ಬೆಂಗಳೂರು:ಲಾಸ್ ಏಂಜಲೀಸ್​ನಲ್ಲಿ ನಡೆದ 65ನೇ ಗ್ರ್ಯಾಮಿ ಅವಾರ್ಡ್​ನಲ್ಲಿ ಬೆಂಗಳೂರು ಮೂಲದ ಸಂಗೀತ ಸಂಯೋಜಕ ರಿಕ್ಕಿ ಕೇಜ್ (Ricky Kej) ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ರಿಕ್ಕಿ ಕೇಜ್ ಮೂರನೇ ಬಾರಿಗೆ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದು, ಇದೀಗ ಎಲ್ಲಡೆಯಿಂದ ಅವರಿಗೆ ಶುಭಾಶಯಗಳು ಬರುತ್ತಿವೆ.
ಕಳೆದ ವರ್ಷದ ನವೆಂಬರ್​ನಲ್ಲಿ ರಿಕ್ಕಿ ಕೇಜ್ ಅವರ ಡಿವೈನ್ ಟೈಡ್ಸ್ ಒಂಭತ್ತು-ಹಾಡುಗಳ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿತ್ತು. ಈ ವೇಳೆ ಸಂತಸ ಹಂಚಿಕೊಂಡಿದ್ದ ರಿಕ್ಕಿ ಕೇಜ್, ಮೂರನೇ ಬಾರಿಯೂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ರೋಮಾಂಚನವಾಗುತ್ತಿದೆ ಎಂದು ಹೇಳಿಕೊಂಡಿದ್ದರು.
Just won my 3rd Grammy Award. Extremely grateful, am speechless! I dedicate this Award to India.@copelandmusicHerbert Waltl Eric Schilling Vanil Veigas Lonnie Parkpic.twitter.com/GG7sZ4yfQa— Ricky Kej (@rickykej)February 6, 2023
Just won my 3rd Grammy Award. Extremely grateful, am speechless! I dedicate this Award to India.@copelandmusicHerbert Waltl Eric Schilling Vanil Veigas Lonnie Parkpic.twitter.com/GG7sZ4yfQa
ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ದೊರೆತ ಬಗ್ಗೆ ಟ್ವಿಟರ್​ನಲ್ಲಿ ಸಂತಸ ಹಂಚಿಕೊಂಡಿರುವ ರಿಕ್ಕಿ ಕೇಜ್, ಪ್ರಶಸ್ತಿ ಹಾಗೂ ಗೌರವವನ್ನು ದೇಶಕ್ಕೆ ಅರ್ಪಿಸುತ್ತಿದ್ದೇನೆ. ಪ್ರತಿಷ್ಠಿತ ಪ್ರಶಸ್ತಿಯನ್ನು ಮತ್ತೊಮ್ಮೆ ಪಡೆದುಕೊಂಡಿರುವುದಕ್ಕೆ ಸಂತಸವಾಗುತ್ತಿದೆ. ಈ ಮೂಲಕ ದೇಶದ ಪ್ರತಿಷ್ಠೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅವಕಾಶ ಒದಗಿ ಬಂದಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 10 =
Remember me
