ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದಲ್ಲಿ ಗೆಳತಿ ರಿಯಾ ಚಕ್ರವರ್ತಿಗೆ ಸಿಬಿಐ ಜತೆಗೆ ಜಾರಿ ನಿರ್ದೇಶನಾಲಯ (ಎನ್​ಫೋರ್ಸ್​ಮೆಂಟ್​ ಡೈರೆಕ್ಟರೇಟ್​- ಇ.ಡಿ. ) ಉರುಳು ಕೂಡ ಸುತ್ತಿಕೊಂಡಿದೆ.
ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿ ಸಲ್ಲಿಸಿದ್ದ ಮನವಿಗೆ ಪುರಸ್ಕಾರ ದೊರೆಯದ ಕಾರಣ ರಿಯಾ ಶುಕ್ರವಾರ ಇ.ಡಿ. ಕಚೇರಿಗೆ ಹಾಜರಾದರು. ಆಗ ಅವರು ಆಗಮಿಸಿದ್ದು, ಯಾರ ಕಾರಿನಲ್ಲಿ ಎಂಬುದು ಕುತೂಹಲ ಕೆರಳಿಸಿತ್ತು.
ಇದನ್ನೂ ಓದಿ;ಅಮೆರಿಕದ ಕಂಪನಿಗಿಂತ ಹತ್ತು ಪಟ್ಟು ಕಡಿಮೆ ಬೆಲೆಗೆ ಕರೊನಾ ಲಸಿಕೆ ನೀಡಲಿದೆ ಭಾರತೀಯ ಸಂಸ್ಥೆ
ತನಿಖೆ ಬಳಿಕ ಗೊತ್ತಾಗಿದ್ದೇನೆಂದರೆ, ಹೋಟೆಲ್​ ಉದ್ಯಮಿ ಸುವೇದ್​ ಎಂಬುವರಿಗೆ ಫೋರ್ಡ್​ ಎಂಡಿವರ್​ ಕಾರಾಗಿತ್ತು. ಈತ ಸುಶಾಂತ್​ ಜತೆಯಲ್ಲಿ ಚಿತ್ರವೊಂದರಲ್ಲಿ ನಟಿಸಿದ್ದ. ಬಾಲಿವುಡ್​ನ ಹಲವು ಕಲಾವಿದರೊಂದಿಗೆ ಗೆಳೆತನ ಹೊಂದಿದ್ದಾನೆ.
ಇ.ಡಿ ವಿಚಾರಣೆಯಲ್ಲಿ ಮುಖ್ಯವಾಗಿ ರಿಯಾ ಚಕ್ರವರ್ತಿ ಮುಂಬೈನಲ್ಲಿ ಖರೀದಿಸಿದ ಎರಡು ಐಷಾರಾಮಿ ಫ್ಲ್ಯಾಟ್​ಗಳ ಬಗ್ಗೆ ಮಾಹಿತ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ. ಈ ಪೈಕಿ ಒಂದು ಫ್ಲ್ಯಾಟ್​ ಮುಂಬೈನ ಖಾರ್​ ಪ್ರದೇಶದಲ್ಲಿದೆ ಎಂದು ಹೇಳಲಾಗಿದೆ. ಫ್ಲ್ಯಾಟ್​ ಖರೀದಿಸಲು ಈಕೆ ಸುಶಾಂತ್​ನಿಮದ ಹಣ ಪಡೆದಿದ್ದಳೇ ಎಂಬುದು ಗೊತ್ತಾಗಬೇಕಿದೆ.
ಇದನ್ನೂ ಓದಿ;ಎರಡು ಮದುವೆಗಳಿಂದ 1.5 ಕೋಟಿ ರೂ. ಕಮಾಯಿ; ಮೂರನೇ ಮದುವೆಯಾಗಿ ವಿದೇಶಕ್ಕೆ ಹಾರಬೇಕಿದ್ದ ವಧುವಿಗೆ ಕೈಕೊಟ್ಟಿದ್ದೇನು?
ಇದಲ್ಲದೇ. ತನ್ನ ಬ್ಯಾಂಕ್​ ಖಾತೆ ಹಾಗೂ ಹಣಕಾಸಿನ ವಹಿವಾಟಿನ ಬಗ್ಗೆಯೂ ಕೂಡ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಬೇಕಿದೆ. ಸುಶಾಂತ್​ ಸಿಂಗ್​ಗೆ ಸೇರಿದ 15 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾಳೆ ಎಂದು ಸುಶಾಂತ್​ ತಂದೆ ಕೆ.ಕೆ. ಸಿಂಗ್​ ಆರೋಪ ಮಾಡಿ ರಿಯಾ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಕಾರಣಕ್ಕೆ ಇಡಿ ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
