ನವದೆಹಲಿ: ಕಳೆದ ತಿಂಗಳು ಇದೇ ದಿನ ಅಂದರೆ 14ನೆಯ ತಾರೀಖಿನಂದು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸ್ನೇಹಿತೆ ರಿಯಾ ಚಕ್ರವರ್ತಿ ಇದೀಗ ತಮ್ಮ ವಾಟ್ಸ್‌ಆ್ಯಪ್‌ನ ಡಿಪಿಯನ್ನು ಬದಲಾಯಿಸಿದ್ದಾರೆ.
ಸುಶಾಂತ್‌ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೆಲ ನಟರ ವಿರುದ್ಧ ದೂರು ದಾಖಲಾಗಿದ್ದು, ಆ ಪೈಕಿ ರಿಯಾ ಚಕ್ರವರ್ತಿ ಕೂಡ ಒಬ್ಬರು. ಇವರ ವಿರುದ್ಧದ ಕೇಸ್‌ ಇನ್ನೂ ಚಾಲ್ತಿಯಲ್ಲಿ ಇರುವಾಗಲೇ ತಮ್ಮ ಡಿಪಿ ಬದಲಾಯಿಸಿಕೊಂಡಿರುವ ರಿಯಾ, ಸುಶಾಂತ್‌ ಜತೆಗೆ ತಾವು ಸಂತೋಷದಿಂದ ಇದ್ದ ಘಳಿಗೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕರೊನಾ ಔಷಧವೆಂದು ಮದ್ಯ ಕೊಟ್ಟು ‘ದೇವಮಾನವ’ ಮಾಡುತ್ತಿದ್ದುದೇನು?
ರಿಯಾ ಮತ್ತು ಸುಶಾಂತ್ ಸ್ವಲ್ಪ ಸಮಯದಿಂದ ಒಟ್ಟಿಗೇ ಇದ್ದರು. ನಂತರ ರಿಯಾ ಚಕ್ರವರ್ತಿ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ತಮ್ಮ ವೃತ್ತಿ ಜೀವನದ ಸುರಕ್ಷತೆಗಾಗಿ ಹಾಗೂ ತಮ್ಮ ಕಾರ್ಯ ಸಾಧನೆಗಾಗಿ ಸುಶಾಂತ್ ಅವರನ್ನು ಆರ್ಥಿಕವಾಗಿ ಬಳಸಿಕೊಂಡು, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂಬ ಆರೋಪ ಈ ನಟಿಯ ಮೇಲಿದೆ.
ರಿಯಾ ಕೂಡ ಸುಶಾಂತ್‌ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸುಶಾಂತ್‌ ಮೃತಪಟ್ಟ ನಂತರ ಮೌನವಾಗಿಯೇ ಇದ್ದರು.
ಜೂನ್ 14 ರಂದು ಸುಶಾಂತ್ ಅವರ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಖಿನ್ನತೆಯಿಂದ ಬಳಲುತ್ತಿದ್ದು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ. ಈ ಖಿನ್ನತೆಗೆ ಅನೇಕ ನಟರ ಜತೆ ರಿಯಾ ಕೂಡ ಒಬ್ಬರು ಎಂಬ ಆರೋಪವಿದೆ. ಬಿಹಾರದ ಕೋರ್ಟ್‌ನಲ್ಲಿ ಇವರ ವಿರುದ್ಧ ವಿಚಾರಣೆ ನಡೆಯುತ್ತಿದೆ.
ರೌಡಿ ದುಬೆ ಎನ್‌ಕೌಂಟರ್‌ ತನಿಖೆ ಕುರಿತು ಹೈಕೋರ್ಟ್‌ ಹೇಳಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × five =
Remember me
