ನವದೆಹಲಿ:ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಅಂಪೈರ್​ಗಳಾಗಿ ಯಾರು ಕಾರ್ಯ ನಿರ್ವಹಿಸಲಿದ್ದಾರೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಲ್ಲಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಿಚರ್ಡ್ ಕೆಟಲ್‌ಬರೋ 2023ರ ವಿಶ್ವಕಪ್​ ಫೈನಲ್​ ಆಲ್​ ಫೀಲ್ಡ್​ ಅಂಪೈರ್​ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ವೀಟ್​ ಮಾಡಿ ತಿಳಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇಂದು (ಶುಕ್ರವಾರ) ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಿಚರ್ಡ್‌ ಕೆಟಲ್‌ಬರೋ ಅವರನ್ನು ಆನ್ – ಫೀಲ್ಡ್ ಅಂಪೈರ್‌ಗಳು ಎಂದು ಹೆಸರಿಸಿದೆ. ಇತರ ಜೋಯಲ್ ವಿಲ್ಸನ್ ಅವರು ಮೂರನೇ ಅಂಪೈರ್, ನಾಲ್ಕನೇ ಅಂಪೈರ್ ಕ್ರಿಸ್ ಗಫಾನಿ ಮತ್ತು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಇರುತ್ತಾರೆ. ಇವರೆಲ್ಲರೂ ಸೆಮಿಫೈನಲ್‌ನಲ್ಲಿ ಅಫಿಶಿಂಗ್ ತಂಡಗಳ ಭಾಗವಾಗಿದ್ದರು.
Umpires for the World Cup final:
On field umpires: Richard Kettleborough, Richard Illingworth.
Third umpire: Joel Wilson.
Match Referee: Andy Pycroft.pic.twitter.com/1pxhVKqVak
— Johns. (@CricCrazyJohns)November 17, 2023

“ಕೆಟಲ್‌ಬರೋ ಅವರಿಗೆ ಇದು ಎರಡನೇ ವಿಶ್ವಕಪ್ ಫೈನಲ್ ಪಂದ್ಯವಾಗಿದೆ. 2015ರ ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ರಿಚರ್ಡ್‌ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಇಲ್ಲಿಂಗ್‌ವರ್ತ್‌ಗೆ ಇದು ಎರಡನೇ ವಿಶ್ವಕಪ್ ಪಂದ್ಯವಾಗಿದ್ದು, ಮೊದಲ ಬಾರಿಗೆ ಫೈನಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ” ಎಂದು ಐಸಿಸಿ ಹೇಳಿದೆ.
ಈ ಹೈವೋಲ್ವೇಜ್ ಫೈನಲ್ ಪಂದ್ಯ 13,000 ಜನ ಪ್ರೇಕ್ಷಕರ ಸಮ್ಮುಖದಲ್ಲಿ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಅಂತಿಮ ಹಣಾಹಣಿಗೆ ಸಜ್ಜಾಗಿದೆ. ವಿಶ್ವಕಪ್ ಫೈನಲ್‌ಗೂ ಮುನ್ನ ನಾನಾ ಕಾರ್ಯಕ್ರಮಗಳು ನಡೆಯಲಿದ್ದು, ವಿಜೃಂಭಣೆಯಿಂದ ತೆರೆಕಾಣಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
IND vs AUS: ಪಂದ್ಯಕ್ಕೂ ಮುನ್ನ ಪಿಚ್ ಬಗ್ಗೆ ತೀವ್ರ ಚರ್ಚೆ, ಫೈನಲ್‌ನಲ್ಲಿ ‘ಗೂಗ್ಲಿ’ ಎಸೆಯಲು ಟೀಂ ಇಂಡಿಯಾ ಸಿದ್ಧತೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + 12 =
Remember me
