ನವದೆಹಲಿ:ಕರೊನಾ ಲಸಿಕೆ ಸಂಶೋಧನೆ ಪರಿಣಾಮಕಾರಿಯಾಗುವ ಭರವಸೆ ಮೂಡಿಸಿದೆ. ತೀವ್ರ ವೇಗದಲ್ಲಿ ಲಸಿಕೆ ಅಭಿವೃದ್ಧಿ ಕಾರ್ಯವನ್ನು ನಡೆಸಲಾಗುತ್ತಿದೆ. ಆದರೆ, ಅಷ್ಟೇ ವೇಗದಲ್ಲಿ ಅದರ ಖರೀದಿಯೂ ಅರ್ಥಾತ್​ ಮುಂಗಡ ಬುಕಿಂಗ್​ ಕೂಡ ಆಗುತ್ತಿದೆ.
ಹೌದು… ಶ್ರೀಮಂತ ದೇಶಗಳು ಭರವಸೆ ಮೂಡಿಸಿರುವ ಅಥವಾ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಿಗೆ ಭಾರಿ ಪ್ರಮಾಣದಲ್ಲಿ ಹಣ ನೀಡಿ, ಲಸಿಕೆ ಯಶಸ್ವಿಯಾದಲ್ಲಿ ಮೊದಲು ತಮಗೆ ನೀಡಬೇಕೆಂದು ಒಪ್ಪಂದ ಮಾಡಿಕೊಂಡಿವೆ.
ಅಂತೆಯೇ, ಉತ್ಪಾದನೆಗೂ ಮುನ್ನವೇ ಈವರೆಗೆ 100 ಕೋಟಿಗೂ ಹೆಚ್ಚು ಡೋಸ್​ ಲಸಿಕೆ ಖರೀದಿಯಾಗಿದೆ. ಜತೆಗೆ, ಇನ್ನಷ್ಟು ಖರೀದಿಸಲು ಬಯಸಿದಲ್ಲಿ ಅದನ್ನು ಕೂಡ ಪೂರೈಸಬೇಕು ಎಂದು ಷರತ್ತನ್ನು ಈ ಕಂಪನಿಗಳಿಗೆ ವಿಧಿಸಲಾಗಿದೆ. ಸಹಜವಾಗಿಯೇ ಇದು ಬಡ ರಾಷ್ಟ್ರಗಳ ಹಾಗೂ ಲಸಿಕೆಯ ಸಮಾನ ಹಂಚಿಕೆ ಬಗ್ಗೆ ಕಳವಳಗಳನ್ನು ಮೂಡಿಸಿದೆ.
ಇದನ್ನೂ ಓದಿ;ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್​-ವ್ಯಾಲ್ಯೂ ಲೆಕ್ಕಾಚಾರ…?
ಅಮೆರಿಕ ಈಗಾಗಲೇ ಮಾಡೆರ್ನಾ ಕಂಪನಿಗೆ ಎಲ್ಲ ರೀತಿಯ ಹಣಕಾಸು ನೆರವು ನೀಡಿದೆಯಲ್ಲದೇ, ಕ್ಲಿನಿಕಲ್​ ಟ್ರಯಲ್​ಗೂ ಸಹಕಾರ ನಿಡಿದೆ. ಅಕ್ಷರಶಃ ಈ ಕಂಪನಿಯ ಎಲ್ಲ ಲಸಿಕೆ ಅಮೆರಿಕ ಪಾಲಾಗಲಿದೆ. ಇದಲ್ಲದೇ,. ಸ್ಯಾನೋಫಿ, ಗ್ಲಾಕ್ಸೋ ಸ್ಮಿತ್​ಕ್ಲೈನ್​ಗೂ ನೂರಾರು ಕೋಟಿ ಡಾಲರ್​ ನೀಡಿದೆ. ಇಂಗ್ಲೆಂಡ್​ ಕೂಡ ಈ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇನ್ನೊಂದೆಡೆ ಜಪಾನ್​ ಕೂಡ ಫೈಝರ್​ ಕಂಪನಿ ಜತೆ ಖರೀದಿ ಒಪ್ಪಂದ ಮಾಡಿಕೊಂಡಿದೆ.
ಅಮೆರಿಕ, ಬ್ರಿಟನ್​ ಹಾಗೂ ಯುರೋಪ್​ ರಾಷ್ಟ್ರಗಳು ಹಾಗೂ ಜಪಾನ್​ ದೇಶಗಳು 130 ಕೋಟಿ ಡೋಸ್​ ಲಸಿಕೆ ಖರೀದಿಗೆ ಹಣ ನೀಡಿವೆ. ಇದಷ್ಟೇ ಅಲ್ಲ, ಇನ್ನೂ 150 ಕೋಟಿ ಡೋಸ್​ ಖರೀದಿಗೆ ಅವಕಾಶವನ್ನು ಮಾಡಿಕೊಳ್ಳಲಾಗಿದೆ ಎಂದು ಲಂಡನ್​ ಮೂಲದ ಏರ್​ಫಿನಿಟಿ ಸಂಸ್ಥೆ ಮಾಹಿತಿ ನೀಡಿದೆ.
ಸಂಶೋಧನೆಗಳು ಯಶಸ್ವಿಯಾಗುವ ಭರವಸೆ ಮೂಡಿಸಿದ್ದರೂ, ಇಡೀ ಜಗತ್ತಿಗೆ ಬೇಕಾಗುವಷ್ಟು ಲಸಿಕೆಗಳಿಲ್ಲ. ಬಹಳಷ್ಟು ಲಸಿಕೆಗಳನ್ನು ಎರಡೆರಡು ಡೋಸ್​ ನೀಡಬೇಕಾಗುತ್ತದೆ ಎಂದು ಏರ್​ಫಿನಿಟಿ ಸಂಸ್ಥೆಯ ಸಿಇಒ ರಾಸ್ಮಸ್​ ಬೆಕ್​ ಹ್ಯಾನ್​ಸೆನ್​ ಹೇಳುತ್ತಾರೆ.ಲಸಿಕೆಗಳು ಯಶಸ್ವಿಯಾಗಿ, ಎಲ್ಲ ಅಡೆತಡೆಗಳನ್ನು ದಾಟಿ 100 ಕೋಟಿ ಡೋಸ್ ಉತ್ಪಾದನೆ 2022ರ ಮೊದಲ ತ್ರೈಮಾಸಿಕಕ್ಕೂ ಮುನ್ನ ಸಾಧ್ಯವಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ.
ಇದನ್ನೂ ಓದಿ;ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ
ಇನ್ನೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್​ ಅಲೈಯನ್ಸ್​ ಫಾರ್​ ವಾಕ್ಸಿನ್​ ಆ್ಯಂಡ್​ ಇಮ್ಯೂನೈಜೇಷನ್​ (ಜಿಎವಿಐ) ಸಂಸ್ಥೆಗಳು ಲಸಿಕೆ ಸಮಾನವಾಗಿ ಹಂಚಿಕೆಯಾಗಬೇಕು ಹಾಗೂ ಎಲ್ಲರಿಗೂ ದೊರೆಯಬೇಕು ಎಂಬ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. 2021ರ ಅಂತ್ಯಕ್ಕೆ 1800 ಕೋಟಿ ಡಾಲರ್​ ಮೊತ್ತದಲ್ಲಿ 200 ಕೋಟಿ ಡೋಸ್​ ಲಸಿಕೆ ಪಡೆಯುವ ಯೋಜನೆ ರೂಪಿಸಿವೆ. ಭಾರತವೂ ಈ ಅಭಿಯಾನಕ್ಕೆ ಆರ್ಥಿಕ ನೆರವು ನೀಡಿದೆ. ಆದರೆ, ಕಾರ್ಪೋರೇಟ್​ ಮತ್ತು ಬಲಾಢ್ಯ ಆರ್ಥಿಕ ಶಕ್ತಿಗಳು ಇದಕ್ಕೆ ಮಣಿಯುತ್ತವೆಯೇ ಎಂಬುದು ಕೂಡ ಬಿಲಿಯನ್​ ಡಾಲರ್​ಪ್ರಶ್ನೆ.
ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 3 =
Remember me
