ಪಂಚಸೂತ್ರ
ಗಡಿಯಲ್ಲಿ ಉದ್ಭವಿಸಿರುವ ಸಮಸ್ಯೆಯ ಇತ್ಯರ್ಥಕ್ಕೆ ಭಾರತ ಮತ್ತು ಚೀನಾ ಐದಂಶಗಳ ಸೂತ್ರಕ್ಕೆ ಸಮ್ಮತಿಸಿವೆ.
1ಭಾರತ-ಚೀನಾ ಸಂಬಂಧಗಳ ಬೆಳವಣಿಗೆಗೆ ಉಭಯ ಕಡೆಗಳವರು ನಾಯಕರಿಂದ ಮಾರ್ಗದರ್ಶನ ಪಡೆಯಬೇಕು. ಭಿನ್ನಾಭಿಪ್ರಾಯಗಳು ವಿವಾದವಾಗಿ ಪರಿವರ್ತನೆಯಾಗಲು ಬಿಡಬಾರದು.
2ಪ್ರಸ್ತುತ ಬಿಕ್ಕಟ್ಟು ಎರಡೂ ಕಡೆಗಳ ಹಿತಕ್ಕೆ ಒಳ್ಳೆಯದಲ್ಲ. ಎರಡೂ ಸೇನೆಗಳು ಮಾತುಕತೆ ಮುಂದುವರಿಸಬೇಕು, ಶೀಘ್ರ ಪಡೆಗಳನ್ನು ವಾಪಸ್ ಪಡೆಯಬೇಕು, ಸೂಕ್ತ ಅಂತರ ಕಾಯ್ದುಕೊಂಡು ಉದ್ವಿಗ್ನತೆ ಕಡಿಮೆ ಮಾಡಬೇಕು.
3ಗಡಿ ವ್ಯವಹಾರಗಳ ಕುರಿತ ಹಾಲಿ ಎಲ್ಲ ಒಪ್ಪಂದಗಳು ಹಾಗೂ ಶಿಷ್ಟಾಚಾರ ಪಾಲಿಸಬೇಕು. ಪರಿಸ್ಥಿತಿ ಹದಗೆಡುವ ಯಾವುದೇ ಕ್ರಮಕ್ಕೆ ಮುಂದಾಗಬಾರದು.
4ವಿಶೇಷ ಪ್ರತಿನಿಧಿಗಳ ಮೂಲಕ ಸಂವಹನ ಮುಂದುವರಿಸಬೇಕು. ಸಮಾಲೋಚನೆ ಮತ್ತು ಸಮನ್ವಯ ಕುರಿತ ಕಾರ್ಯತಂತ್ರ ವ್ಯವಸ್ಥೆಯ ಸಭೆಗಳನ್ನು ನಡೆಸಬೇಕು.
5ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ, ಎರಡೂ ಕಡೆಗಳು ವಿಶ್ವಾಸವರ್ಧನೆಯ ಕ್ರಮಗಳನ್ನು ತ್ವರಿತವಾಗಿ ರೂಪಿಸಬೇಕು. ಗಡಿ ಭಾಗಗಳಲ್ಲಿ ಶಾಂತಿ ಮತ್ತು ಸ್ಥಿರತೆ ಹೆಚ್ಚಿಸಬೇಕು.
ನವದೆಹಲಿ:ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾ ಸೈನಿಕರು ಜಮಾವಣೆಗೊಳ್ಳುತ್ತಿರುವುದು ತುಂಬ ಕಳವಳಕಾರಿ ವಿಚಾರ ಎಂದು ಮಾಸ್ಕೋದಲ್ಲಿ ಚೀನಿ ವಿದೇಶಾಂಗ ಸಚಿವ ವಾಂಗ್ ಯೀ ಜತೆಗಿನ ಮಾತುಕತೆ ಸಮಯದಲ್ಲಿ ಎಸ್. ಜೈಶಂಕರ್ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ:ಜಿಎಸ್​ಟಿ ನಷ್ಟಭರ್ತಿಗೆ ಆರ್​ಬಿಐನಿಂದ ಸಾಲ: ಕೇಂದ್ರ ಕೊಟ್ಟ ಮೊದಲ ಆಯ್ಕೆಗೆ ಜೈಕಾರ
ಚೀನಾದ ಮುಂಚೂಣಿ ಪಡೆಗಳು ಎಲ್‌ಎಸಿ ಉದ್ದಕ್ಕೂ ನಡೆಸುತ್ತಿರುವ ಪ್ರಚೋದನಕಾರಿ ಕೃತ್ಯಗಳು ಆ ದೇಶ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳನ್ನು ಗೌರವಿಸುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಭಾರತ ಎಲ್ಲ ಒಪ್ಪಂದಗಳು ಮತ್ತು ಶಿಷ್ಟಾಚಾರಗಳನ್ನು ಅನುಸರಿಸುತ್ತಿದೆ ಎಂದು ಜೈಶಂಕರ್ ಹೇಳಿದರು.
ಇದನ್ನೂ ಓದಿ:ಕೋವಿಡ್ 19 ರೋಗಿಗಳಿಗೆ ಆ್ಯಂಬುಲೆನ್ಸ್ ಶುಲ್ಕ ನಿಗದಿ ಮಾಡಿ- ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ
ಇಷ್ಟು ದೊಡ್ಡ ಪ್ರಮಾಣದಲ್ಲಿ ಚೀನಿ ಪಡೆಗಳು ಜಮಾವಣೆಗೊಂಡಿರುವುದು 1993 ಮತ್ತು 1996ರ ಒಪ್ಪಂದಗಳಿಗೆ ವಿರುದ್ಧವಾದುದಾಗಿದೆ. ಅದರಿಂದಾಗಿ ಎಲ್‌ಎಸಿಯಲ್ಲಿ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತೆ ಕವಲು ದಾರಿಯಲ್ಲಿದೆ ಎಂದು ಅವರು ವಿಶ್ಲೇಷಿಸಿದರು. ಸಂಘರ್ಷದ ಎಲ್ಲ ಸ್ಥಳಗಳಿಂದ ಸೈನಿಕರನ್ನು ಸಂಪೂರ್ಣವಾಗಿ ಹಿಂದೆ ಪಡೆಯುವುದೇ ‘ಭವಿಷ್ಯದಲ್ಲಿ ಯಾವುದೇ ಅನಪೇಕ್ಷಿತ ಘಟನೆ ತಡೆಯಲು ಇರುವ ಏಕೈಕ ಮಾರ್ಗ’ ಎಂಬುದು ಭಾರತದ ಸ್ಪಷ್ಟ ನಿಲುವು.
ಇದನ್ನೂ ಓದಿ:ಗಾಂಜಾ ವ್ಯಸನಿಗಳ ಚಳಿ ಬಿಡಿಸಿದ ಪೊಲೀಸರು, ಉಡುಪಿಯಲ್ಲಿ 10 ಮಂದಿ ವಶಕ್ಕೆ
ಈ ಮಧ್ಯೆ, ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿ, ಕೆಲವು ನಿರ್ದಿಷ್ಟ ವಿಷಯಗಳ ಇತ್ಯರ್ಥಕ್ಕಾಗಿ ಮಾತುಕತೆ ನಡೆಸುವುದಕ್ಕೆ ತನ್ನ ಸಂಪೂರ್ಣ ಬೆಂಲವಿದೆ. ಈಗ ಬೇಕಿರುವುದು ಸಹಕಾರವೇ ಹೊರತು ಸಂಘರ್ಷವಲ್ಲ. ಪರಸ್ಪರ ವಿಶ್ವಾಸವೇ ಹೊರತು ಅನುಮಾನವಲ್ಲ ಎಂದು ಹೇಳಿದೆ.
ಕಂಗನಾರನ್ನು ಕರೆದೊಯ್ದ ಇಂಡಿಗೋಗೆ ಡಿಜಿಸಿಎ ನೋಟಿಸ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eleven =
Remember me
