ನವದೆಹಲಿ: ಬಾಲಿವುಡ್​ನ ಹಿರಿಯ ನಟ ರಿಷಿಕಪೂರ್​ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಪ್ರಯಾಣಿಸಲು ಅವರ ಪುತ್ರಿ ರಿದ್ಧಿಮಾ ಕಪೂರ್​ ಅವರಿಗೆ ವಿಶೇಷ ಅನುಮತಿ ದೊರೆತಿದೆ.ಎರಡು ವರ್ಷಕ್ಕೂ ಹೆಚ್ಚುಕಾಲ ಕ್ಯಾನ್ಸರ್​ನೊಂದಿಗೆ ಸೆಣೆಸಿದ ಹಿರಿಯ ನಟ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಇವರು ತಮ್ಮ
ತಂದೆಯಾಗಿರುವ ಕಾರಣ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಾ ಕಪೂರ್​ ಅವರಿಗೆ ಗುರುವಾರ ಬೆಳಗ್ಗೆ ವಿಶೇಷ ಅನುಮತಿ ದೊರೆತಿತ್ತು.
ಅದರಂತೆ ಪತಿ ಹಾಗೂ ಪುತ್ರಿಯೊಂದಿಗೆ ದೆಹಲಿಯಲ್ಲಿ ವಾಸವಾಗಿರುವ ರಿದ್ಧಿಮಾ ರಸ್ತೆ ಮೂಲಕ ಮುಂಬೈಗೆ ತೆರಳಬಹುದಿತ್ತು. ಈ ವಿಷಯವನ್ನು ಖಚಿತಪಡಿಸಿದ್ದ ದೆಹಲಿಯ ಪೊಲೀಸ್​ನ ಆಗ್ನೇಯ ವಿಭಾಗದ ಡಿಸಿಪಿ ಆರ್​.ಪಿ. ಮೀನಾ, ರಸ್ತೆ ಮೂಲಕ ಮುಂಬೈಗೆ ತೆರಳಲು ರಿದ್ಧಿಮಾ ಸೇರಿ ಐವರಿಗೆ ವಿಶೇಷ ಅನುಮತಿ ನೀಡಲಾಗಿದೆ. ಅಗತ್ಯವಾದ ಪಾಸ್​ ಅನ್ನು ಕೂಡ ಅವರಿಗೆ ಒದಗಿಸಲಾಗಿದೆ ಎಂದು ಹೇಳಿದ್ದರು.ಆದರೆ, ರಿಷಿ ಕಪೂರ್​ ಅವರ ಅಂತ್ಯಸಂಸ್ಕಾರ ಗುರುವಾರ ಸಂಜೆಯೇ ನಿಗದಿಯಾಗಿರುವ ಕಾರಣ, ಅಷ್ಟರಲ್ಲಿ ಮುಂಬೈ ತಲುಪಲು ರಿದ್ಧಿಮಾ ಅವರಿಗೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಇದೀಗ ವಿಮಾನದಲ್ಲಿ ಮುಂಬೈಗೆ ತೆರಳಲು ಅವರಿಗೆ ಅವಕಾಶ ನೀಡಲಾಗಿದೆ.
ಅಪ್ಪನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಗೆ ಸಿಕ್ಕಿತು ಸ್ಪೆಶಲ್​ ಪರ್ಮಿಷನ್​, ರಸ್ತೆ ಬದಲು ವಿಮಾನದಲ್ಲೇ ಪ್ರಯಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
