ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಒತ್ತಡ ಕೇಳಿ ಬಂದರೂ ಸದ್ಯ ಮುಂಬೈ ಪೊಲೀಸರೇ ತನಿಖೆ ಮುಂದುವರಿಸಿದ್ದಾರೆ.
ಶನಿವಾರವಷ್ಟೇ ಆದಿತ್ಯ ಚೋಪ್ರಾ ಮುಂಬೈನ ವರ್ಸೋವಾ ಠಾಣೆಗೆ ಹಾಜರಾದ ಆದಿತ್ಯ ಚೋಪ್ರಾ ಹೇಳಿಕೆ ದಾಖಲಿಸಿದ್ದಾರೆ. ಮುಂದಿನ ಸರದಿ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿಯದ್ದು ಎಂದು ಹೇಳಲಾಗಿದೆ.
ಈಗಾಗಲೇ ರಿಯಾ ಮುಂಬೈ ಪೊಲೀಸರೆದುರು ಒಮ್ಮೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಮತ್ತೊಂದು ವಿಚಾರಣೆ ನಡೆಸಲು ಕಾರಣವಾಗಿರುವುದು ಒಂದು ಸ್ಫೋಟಕ ಮಾಹಿತಿ.
ಇದನ್ನೂ ಓದಿ;ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್​ ಸಿಂಗ್​; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ
ಸುಶಾಂತ್​ ಖಾತೆಯಲ್ಲಿದ್ದ ಹಣವನ್ನೇ ರಿಯಾ ಚಕ್ರವರ್ತಿ ಕಳೆದ 11 ತಿಂಗಳಿನಿಂದ ಖರ್ಚು ಮಾಡುತ್ತಿದ್ದಳು…! ಇದರ ತನಿಖೆಗಾಗಿ ರಿಯಾಳನ್ನು ಮತ್ತೊಮ್ಮೆ ವಿಚಾರಣೆಗಾಗಿ ಕರೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಯುರೋಪ್​ಗೆ ಜಾಹೀರಾತೊಂದರ ಶೂಟಿಂಗ್​ಗಾಗಿ ತೆರಳಿದ್ದಾಗ ಅದರ ವೆಚ್ಚವನ್ನು ಸುಶಾಂತ್​ ತನ್ನ ಖಾತೆಯಿಂದಲೇ ಭರಿಸಿದ್ದ ಎನ್ನಲಾಗಿದೆ. ಸುಶಾಂತ್​ ಸಾವಿನ ನಂತರ ಖಾತೆಗಳಲ್ಲಿದ್ದ ಹಣವೆಷ್ಟು ಅದನ್ನು ಬಳಸಿದ್ಯಾರು? ಯಾರನ್ನು ನಾಮಿನಿ ಮಾಡಿದ್ದ ಎಂಬೆಲ್ಲ ವಿಚಾರಗಳು ಕೂಡ ತನಿಖೆಗೊಳಪಟ್ಟಿವೆ.
ಇದನ್ನೂ ಓದಿ;ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?
ಖಿನ್ನತೆಯಿಂದ ಬಳಲುತ್ತಿದ್ದ ಸುಶಾಂತ್​ ಈ ಹಿಂದೆ ಕೌನ್ಸೆಲ್ಲಿಂಗ್​ಗೆ ಹಾಜರಾಗಿದ್ದ. ಆವಾಗಲೂ ರಿಯಾ ಆತನ ಜತೆಗಿದ್ದಳು ಎನ್ನಲಾಗಿದೆ. ಹೀಗಾಗಿ ತನಿಖೆಯ ಜಾಡು ಆರ್ಥಿಕ ಕಾರಣಗಳತ್ತ ತಿರುಗುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.
ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
