ಪಟನಾ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣವೀಗ ಇನ್ನಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಕೇಸ್​ನೊಂದಿಗೆ ರಾಜಕೀಯ ಕೂಡ ಅಷ್ಟೇ ಜೋರಾಗಿಯೇ ತಳಕು ಹಾಕಿಕೊಂಡಿದೆ.
ಬಿಹಾರದ ಜೆಡಿಯು ನಾಯಕ ಹಾಗೂ ಸಚಿವ ಮಹೇಶ್ವರಿ ಹಜಾರಿ ಭಾರಿ ಹೇಳಿಕೆ ನೀಡುವುದರೊಂದಿಗೆ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಹರಿಹಾಯ್ದಿದ್ದಾರೆ.ರಿಯಾ ಚಕ್ರವರ್ತಿ ವಿಷಕನ್ಯೆಯಿದ್ದಂತೆ. ಆಕೆ ಸುಪಾರಿ ಕಿಲ್ಲರ್ ರೀತಿಯಲ್ಲಿ ಕೆಲಸ ಮಾಡಿದ್ದಾಳೆ. ಸುಶಾಂತ್​ನನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ತನ್ನ ಕಾರ್ಯ ಸಾಧಿಸಿದ್ದಾಳೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ;ಕಳೆದೊಂದು ವರ್ಷದಿಂದ ಸುಶಾಂತ್​ ಸಿಂಗ್​ ರಜಪೂತ್​ಗೆ ಯಾವುದೋ ಚಿಂತೆ ಕಾಡುತ್ತಿತ್ತು…
ದೇಶದ ಮೂಲೆಮೂಲೆಗಳಿಂದ ಪ್ರತಿಭಾವಂತರು ಚಲನಚಿತ್ರ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಬಯಸುತ್ತಾರೆ. ಆದರೆ, ಅವರ ವಿರುದ್ಧ ಕೆಲಸ ಮಾಡುವ ಬಹುದೊಡ್ಡ ಗ್ಯಾಂಗ್​ ಕೂಡ ಅಲ್ಲಿದೆ. ಭಾರಿ ಷಡ್ಯಂತ್ರವನ್ನು ನಡೆಸಿಯೇ ರಿಯಾಳನ್ನು ಸುಶಾಂತ್​ ಬಳಿಗೆ ಕಳುಹಿಸಲಾಗಿತ್ತು ಎಂದು ಅವರು ದೂರಿದ್ದಾರೆ.
ಸರ್ಕಾರ ಸುಶಾಂತ್​ ಕುಟುಂಬದವರು, ಆತನ ಅಭಿಮಾನಿಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿದೆ ಎಂದು ಹೇಳಿರುವ ಹಜಾರಿ, ಪ್ರಕರಣದ ಸಿಬಿಐ ತನಿಖೆ ನಡೆಸಬೇಕು ಎಂಬುದನ್ನು ಬೆಂಬಲಿಸುತ್ತೇನೆ. ತನಿಖೆ ನಡೆಸಿದ್ದೇ ಆದಲ್ಲಿ, ತಾನು ಹೇಳಿರುವ ಸತ್ಯವೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ;ಸುಶಾಂತ್​ ಸಿಂಗ್​ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದ ರಿಯಾ ಚಕ್ರವರ್ತಿ
ಈ ನಡುವೆ ರಿಯಾ ಚಕ್ರವರ್ತಿಯ ಇಡೀ ಕುಟುಂಬದ ವಿರುದ್ಧವೇ ಸುಶಾಂತ್​ ಸಿಂಗ್​ ತಂದೆ ಕೆ.ಕೆ. ಸಿಂಗ್​ ದೂರು ನೀಡಿದ್ದಾರೆ. ರಿಯಾ ತಂದೆ ಇಂದ್ರಜಿತ್​ ಚಕ್ರವರ್ತಿ, ತಾಯಿ ಸಂಧ್ಯಾ, ಸಹೋದರ ಶೋವಿಕ್​ ಚಕ್ರವರ್ತಿ ಹಾಗೂ ಶ್ರುತಿ ಮೋದಿ ವಿರುದ್ಧ ದೂರು ನೀಡಿದ್ದಾರೆ.
ಸುಶಾಂತ್​ನನ್ನು ಆರ್ಥಿಕವಾಗಿ ರಿಯಾ ದಿವಾಳಿ ಮಾಡಿದ್ದಳು. ಆಕೆಯ ಇಡೀ ಕುಟುಂಬವೇ ಇದರಲ್ಲಿ ಭಾಗಿಯಾಗಿತ್ತು ಎಂದು ಕೆ.ಕೆ. ಸಿಂಗ್​ ದೂರಿದ್ದಾರೆ.
ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + ten =
Remember me
