ಹೈದರಾಬಾದ್: ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಬಸ್ ಮತ್ತು ಮೆಟ್ರೋವನ್ನು ತೆಗೆದುಕೊಳ್ಳುತ್ತೇವೆ. ಕೆಲವೊಮ್ಮೆ ಉಬರ್ ಮತ್ತು ರಾಪಿಡೋದಂತಹ ಸಾರಿಗೆ ಸೇವಾ ಆಪ್​ಗಳ ಬಳಕೆ ಮಾಡುತ್ತೇವೆ. ಗ್ರಾಹಕನಿಂದ ಸಂಕಷ್ಟಕ್ಕೆ ಸಿಲುಕಿದ್ದ ರ‍್ಯಾಪಿಡೋ ಸಿಬ್ಬಂದಿಯ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ಪ್ರಸ್ತುತ, ನಗರದ ಬಹುತೇಕ ಉದ್ಯೋಗಿಗಳು, ತಮ್ಮ ಸ್ಥಳಗಳನ್ನು ತಲುಪಲು ಉಬರ್ ಮತ್ತು ರಾಪಿಡೋದಂತಹ ಸಾರಿಗೆ ಸೇವಾ ಆಪ್​ಗಳನ್ನು ಬಳಸುತ್ತಾರೆ. ಈ ಕ್ರಮದಲ್ಲಿ ಹಲವು ಸಂದರ್ಭಗಳಲ್ಲಿ ವಾಹನ ಸವಾರರು ಹಾಗೂ ಕೆಲವೊಮ್ಮೆ ಗ್ರಾಹಕರು ಹಲವು ತೊಂದರೆ ಅನುಭವಿಸುವಂತಾಗಿದೆ.ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
@rapidobikeapp@Olacabs@UberIN_Support@hyderabad#FunFact#rapido#bike#TRENDINGJust for fun.pic.twitter.com/twFRRP6bl5
— Saleem (@Saleemammu)February 10, 2024

ವ್ಯಕ್ತಿಯೊಬ್ಬ ರ‍್ಯಾಪಿಡೋ ಆ್ಯಪ್‌ನಲ್ಲಿ ಬೈಕ್ ಬುಕ್ ಮಾಡಿದ್ದಾನೆ. ದಾರಿ ಮಧ್ಯೆ ಪೆಟ್ರೋಲ್ ಖಾಲಿಯಾದ ಕಾರಣ ಬೈಕ್ ನಿಲ್ಲಿಸಿದ್ದಾರೆ. ಅವರು ಗ್ರಾಹಕರನ್ನು ಹತ್ತಿರದ ಪೆಟ್ರೋಲ್ ಬಂಕ್‌ಗೆ ನಡೆದುಕೊಂಡು ಹೋಗುವಂತೆ ಹೇಳಿದರು. ಆದರೆ ಗ್ರಾಹಕ ನಿರಾಕರಿಸಿದ್ದಾನೆ. ಏನೂ ಮಾಡಲಾಗದೆ ರ‍್ಯಾಪಿಡೋ ಚಾಲಕ ಗ್ರಾಹಕರನ್ನು ಬೈಕ್ ಮೇಲೆ ಕೂರಿಸಿಕೊಂಡು ಬೈಕ್ ತಳ್ಳಬೇಕಾಯಿತು. ಈ ವೇಳೆ ಆಟೋದಲ್ಲಿ ತೆರಳುತ್ತಿದ್ದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ರ‍್ಯಾಪಿಡೋ ಚಾಲಕನ ಕಷ್ಟ ನೋಡಿ ಅಯ್ಯೋ ಎನ್ನುತ್ತಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಈ ರೀತಿ ಮಾಡಿದ್ದು ತಪ್ಪು ಎಂದು ಗ್ರಾಹಕರ ಮೇಲೆ ಕಿಡಿಕಾರಿದ್ದಾರೆ. ಇನ್ನು ಕೆಲವು ನೆಟಿಜನ್‌ಗಳು ಗ್ರಾಹಕರಿಗೆ ಏನಾದರೂ ಆರೋಗ್ಯ ಸಮಸ್ಯೆ ಇದೆಯೇ ಅಥವಾ ನಡೆಯಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಮಾಡಿದ್ದಾರೆ.
ಕಿಸ್ ಸ್ಟ್ರೀಟ್; ಈ ಬೀದಿಯಲ್ಲಿ ಸಿಗುತ್ತೆ ಸಿಹಿ ಮುತ್ತು..

“ಬೆಳ್ಳುಳ್ಳಿ ಕಬಾಬ್” ಟ್ರೆಂಡ್ ಬೆನ್ನಲ್ಲೇ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ; ಮೊಯೆ..ಮೊಯೆ ಎಂದ ಗ್ರಾಹಕರು

ರಸ್ತೆ ಅಪಘಾತದಲ್ಲಿ ಯುವಕ ಸಾವು; ಡಿಕ್ಕಿ ಹೊಡೆದ ಸವಾರ ಕೂಡಾ ಪಶ್ಚಾತ್ತಾಪದಿಂದ ಪ್ರಾಣ ಬಿಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + twenty =
Remember me
