ನವದೆಹಲಿ:ಕರೊನಾ ಮಹಾಮಾರಿ ಉದ್ಯಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೂ, ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಗೆ ಮಾತ್ರ ಹೆಚ್ಚಿನ ಆರ್ಥಿಕ ಸಮಸ್ಯೆ ಉಂಟು ಮಾಡಿಲ್ಲ. ಏಕೆಂದರೆ, ಏಷ್ಯಾದ ಎರಡನೇ ಅತಿ ಶ್ರೀಮಂತ ಕುಟುಂಬಕ್ಕಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಅಂಬಾನಿ ಕುಟುಂಬ, ಏಷ್ಯಾದ ಅತಿ ಶ್ರೀಮಂತ ಕುಟುಂಬ ಎಂಬ ಖ್ಯಾತಿಯನ್ನು ಮುಂದುವರಿಸುವಲ್ಲೂ ಯಶಸ್ವಿಯಾಗಿದೆ.
ಬ್ಲೂಮ್​ಗ್ ಸಂಸ್ಥೆ ಪ್ರಕಟಿಸಿದ ಏಷ್ಯಾದ ಅತಿ ಶ್ರೀಮಂತರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಈ ಮಾಹಿತಿ ನೀಡಲಾಗಿದೆ. ವರ್ಷಾರಂಭದಲ್ಲಿ ಜಿಯೋ ದೂರವಾಣಿ ಸಂಸ್ಥೆ ಮೇಲೆ ಬಂಡವಾಳ ಹೆಚ್ಚಿಸಿದ ಮುಕೇಶ್, ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್​ಆರ್​ವಿಎಲ್) ಮೇಲೂ ಹೂಡಿಕೆ ಅಧಿಕಗೊಳಿಸಿದರು. ಹಲವು ಪ್ರಮುಖ ಖಾಸಗಿ ಈಕ್ವಿಟಿ ಫಂಡ್ ಮತ್ತು ತಂತ್ರಜ್ಞಾನ ಕಂಪನಿಗಳು ಮುಕೇಶ್ರ ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದು ಅವರ ಉದ್ಯಮ ವಿಸ್ತರಣೆ ಯೋಜನೆಗೆ ಸಹಕಾರಿಯಾಗಿ ಅವರ ಆಸ್ತಿ ಮೌಲ್ಯ ವೃದ್ಧಿಸಲು ಕಾರಣವಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
