ಪಶ್ಚಿಮ ಬಂಗಾಳ:ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ಹುತಾತ್ಮರಾದ ಯೋಧರೊಬ್ಬರ ಬಗ್ಗೆ ದುಃಖತಪ್ತ ಕುಟುಂಬವು, ಇದು ಹತ್ಯೆ ಎಂದು ಹೇಳಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಬೆನ್ನಲ್ಲೇ ಇದೀಗ ಸೇನೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಇದನ್ನೂ ಓದಿ:ತನಿಖಾ ಸಂಸ್ಥೆಗಳು ಈಗಾಗಲೇ ಉತ್ತರಿಸಿರುವ ಪ್ರಶ್ನೆಗಳನ್ನೇ ಪದೇ ಪದೇ ಕೇಳುತ್ತಿವೆ: ಅಭಿಷೇಕ್ ಬ್ಯಾನರ್ಜಿ ಗರಂ
ಜಮ್ಮುವಿನ ಅಖ್ನೂರ್ ಸೆಕ್ಟರ್‌ನ ನಿವಾಸಿ ರೈಫಲ್‌ಮ್ಯಾನ್ ಅಮಿತ್ ಸಿಂಗ್, ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಂಡಿದ್ದರು. ಸೆಪ್ಟೆಂಬರ್ 15 ರಂದು ಸಿಲಿಗುರಿ ಬಳಿಯ ಉತ್ತರ ಬಂಗಾಳದ ಸುಕ್ನಾದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ಹೇಳಿದ್ದಾರೆ. ಆದ್ರೆ, ಇದನ್ನು ವಿರೋಧಿಸಿದ ಕುಟುಂಬಸ್ಥರು ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆಯ ಕುರಿತು ಶೀಘ್ರವೇ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಯೋಧನ ಅಂತಿಮ ಸಂಸ್ಕಾರವನ್ನು ಭಾನುವಾರ ಅವರ ಜೂರಿಯನ್ ಗ್ರಾಮದಲ್ಲಿ ಸೇನಾ ಗೌರವಗಳೊಂದಿಗೆ ನೆರವೇರಿಸಲಾಯಿತು. ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕುಟುಂಬವು ಗುರುವಾರ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದೆ.
ಇದನ್ನೂ ಓದಿ:ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಉಗ್ರನಿಗೆ ಹೇಳಿಕೊಡ್ತಿದ್ದ ಜಮ್ಮು ಕಾಶ್ಮೀರದ ಡೆಪ್ಯುಟಿ ಎಸ್​ಪಿ ಅರೆಸ್ಟ್​
“ರೈಫಲ್‌ಮ್ಯಾನ್ ಅಮಿತ್ ಸಿಂಗ್ ಅವರ ದುರದೃಷ್ಟಕರ ನಿಧನಕ್ಕೆ ಭಾರತೀಯ ಸೇನೆಯು ವಿಷಾದಿಸಿದೆ. ಈ ದುಃಖದ ಸಮಯದಲ್ಲಿ ನಾವು ಸೈನಿಕನ ಕುಟುಂಬದೊಂದಿಗೆ ನಿಲ್ಲುತ್ತೇವೆ. ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ಸಿಲಿಗುರಿ ಮೂಲದ ತ್ರಿಶಕ್ತಿ ಕಾರ್ಪ್ಸ್ ಭಾರತೀಯ ಸೇನೆ ಟ್ವಿಟರ್​ನಲ್ಲಿ ಬರೆದು ಪೋಸ್ಟ್​ ಮಾಡಿದೆ,(ಏಜೆನ್ಸೀಸ್).
MLA ಟಿಕೆಟ್​ ವಂಚನೆ ಕೇಸ್​: ಸಿಸಿಬಿ ಅಧಿಕಾರಗಳ ಮುಂದೆ ಕಣ್ಣೀರಿಟ್ಟು ಕೊನೆಗೂ ಸತ್ಯ ಬಾಯ್ಬಿಟ್ಟ ಚೈತ್ರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
