ನವದೆಹಲಿ:ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ (ಎನ್​​ಸಿಬಿ) ಎನ್​​​ಡಿಪಿಸಿ ಕಾಯ್ದೆಯಡಿ ರಿಯಾ ಚಕ್ರವರ್ತಿಯವರನ್ನು ನಿನ್ನೆ ಬಂಧಿಸಿದೆ.ಆದರೆ ಅವರನ್ನು ಬಂಧಿಸಿದ್ದು ಸರಿಯಲ್ಲ, ಇದೊಂದು ಹಾಸ್ಯಾಸ್ಪದ ಎನ್ನಿಸುವ ಬಂಧನ ಎಂದು ಕಾಂಗ್ರೆಸ್ ನಾಯಕ ಅಧೀರ್​ ರಂಜನ್​ ಚೌಧರಿ ಹೇಳಿದ್ದಾರೆ.
ರಿಯಾ ಅವರ ತಂದೆ ನಿವೃತ್ತ ಸೇನಾ ಅಧಿಕಾರಿ. ಈ ದೇಶಕ್ಕೆ ಸೇವೆ ಸಲ್ಲಿಸಿದವರು. ರಿಯಾ ಓರ್ವ ಬೆಂಗಾಳಿ ಬ್ರಾಹ್ಮಣ ಯುವತಿ. ಆಕೆಯ ತಂದೆಗೂ ಸಂವಿಧಾನದ ಮೂಲ ಸಿದ್ಧಾಂತವಾದ ನ್ಯಾಯವನ್ನು ಪಡೆಯುವ ಎಲ್ಲ ಹಕ್ಕೂ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸುಶಾಂತ್​ ಸಾವಿಗೆ ನ್ಯಾಯ ಬೇಕು ಎಂಬುದನ್ನು ಓರ್ವ ‘ಬಿಹಾರಿ’ಗೆ ನ್ಯಾಯ ಸಿಗಬೇಕು ಎಂಬರ್ಥದಲ್ಲಿ ವ್ಯಾಖ್ಯಾನ ಮಾಡಬಾರದು. ನ್ಯಾಯವೆಂಬುದು ಪ್ರತಿಯೊಬ್ಬರಿಗೂ ಸಿಗಬೇಕು ಎಂದಿದ್ದಾರೆ.ಮಾಧ್ಯಮಗಳು ಈ ಪರಿ ಮೂಗು ತೂರಿಸಿ, ವಿಚಾರಣೆ ಮಾಡುತ್ತಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಅಪಶಕುನವಾಗಿದೆ. ಇದು ಎಳ್ಳಷ್ಟೂ ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.ಇದನ್ನೂ ಓದಿ:ಮುಂದುವರಿದ ಕರೊನಾ ಅಬ್ಬರ; ಸೋಂಕಿನಿಂದ ಮೃತರಾದ ಸಿಪಿಐ
ಸುಶಾಂತ್ ಸಿಂಗ್​ ರಜಪೂತ್​ ಭಾರತದ ನಟ. ಆದರೆ ಬಿಜೆಪಿ ಅವರನ್ನು ಬಿಹಾರದ ನಟ ಎಂದು ಬಿಂಬಿಸುತ್ತಿದೆ. ಇದೆಲ್ಲ ಚುನಾವಣೆ ದೃಷ್ಟಿಯಿಂದ ಮಾಡಲಾಗುತ್ತಿರುವ ಗಿಮಿಕ್​ ಎಂದು ಆರೋಪಿಸಿದರು. ರಿಯಾ ಚಕ್ರವರ್ತಿಯನ್ನು ಆತ್ಮಹತ್ಯೆಗೆ ಪ್ರಚೋದನೆ, ಕೊಲೆ ಅಥವಾ ಆರ್ಥಿಕ ಅಪರಾಧದ ಕಾಯ್ದೆಯಡಿ ಬಂಧಿಸಿದೆ ಎನ್​ಡಿಪಿಎಸ್​ ಆ್ಯಕ್ಟ್​​ನಡಿ ಅರೆಸ್ಟ್​ ಮಾಡಿದ್ದು ತೀರ ಹಾಸ್ಯಾಸ್ಪದ. ಕೇಂದ್ರ ತನಿಖಾ ದಳಗಳು ಕೆಲವು ರಾಜಕೀಯ ಮುಖಂಡರನ್ನು ಓಲೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಇಂದಿಗೂ ಸುಶಾಂತ್​​ರದ್ದು ಹತ್ಯೆಯೋ, ಆತ್ಮಹತ್ಯೆಯೋ..ಹತ್ಯೆಯಾದರೆ ಅದನ್ನು ಮಾಡಿದವರು ಯಾರು ಎಂಬುದನ್ನು ಪತ್ತೆ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.
ಸದ್ಯ ರಿಯಾ ಅವರು ಮುಂಬೈನ ಬೈಕುಲ್ಲಾ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಅವರ ಜಾಮೀನು ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದೆ. (ಏಜೆನ್ಸೀಸ್​)
ಟಿ-ಶರ್ಟ್​ ಮೇಲೆ ಮುದ್ರಿಸಿದ ಒಂದು ‘ಸ್ಲೋಗನ್’​​ನಿಂದ ಹೈರಾಣಾಗುತ್ತಿರುವ ಯುವ ಉದ್ಯಮಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 2 =
Remember me
