ಬೆಂಗಳೂರು:ಈ ಚೋಂಬು ಭೂಮಿಯ ಒಳಗೆ ಸಿಕ್ಕಿದ್ದು, ಇದಕ್ಕೆ ಸಿಡಿಲು ಬಡಿದು ಅದ್ಭುತ ಶಕ್ತಿಯಿದೆ. ಇದನ್ನು ಮನೆಯಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ, ಉದ್ಯಮದಲ್ಲಿ ಭಾರಿ ಲಾಭ ಆಗಲಿದೆ… ಇಂತಹ ಪವರ್​ಫುಲ್​ ಚೊಂಬಿನ ಬೆಲೆ ಬರೋಬ್ಬರಿ 50 ಲಕ್ಷ ರೂಪಾಯಿ… ಎನ್ನುತ್ತಿದ್ದವರ ಬೆನ್ನುಬಿದ್ದ ಪೊಲೀಸರು ಎರಡು ಚೊಂಬುಗಳ ಸಮೇತ ಅದರ ಮಾಲೀಕರನ್ನು ಅರೆಸ್ಟ್​ ಮಾಡಿದ್ದಾರೆ.
ಜ.21ರ ಸಂಜೆ 4 ಗಂಟೆಗೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯ ಎಎಸ್​ಐ ಪುಟ್ಟಸ್ವಾಮಿ ಗಸ್ತಿನಲ್ಲಿದ್ದಾಗ ಕತ್ರಿಗುಪ್ಪೆ ಬಿಗ್​ಬಜಾರ್ ಬಳಿ ಐವರು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ಸಿಕ್ಕಿತ್ತು. ಕೂಡಲೇ ಪುಟ್ಟಸ್ವಾಮಿ ನೇತೃತ್ವದ ತಂಡ ಬಿಗ್​ಬಜಾರ್ ಬಳಿ ಹೋದಾಗ ಐವರು ವ್ಯಕ್ತಿಗಳು ಬ್ಯಾಗ್​ವೊಂದರಲ್ಲಿ ಅನುಮಾನಾಸ್ಪದ ವಸ್ತು ಇಟ್ಟುಕೊಂಡು ತಿರುಗಾಡುತ್ತಿದ್ದರು. ಆರೋಪಿಗಳನ್ನು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದರು. ಬಜಾರ್​ಗೆ ಬರುವ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವವರು ಇರಬಹುದು ಎಂದು ಭಾವಿಸಿ ಪೊಲೀಸರು ತಮಿಳುನಾಡಿನ ತಿರುವಣ್ಣಾಮಲೈ ನಿವಾಸಿ ಅರುಳ್ ಕಾಂತ್ (45), ಚಂದ್ರಶೇಖರ್ (35), ಮಸ್ತಾನ್(40), ದಯಾಳ್ (39), ಡೇನಿಯಲ್ ಮೋಸಸ್ (40) ಎಂಬುವವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು. ಆಗ ಗೊತ್ತಾಯ್ತು ಚೊಂಬಿನ ರಹಸ್ಯ!
ಆರೋಪಿ ಅರುಳ್ ಕಾಂತ್ ಕೈಯಲ್ಲಿದ್ದ ಬ್ಯಾಗ್​ನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ದೊಡ್ಡದಾದ ಮತ್ತು ಚಿಕ್ಕದಾದ 2 ತಾಮ್ರದ ಚೊಂಬುಗಳು ಇದ್ದವು. ಈ ಬಗ್ಗೆ ವಿಚಾರಿಸಿದಾಗ, ‘ನಾವು ತಮಿಳುನಾಡಿನಿಂದ ಬಂದಿದ್ದು, ಈ ಚೋಂಬು ಭೂಮಿಯ ಒಳಗೆ ಸಿಕ್ಕಿದ್ದವು. ಇದಕ್ಕೆ ಸಿಡಿಲು ಬಡಿದು ಅದ್ಭುತ ಶಕ್ತಿಯಿದೆ. ಈ ಚೊಂಬುಗಳನ್ನು ಮನೆಯಲ್ಲಿಟ್ಟರೆ ಒಳ್ಳೆಯದಾಗುತ್ತದೆ. ನಿಮ್ಮ ಉದ್ಯಮದಲ್ಲಿ ಭಾರಿ ಲಾಭ ಕಾಣಬಹುದು ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಲು ಬಂದಿದ್ದೆವು. ನಮ್ಮನ್ನು ಕೆಲ ದಿನಗಳ ಹಿಂದೆ ಸಂರ್ಪಸಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬ ಈ ಚೊಂಬನ್ನು 50 ಲಕ್ಷ ರೂ.ಗೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಬೆಂಗಳೂರಿಗೆ ತರುವಂತೆ ಸೂಚಿಸಿದ್ದ. ಹೀಗಾಗಿ ಆತ ನೀಡಿದ ವಿಳಾಸಕ್ಕೆ ಬಂದು ಆತನಿಗಾಗಿ ಕಾಯುತ್ತಿದ್ದೆವು. ಆದರೆ, ಆತ ಬಾರದೇ ಮೋಸ ಮಾಡಿದ್ದಾನೆ’ ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಒಂದು ವೇಳೆ ಪೊಲೀಸರು ಬಂಧಿತರನ್ನು ವಿಚಾರಿಸದಿದ್ದರೆ ತಲೆಮರೆಸಿಕೊಂಡಿರುವ ಆರೋಪಿ ಮೂಲಕ ರೈಸ್​ಪುಲ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರನ್ನು ನಂಬಿಸಿ 50 ಲಕ್ಷ ರೂ.ಗೆ ತಾಮ್ರದ ಚೊಂಬು ಮಾರಾಟ ಮಾಡಿ ವಂಚನೆ ಎಸಗುತ್ತಿದ್ದರು. ಅಷ್ಟರಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ಕಿಂಗ್​ಪಿನ್ ಬೆಂಗಳೂರು ಮೂಲದವನಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
