸಿಬ್ಬಂದಿ ಪೈಕಿ ಅಶೋಕ್​ ಮತ್ತು ನಾನು ಸುಶಾಂತ್​ಗೆ ಆತ್ಮೀಯರಾಗಿದ್ದೇವು. ಅಶೋಕ್​ನನ್ನು ಕೆಲಸದಿಂದ ತೆಗೆದಿದ್ದು ರಿಯಾ. ಏಕೆಂದರೆ ಎಲ್ಲವನ್ನೂ ಅವಳು ನೋಡಿಕೊಳ್ಳುತ್ತಿದ್ದಳು. ಆಕೆ ಸುಶಾಂತ್​ ಮೇಲೆ ಸಮ್ಮೋಹನದಂತೆ (ಹಿಪ್ನೋಟೈಸ್​​) ಆವರಿಸಿಕೊಂಡಿದ್ದಳು ಎಂದು ತಿಳಿಸಿದ್ದಾನೆ.
ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 20 =
Remember me
